Breaking News
Home / ಆರೋಗ್ಯ / ನಿಮ್ಮ ಆರೋಗ್ಯದಲ್ಲಿ ಪುದೀನಾ ಮಹತ್ವ ಪಾತ್ರವಹಿಸುತ್ತದೆ, ಈ ಒಂಬತ್ತು ಕಾಯಿಲೆಗಳಿಂದ ದೂರವಿರುಸುತ್ತದೆ..!

ನಿಮ್ಮ ಆರೋಗ್ಯದಲ್ಲಿ ಪುದೀನಾ ಮಹತ್ವ ಪಾತ್ರವಹಿಸುತ್ತದೆ, ಈ ಒಂಬತ್ತು ಕಾಯಿಲೆಗಳಿಂದ ದೂರವಿರುಸುತ್ತದೆ..!

ಹಲ್ಲು ಮತ್ತು ವಸಡುಗಳು
ಪುದೀನದಿಂದ ಹಲ್ಲು ಮತ್ತು ವಸಡುಗಳು ಗಟ್ಟಿಯಾಗುತ್ತದೆ. ದಂತ ಕ್ಷಯ ತಪ್ಪಿ ಹಲ್ಲುಗಳು ದೀರ್ಘಕಾಲ ಬಾಳಿಕೆ ಬರುತ್ತವೆ. ಅಲ್ದೆಲ ಪುದೀನ ಸೊಪ್ಪನ್ನು ಸೇವನೆ ಮಾಡುವುದರಿಂದ ಫಿಟ್‍ನೆಟ್‍ ಕಾಪಾಡಿಕೊಳ್ಳಬಹುದು. ಪ್ರತಿದಿನವೂ ನಾಲ್ಕೈದು ಪುದೀನ ಎಲೆಗಳನ್ನು ಸೇವಿಸುವುದರಿಂದ ಬಾಯಿಯ ದುರ್ವಾಸನೆ ದೂರ ಮಾಡುತ್ತದೆ.

ಹೊಟ್ಟೆನೋವು
ಅಜೀರ್ಣ ಸಮಸ್ಯೆ,ಗ್ಯಾಸ್ಟ್ರಿಕ್ ಮುಂತಾದ ಹೊಟ್ಟೆಯ ತೊಂದರೆಗಳಿಗೆ ಪುದೀನದ ಬಳಕೆಯು ಅತ್ಯಂತ ಪರಿಣಾಮಕಾರಿಯಗಿದೆ. ಪುದೀನ ಸೊಪ್ಪಿನ ಜೊತೆ ಶುಂಠಿ ಅರೆದು 1 ಚಮಚ ನಿಂಬೆ ರಸ ಬೆರೆಸಿ ಸೇವಿಸುವುದರಿಂದ ಹೊಟ್ಟೆನೋವುಕಡಿಮೆಯಾಗುತ್ತದೆ.

ರಕ್ತದೊತ್ತಡ
ಅತೀ ಹೆಚ್ಚು ಪ್ರಮಾಣದ ಪೊಟ್ಯಾಷಿಯಂ ಅಂಶವನ್ನು ಹೊಂದಿರುವ ಪುದೀನವು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಅದರಲ್ಲೂ ಪುದೀನವು ಸ್ನಾಯುಗಳನ್ನು ಸಡಿಲಗೊಳಿಸುವ ವಿಶೇಷ ಗುಣವನ್ನು ಹೊಂದಿದೆ.

ಗರ್ಭಿಣಿಯರಿಗೆ
ಮುಟ್ಟಿನ ಸಮಯದಲ್ಲಿ ತೊಂದರೆಯಾಗುವಂತದ್ದು, ನೋವಾಗುವಂತದ್ದು, ಗರ್ಭಿಣಿಯರಲ್ಲಿ ಹಾಗೂ ಬಾಣಂತಿಯರಲ್ಲಿ ಆಗುವಂತಹ ಹಲವಾರು ಸಮಸ್ಯೆಗಳಿಗೆ ಪುದೀನವು ರಾಮಬಾಣದಂತೆ ಕೆಲಸ ಮಾಡುತ್ತದೆ.

ಮೊಡವೆಗಳು
ತೊಳೆದ ಪುದೀನ ಎಲೆಗಳನ್ನು ಪೇಸ್ಟ ಮಾಡಿಕೊಂಡು ಅದಕ್ಕೆ ಒಂದು ಚಿಟಿಕೆ ಕಸ್ತೂರಿ ಅರಿಶಿಣವನ್ನು ಬೆರೆಸಿ ಸರಿಯಾಗಿ ಮಿಶ್ರಣಮಾಡಿಕೊಳ್ಳಬೇಕು. ಇದನ್ನು ಹಾರ್ವೆನ್​ಗಳ ವ್ಯತ್ಯಾಸದಿಂದ ಉಂಟಾದ ಮೊಡವೆಗಳಮೇಲೆ ಲೇಪಿಸಿಕೊಂಡರೆ ಮೊಡವೆಗಳು ಕಡಿಮೆಯಾಗುವುದಲ್ಲದೇ ಕಲೆಗಳೂ ಸಹ ಮಾಯವಾಗುತ್ತದೆ.

ಮಕ್ಕಳಲ್ಲಿ ಶೀತ
ಪೇಸ್ಟ ಮಾಡಿದ ಪುದೀನವನ್ನು ಹಾಗೂ ಪಚ್ಚಕರ್ಪೂರವನ್ನು ಹಾಕಬೇಕು. ಕರ್ಪೂರವು ಕರಗಿದ ನಂತರದಲ್ಲಿ ಅದಕ್ಕೆ ಸ್ವಲ್ಪ ಅರಿಶಿಣವನ್ನು ಹಾಕಿ ಮಿಶ್ರಣಮಾಡಬೇಕು. ಹೀಗೆ ತಯಾರಾದ ಎಣ್ಣೆಯನ್ನು ಮಕ್ಕಳಲ್ಲಿ ಶೀತ, ನೆಗಡಿ, ಕೆಮ್ಮು ಉಂಟಾದ ಸಂದರ್ಭದಲ್ಲಿ ಎದೆಯ ಭಾಗಕ್ಕೆ, ಬೆನ್ನಿನ ಭಾಗಕ್ಕೆ, ಹಣೆಯಮೇಲೆ ಹಚ್ಚಿಕೊಂಡಾಗ ತಕ್ಷಣ ಉಪಶಮನವಾಗುತ್ತದೆ.

ಗಂಟಲು ನೋವು
ಎರಡು ಚಮಚ ಪುದೀನ ರಸಕ್ಕೆ ಸ್ವಲ್ಪ ಕೆಂಪು ಕಲ್ಲುಸಕ್ಕರೆ, 2-3 ಕಾಳುಮೆಣಸಿನ ಪುಡಿ, ಅರ್ಧ ಚಮಚ ಒಣಶುಂಠಿ ಪುಡಿ ಬೆರಸಿ ನಂತರ ನೀರು ಹಾಕಿ ಕುಡಿದರೆ ಬಿಕ್ಕಳಿಕೆ ಸಮಸ್ಯೆ ಕಡಿಮೆಯಾಗುತ್ತದೆ. 2 ಚಮಚ ಪುದೀನ ಎಲೆ ರಸಕ್ಕೆ ಚಿಟಕೆ ಉಪ್ಪು,ಅರ್ಧ ಚಮಚ ಕಾಳು ಮೆಣಸಿನ ಪುಡಿ ಹಾಕಿ ಕಷಾಯ ಕುಡಿಯುವುದರಿಂದ ಗಂಟಲು ನೋವು ಕಡಿಮೆಯಾಗುತ್ತದೆ. ಐದಾರು ಪುದೀನ ಎಲೆಗಳನ್ನು ನಿತ್ಯ ಜಗಿದು ತಿನ್ನುವುದರಿಂದ ಬಾಯಿಯ ದುರ್ಗಂಧ ಇರುವುದಿಲ್ಲ.

ಕೆಮ್ಮು
ನೀವು ಕೆಮ್ಮಿನಿಂದ ಬಳಲುತ್ತಿದ್ದರೆ, ನೀರನ್ನು ಬೆಚ್ಚಗೆ ಬೆರೆಸಲು ಪುದೀನ ಸೊಪ್ಪನ್ನು ಹಾಕಿ ಅದರ ಶಾಖವನ್ನು ತೆಗೆದುಕೊಳ್ಳುವುದರಿಂದ ನಿಮ್ಮ ಗಂಟಲು ಮತ್ತು ಮೂಗುಗಳ ಮೂಲಕ ಹಾದು ಹೋಗುತ್ತದೆ. ಪುದೀನ ಎಲೆಗಳೊಂದಿಗೆ ಸ್ವಲ್ಪ ಗರಿಕೆ, ಶುಂಠಿ ಹಾಗೂ ತುಳಸಿ ಎಲೆಗಳನ್ನು ಅರೆದು ಸೇವಿಸಿದರೆ ಕೆಮ್ಮು ನಿವಾರಣೆಯಾಗುತ್ತದೆ.

ಜೀರ್ಣಶಕ್ತಿ
ಪುದೀನ ಸೊಪ್ಪು/ರಸ ಸೇವನೆಯಿಂದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ಜೀರ್ಣಶಕ್ತಿ ಹೆಚ್ಚಾಗುತ್ತದೆ. ಪುದೀನ ಎಲೆ ತಿನ್ನುವುದರಿಂದ ನಾಲಿಗೆ ರುಚಿ ಗ್ರಹಣ ಶಕ್ತಿ ಹೆಚ್ಚಾಗುತ್ತದೆ. ಇದು ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯ ಶಕ್ತಿಯನ್ನು ಹೆಚ್ಚಿಸುತ್ತದೆ. ಗಂಟಲು ಒಡೆದಿದ್ದಾಗ ಪುದೀನ ಸೊಪ್ಪಿನ ಕಷಾಯಕ್ಕೆ ಉಪ್ಪು ಸೇರಿಸಿ ಬಾಯಿ ಮುಕ್ಕಳಿಸಿದರೆ ಉತ್ತಮ ಪರಿಹಾರ ಕಂಡುಬರುತ್ತದೆ. ಭಾಷಣಕಾರರಿಗೆ, ಸಂಗೀತಗಾರರಿಗೆ, ಶಿಕ್ಷಕ/ಉಪನ್ಯಾಸಕರಿಗೆ ಒಂದು ವರಪ್ರಸಾದ.

About Karnataka Express

Check Also

ಹುಳುಕಡ್ಡಿ ಸಮಸ್ಯೆಗೆ ನೇರಳೆಯಲ್ಲಿ ಅಡಗಿದೆ ಓಷಧಿ ಗುಣಗಳು..!

ನಮಗೆ ಮುಖದಲ್ಲಿ ಅಥವಾ ಮೈ ಕೈ ಮೇಲೆ ಹುಳುಕಡ್ಡಿಯಂತಹ ಸಮಸ್ಯೆ ಬಂದರೆ ಅದು ನಮಗೆ ತುಂಬಾ ಹಿಂಸೆ ಅನ್ನಿಸುತ್ತದೆ ಅದು …

Leave a Reply

Your email address will not be published. Required fields are marked *