Breaking News
Home / ಇತ್ತೀಚಿನ ಸುದ್ದಿಗಳು / ನೀವು ಆನ್‍ಲೈನ್‍ನಲ್ಲಿ ರೈಲ್ವೇ ಟಿಕೆಟ್ ಬುಕ್ ಮಾಡ್ತೀರಾ ಹಾಗಾದ್ರೆ ಖಂಡಿತ ಈ ಸುದ್ದಿ ನೋಡಲೇಬೇಕು..!

ನೀವು ಆನ್‍ಲೈನ್‍ನಲ್ಲಿ ರೈಲ್ವೇ ಟಿಕೆಟ್ ಬುಕ್ ಮಾಡ್ತೀರಾ ಹಾಗಾದ್ರೆ ಖಂಡಿತ ಈ ಸುದ್ದಿ ನೋಡಲೇಬೇಕು..!

ದಿನದಿನೇ ಆನ್‍ಲೈನ್ ಟಿಕೆಟ್ ಬುಕ್ಕಿಂಗ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆನ್‍ಲೈನ್ ಮೂಲಕ ದುರುಪಯೋಗ ಮಾಡುತ್ತಿರುವುದು ಹೆಚ್ಚಾಗಿದೆ. ಆದ್ದರಿಂದ ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸುವ ಗುರಿ ಮತ್ತು ವಿವಿಧ ಸಮಸ್ಯೆಗಳನ್ನು ಬಗೆಹರಿಸುವ ದೃಷ್ಟಿಕೋನದಿಂದ ಭಾರತೀಯ ರೈಲ್ವೇ ಹೊಸ ನಿಯಮಗಳನ್ನು ಜಾರಿ ಮಾಡಿದೆ.

ಐಆರ್ ಸಿಟಿಸಿ ಪೋರ್ಟಲ್ ಮೂಲಕ 120 ದಿನಗಳವರೆಗೆ ಪ್ರಯಾಣಿಕರು ತನ್ನ ಟಿಕೆಟ್ ಗಳನ್ನು ಬುಕ್ ಮಾಡಲು ಅನುಮತಿ ನೀಡಲಾಗುತ್ತದೆ. ಪ್ರಯಾಣದ ದಿನಾಂಕ (ಮೂಲ ರೈಲು ನಿಲ್ದಾಣ) 120 ದಿನಗಳು ಮುಗಿದ ನಂತರ ಪ್ರಯಾಣಿಕರು ಟಿಕೆಟ್ ಬುಕ್ ಮಾಡಿದರೆ ಅದನ್ನು ಪರಿಗಣಿಸಲಾಗುವುದಿಲ್ಲ ಎಂದು ರಾಜ್ಯ ರೈಲ್ವೇ ಸಚಿವ ರಾಜೇನ್ ಗೋಹೈನ್ ಇತ್ತೀಚೆಗೆ ಲೋಕಸಭೆಯಲ್ಲಿ ಲಿಖಿತ ರೂಪದಲ್ಲಿ ಈ ಪ್ರಕಟಣೆಯನ್ನು ಮಾಡಿದ್ದಾರೆ.

ಪ್ರತಿದಿನ ಅಂದಾಜು ಸುಮಾರು 2 ಕೋಟಿ ಜನರು ಭಾರತೀಯ ರೈಲಿನಲ್ಲಿ ಪ್ರಯಾಣಿಸುತ್ತಿದ್ದು, ಟಿಕೆಟ್ ದುರುಪಯೋಗವನ್ನು ತಡೆಗಟ್ಟಲು ಭಾರತಿಯ ರೈಲ್ವೇ ಈಗ ಕೆಲವೊಂದು ನಿಯಮಗಳನ್ನು ಬದಲಾವಣೆ ಮಾಡಿದೆ.

ನಿಯಮಗಳು:
1. ಈ ಹಿಂದೆ ಒಂದು ಐಡಿಯಿಂದ ಎಷ್ಟು ಬೇಕಾದರೂ ಟಿಕೆಟ್ ಬುಕ್ ಮಾಡಲು ಸಾಧ್ಯವಿರುತಿತ್ತು. ಆದರೆ ಈಗ ಒಂದು ಐಡಿಯಿಂದ ಆ ರೈಲಿನಲ್ಲಿ ತಿಂಗಳಿಗೆ ಗರಿಷ್ಟ 6 ಟಿಕೆಟ್ ಗಳನ್ನು ಬುಕ್ ಮಾಡಲು ಮಾತ್ರ ಅವಕಾಶವಿದೆ. ಬುಕ್ಕಿಂಗ್ ಸಮಯದಲ್ಲಿ ಅಂದರೆ ಬೆಳಗ್ಗೆ 8 ರಿಂದ 10 ರವರೆಗೆ ಒಬ್ಬ ವ್ಯಕ್ತಿ ಎರಡು ಟಿಕೆಟ್ ಗಳನ್ನು ಮಾತ್ರ ಬುಕ್ ಮಾಡಬಹುದು.

2. ಹೆಚ್ಚುವರಿ ಭದ್ರತೆಯನ್ನು ಸೇರಿಸಲಾಗಿದ್ದು, ಪ್ರಯಾಣಿಕರು ಹೆಚ್ಚಿನ ಮಾಹಿತಿ ತಿಳಿಯಬೇಕಾದರೆ ಮೊದಲು ಅವರು ತಮ್ಮ ವೈಯಕ್ತಿಕ ಮಾಹಿತಿ – ಬಳಕೆದಾರ ಹೆಸರು, ಇ-ಮೇಲ್, ಮೊಬೈಲ್ ಸಂಖ್ಯೆ, ಚೆಕ್ ಬಾಕ್ಸ್ ಮುಂತಾದವುಗಳನ್ನು ತಿಳಿಸಬೇಕು.

3. ಏಜೆಂಟರು ಬೆಳಿಗ್ಗೆ 8 ರಿಂದ 8.30 ರವರೆಗೆ, 10 ರಿಂದ 10.30 ರವರೆಗೆ ಮತ್ತು 11 ರಿಂದ 11.30 ರವರೆಗೆ ಟಿಕೆಟ್ ಗಳನ್ನು ಬುಕ್ ಮಾಡಲು ಅವಕಾಶ ನೀಡಲಾಗುತ್ತದೆ. ಆನ್‍ಲೈನ್ ನಲ್ಲಿ 30 ನಿಮಿಷದ ನಂತರ ಟ್ರಾವೆಲ್ ಏಜೆಂಟರು ತತ್ಕಾಲ್ ಟಿಕೆಟ್ ಗಳನ್ನು ಬುಕ್ ಮಾಡಲು ಸಾಧ್ಯವಿಲ್ಲ.

4. ಟಿಕೆಟ್ ಬುಕ್ ಮಾಡುವಾಗ ಪ್ರಯಾಣಿಕ ತಮ್ಮ ವಿವರಗಳನ್ನು ತಿಳಿಸಲು 25 ಸೆಕೆಂಡುಗಳು ಮಾತ್ರ ಸಮಯ ಇರುತ್ತದೆ. ಪ್ರಯಾಣಸುವ ವಿವರಗಳ ಪುಟ ಮತ್ತು ಕ್ಯಾಪ್ಚಾ ಕೋಡ್(ಟಿಕೆಟ್ ಬುಕ್ ಮಾಡಲು ಕೋರಿಕೆ ಸಲ್ಲಿಸಿದ ವ್ಯಕ್ತಿ ಪ್ರಯಾಣಿಕರೇ ಎನ್ನುವುದನ್ನು ಖಾತರಿಪಡಿಸಿಕೊಳ್ಳುವ ಉದ್ದೇಶದಿಂದ ಬಳಕೆಯಾಗುವ ಪರೀಕ್ಷೆಯ ಹೆಸರು ಕ್ಯಾಪ್ಚಾ. ಈ ಹೆಸರು ‘ಕಂಪ್ಲೀಟ್‍ಲಿ ಆಟೋಮೇಟೆಡ್ ಪಬ್ಲಿಕ್ ಟ್ಯೂರಿಂಗ್ ಟೆಸ್ಟ್ ಟು ಟೆಲ್ ಕಂಪ್ಯೂಟರ್ಸ್ ಆಂಡ್ ಹ್ಯೂಮನ್ಸ್ ಅಪಾರ್ಟ್’ ಎಂಬುದರ ಹ್ರಸ್ವರೂಪ) ಭರ್ತಿ ಮಾಡಲು 5 ಸೆಕೆಂಡ್ ನೀಡಲಾಗಿದೆ.

5. ಪ್ರಯಾಣಿಕ ಹಣ ಪಾವತಿಸಲು 10 ಸೆಕೆಂಡ್ ನೀಡಲಾಗಿದ್ದು, ಎಲ್ಲಾ ಬ್ಯಾಂಕ್ ಮತ್ತು ಬಳಕೆದಾರರಿಗೆ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಲು ಒನ್ ಟೈಮ್ ಪಾಸ್‍ವರ್ಡ್(ಓಟಿಪಿ) ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದೆ.

6. ತತ್ಕಾಲ್ ಟಿಕೆಟ್ ನನ್ನು ಪ್ರಯಾಣದ ಒಂದು ದಿನ ಮೊದಲು ಬುಕ್ ಮಾಡಬಹುದು. ಆನ್‍ಲೈನ್ ನಲ್ಲಿ ಕಾಯ್ದಿರಿಸುವ ಟಿಕೆಟ್ ಗಳು ಅಂದರೆ ಎಸಿ ಕೋಚ್ ಬೆಳಗ್ಗೆ 10 ಗಂಟೆಗೆ ಮತ್ತು ಸ್ಲೀಪರ್ ಕೋಚ್ ಬೋಗಿಗಳಿಗೆ 11 ಗಂಟೆಗೆ ಪ್ರಾರಂಭವಾಗುತ್ತದೆ.

7. ರೈಲು ನಿಗದಿತ ಹೊರಡುವ ಸಮಯದ ಮೂರು ಗಂಟೆಗಳಲ್ಲಿ ನಿರ್ಗಮಿಸಲು ವಿಫಲವಾದರೆ ಮಾತ್ರ ರೈಲು ಟಿಕೆಟ್ ದರ ಮತ್ತು ತತ್ಕಾಲ್ ದರವನ್ನು ಸಂಪೂರ್ಣವಾಗಿ ಮರುಪಾವತಿ ಮಾಡಲಾಗುವುದು.

About Karnataka Express

Check Also

ಆ್ಯಕ್ಷನ್ ಪ್ರಿನ್ಸ್ ನಿಶ್ಚಿತಾರ್ಥ ಹುಡುಗಿ ಯಾರು ಗೊತ್ತಾ..!

ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ಸರ್ಜಾ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ. ಧ್ರುವ ಸರ್ಜಾ ಲವ್ ಕಮ್ ಅರೇಂಜ್ಡ್ …

Leave a Reply

Your email address will not be published. Required fields are marked *