Breaking News
Home / ಆರೋಗ್ಯ / ಅಸಾಧ್ಯ ಹೊಟ್ಟೆನೋವು ನಿವಾರಣೆಗೆ ಹಾಗು ಇನ್ನು ಹಲವು ರೋಗಗಳನ್ನು ಹೋಗಲಾಡಿಸುತ್ತೆ ಈ ನೆಲ್ಲಿಕಾಯಿ..!

ಅಸಾಧ್ಯ ಹೊಟ್ಟೆನೋವು ನಿವಾರಣೆಗೆ ಹಾಗು ಇನ್ನು ಹಲವು ರೋಗಗಳನ್ನು ಹೋಗಲಾಡಿಸುತ್ತೆ ಈ ನೆಲ್ಲಿಕಾಯಿ..!

ಹೌದು ನೆಲ್ಲಿಕಾಯಿಯಲ್ಲಿ ಅಡಗಿದೆ ಹಲವು ರೋಗಗಳನ್ನು ಹೋಗಲಾಡಿಸುವ ಶಕ್ತಿ. ನೆಲ್ಲಿ ಕಾಯಿ ನಮ್ಮ ಆರೋಗ್ಯಕ್ಕೆ ತುಂಬ ಉತ್ತಮವಾದದ್ದು. ಇಲ್ಲಿದೆ ನೋಡಿ ನೆಲ್ಲಿಕಾಯಿ ಪ್ರಯೋಜನ.

ತಲೆ ಸುತ್ತು ನಿವಾರಣೆಗೆ:
ನೆಲ್ಲಿಕಾಯಿ ಚೂರ್ಣ ಮತ್ತು ಕೊತ್ತಂಬರಿ ಸಮ ತೂಕ ರಾತ್ರಿ ನೀರಿನಲ್ಲಿ ನೆನೆ ಹಾಕುವುದು. ಬೆಳಗ್ಗೆ ಚೆನ್ನಾಗಿ ಕಿವುಚಿ ಶೋಧಿಸಿ, ಕಲ್ಲು ಸಕ್ಕರೆ ಪುಡಿ ಸೇರಿಸಿ ಸೇವಿಸುವುದು.

ನಿದ್ರೆ ಬಾರದಿರುವಿಕೆಗೆ:
ಅಜೀರ್ಣವಾಗಿದ್ದರೆ ತಕ್ಕ ಉಪಚಾರ ಮಾಡುವುದು. ಒಂದು ಟೀ ಚಮಚ ನೆಲ್ಲಿಕಾಯಿ ರಸ ಅರ್ಧ ನೆಲ್ಲಿಚೆಟ್ಟಿನ ಚೂರ್ಣಕ್ಕೆ ಸ್ವಲ್ಪ ಜೇನು ಸೇರಿಸಿ ಸೇವಿಸುವುದು ಮತ್ತು ಕೆಂಪು ಕಲ್ಲು ಸಕ್ಕರೆ ಪುಡಿ ಸೇರಿಸಿದ ಹಸುವಿನ ಹಾಲನ್ನು ಕುಡಿಯುವುದು.

ಮೂತ್ರದಲ್ಲಿ ಉರಿ ಮತ್ತು ಮೂತ್ರದ ತಡೆಯ ನಿವಾರಣೆಗೆ:
ದಪ್ಪವಾಗಿರುವ ೫-೬ ಹಸೀ ನೆಲ್ಲಿಕಾಯಿಗಳನ್ನು ತಂದು ಬೀಜಗಳನ್ನು ಬೇರ್ಪಡಿಸಿ ಸ್ವಲ್ಪ ಬೆಚ್ಚಗೆ ಮಾಡಿ, ರಸವನ್ನು ಹಿಂಡಿಕೊಳ್ಳುವುದು. ನಂತರ ರಸವನ್ನು ಬಟ್ಟೆಯಲ್ಲಿ ಸೋಸಿ, ಕಬ್ಬಿನ ಹಾಲಿನಲ್ಲಿ ಹಾಕಿ ಕುಡಿಯುವುದು.

ಅಸಾಧ್ಯ ಹೊಟ್ಟೆನೋವು ನಿವಾರಣೆಗೆ:
ಬೀಜಗಳನ್ನು ಬೇರ್ಪಡಿಸಿದ ಹಸಿ ನೆಲ್ಲಿಕಾಯಿಗಳನ್ನು ನೀರಿನೊಂದಿಗೆ ನುಣ್ಣಗೆ ಅರೆದು ಕಿಬ್ಬೊಟ್ಟೆ ಮತ್ತು ಹೊಕ್ಕಳ ಸುತ್ತ ಲೇಪಿಸುವುದು. ನೆಲ್ಲಿಕಾಯಿ ರಸವನ್ನು ಸಕ್ಕರೆ ಸೇರಿಸಿ ಕುಡಿಯುವುದು.

ಮಧುಮೇಹದ ನಿವಾರಣೆಗೆ:
ನೆಲ್ಲಿ ಚೆಟ್ಟು ಮತ್ತು ನೇರಳೆ ಬೀಜಗಳನ್ನು ಸಮವಾಗಿ ಸೇರಿಸಿ ಕುಟ್ಟಿ ನುಣುಪಾದ ಚೂರ್ಣ ಮಾಡುವುದು. ಅರ್ಧ ಟೀ ಚಮಚ ಚೂರ್ಣವನ್ನು ಮಜ್ಜಿಗೆಯಲ್ಲಿ ಕದಡಿ ಕುಡಿಯುವುದು. ದಿವಸಕ್ಕೆ ಎರಡು ವೇಳೆ.

About admin

Check Also

ಹುಳುಕಡ್ಡಿ ಸಮಸ್ಯೆಗೆ ನೇರಳೆಯಲ್ಲಿ ಅಡಗಿದೆ ಓಷಧಿ ಗುಣಗಳು..!

ನಮಗೆ ಮುಖದಲ್ಲಿ ಅಥವಾ ಮೈ ಕೈ ಮೇಲೆ ಹುಳುಕಡ್ಡಿಯಂತಹ ಸಮಸ್ಯೆ ಬಂದರೆ ಅದು ನಮಗೆ ತುಂಬಾ ಹಿಂಸೆ ಅನ್ನಿಸುತ್ತದೆ ಅದು …

Leave a Reply

Your email address will not be published. Required fields are marked *