Breaking News
Home / ಇತ್ತೀಚಿನ ಸುದ್ದಿಗಳು / ದೇಶದಲ್ಲೇ ಅತಿ ಹೆಚ್ಚು ಸಂಬಳ ನೀಡುವ ನಗರಗಳಲ್ಲಿ ಬೆಂಗಳೂರಿಗೆ ಎಷ್ಟನೇ ಸ್ಥಾನ ಗೊತ್ತಾ..!

ದೇಶದಲ್ಲೇ ಅತಿ ಹೆಚ್ಚು ಸಂಬಳ ನೀಡುವ ನಗರಗಳಲ್ಲಿ ಬೆಂಗಳೂರಿಗೆ ಎಷ್ಟನೇ ಸ್ಥಾನ ಗೊತ್ತಾ..!

ರಾರ‍ಯಂಡ್‌ಸ್ಟಾಡ್‌ ಇಂಡಿಯಾ ಎಂಬ ಸಂಶೋಧನಾ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ನೌಕರ ವರ್ಗಕ್ಕೆ ಬೆಂಗಳೂರು ನಮ್ಮ ದೇಶದಲ್ಲೇ ಅತಿ ಹೆಚ್ಚು ವೇತನ ಪಾವತಿಸುವ ನಗರ ಎಂಬ ಸಂಗತಿ ಬೆಳಕಿಗೆ ಬಂದಿದೆ. ಬೆಂಗಳೂರಿನ ಕಂಪನಿಗಳು ಸರಾಸರಿ ಒಬ್ಬ ನೌಕರನಿಗೆ ವರ್ಷವೊಂದಕ್ಕೆ 10.8 ಲಕ್ಷ ರು. ವೇತನ ಪಾವತಿಸುತ್ತವೆ. ಅಂದರೆ, ತಿಂಗಳಿಗೆ 90 ಸಾವಿರ ರು. ಸಂಬಳ ನೀಡುತ್ತವೆ. ಇದರಲ್ಲೂ ಅತಿ ಹೆಚ್ಚು ಸಂಬಳ ಇರುವುದು ಫಾರ್ಮಾ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಸಂಸ್ಥೆಗಳಲ್ಲಿ ಎಂದೂ ಸಮೀಕ್ಷೆ ಹೇಳಿದೆ.

ಬೆಂಗಳೂರಿನ ನಂತರ ದೇಶದಲ್ಲಿ ಅತಿ ಹೆಚ್ಚು ಸಂಬಳ ನೀಡುವ ನಗರಗಳ ಪಟ್ಟಿಯಲ್ಲಿ ಕ್ರಮವಾಗಿ ಪುಣೆ, ದೆಹಲಿ, ಮುಂಬೈ, ಚೆನ್ನೈ, ಹೈದರಾಬಾದ್‌ ಹಾಗೂ ಕೊಲ್ಕತ್ತಾ ಇವೆ. ಇನ್ನು, ಬೆಂಗಳೂರಷ್ಟೇ ಅಲ್ಲ, ದೇಶಾದ್ಯಂತ ಫಾರ್ಮಾ ಹಾಗೂ ಹೆಲ್ತ್‌ಕೇರ್‌ ಕಂಪನಿಗಳು ಸರಾಸರಿ ಒಬ್ಬ ನೌಕರನಿಗೆ ವರ್ಷಕ್ಕೆ 9.6 ಲಕ್ಷ ರು. ಸಂಬಳ ನೀಡುವುದರೊಂದಿಗೆ ಅತಿ ಹೆಚ್ಚು ಸಂಬಳ ನೀಡುವ ಕಂಪನಿಗಳು ಎನ್ನಿಸಿಕೊಂಡಿವೆ. ಪ್ರೊಫೆಷನಲ್‌ ಸೇವೆ ಒದಗಿಸುವ ಕಂಪನಿಗಳು ಎರಡನೇ ಅತಿಹೆಚ್ಚು ಸಂಬಳ ಪಾವತಿಸುತ್ತವೆ. ಅಲ್ಲಿ ವರ್ಷಕ್ಕೆ 9.4 ಲಕ್ಷ ರು. ಸಂಬಳವಿದೆ. ಮೂರನೇ ಸ್ಥಾನದಲ್ಲಿ ಎಫ್‌ಎಂಸಿಜಿ (ವೇಗವಾಗಿ ಮಾರಾಟವಾಗುವ ಉತ್ಪನ್ನಗಳ ಕಂಪನಿ) ವರ್ಷಕ್ಕೆ 9.2 ಲಕ್ಷ ಸಂಬಳ ನೀಡುತ್ತಿದೆ.

ಸಾಫ್ಟ್‌ವೇರ್‌ ಕಂಪನಿಗಳು ಅತಿ ಹೆಚ್ಚು ಸಂಬಳ ನೀಡುತ್ತವೆ ಎಂಬ ನಂಬಿಕೆಯನ್ನು ಈ ಸಮೀಕ್ಷೆ ಹುಸಿಯಾಗಿಸಿದೆ. ದೇಶಾದ್ಯಂತ ಸಾಫ್ಟ್‌ವೇರ್‌ ಕಂಪನಿಗಳು ವರ್ಷಕ್ಕೆ ಒಬ್ಬ ನೌಕರನಿಗೆ ಸರಾಸರಿ 9.1 ಲಕ್ಷ ರು. ವೇತನ ನೀಡುವುದರೊಂದಿಗೆ ನಾಲ್ಕನೇ ಸ್ಥಾನ ಪಡೆದಿವೆ. ಐದನೇ ಸ್ಥಾನದಲ್ಲಿ ರಿಯಲ್‌ ಎಸ್ಟೇಟ್‌ ಕಂಪನಿಗಳಿವೆ.

About Karnataka Express

Check Also

ಆ್ಯಕ್ಷನ್ ಪ್ರಿನ್ಸ್ ನಿಶ್ಚಿತಾರ್ಥ ಹುಡುಗಿ ಯಾರು ಗೊತ್ತಾ..!

ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ಸರ್ಜಾ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ. ಧ್ರುವ ಸರ್ಜಾ ಲವ್ ಕಮ್ ಅರೇಂಜ್ಡ್ …

Leave a Reply

Your email address will not be published. Required fields are marked *