Breaking News
Home / Featured / ತಲೆ ಹೊಟ್ಟು ನಿವಾರಣೆಗೆ ಸರಳ ಮನೆಮದ್ದು..!

ತಲೆ ಹೊಟ್ಟು ನಿವಾರಣೆಗೆ ಸರಳ ಮನೆಮದ್ದು..!

ಹೌದು ತಲೆಹೊಟ್ಟಿನಿಂದ ಕಿರಿಕಿರಿ ಅನುಭವಿಸುವುದು ಮಾತ್ರವಲ್ಲ, ಅದರಿಂದ ಕೂದಲು ಉದುರುವ ಸಮಸ್ಯೆ ಕೂಡ ಕಂಡು ಬರುವುದು ಮತ್ತು ಮುಜುಗರ ಉಂಟುಮಾಡುತ್ತದೆ.

ನಿಮಗೆ ತಲೆಹೊಟ್ಟು ಕಾಣಿಸಿದರೆ ಕೆಮಿಕಲ್‌ ಇರುವ ಡ್ಯಾಂಡ್ರಫ್‌ ಫ್ರೀ ಶ್ಯಾಂಪೂ ಹಾಕುವ ಬದಲು ಈ ಟಿಪ್ಸ್‌ ಪಾಲಿಸಿದರೆ ತಲೆಹೊಟ್ಟು ಸಮಸ್ಯೆಯೂ ಇರುವುದಿಲ್ಲ ಮತ್ತು ಕೂದಲಿನ ಆರೋಗ್ಯ ಮತ್ತಷ್ಟು ಹೆಚ್ಚಾಗುವುದು.

1 . ನಿಮ್ಮ ಕೂದಲಿನ ಬುಡ ಒಣಗುವುದರಿಂದ ತಲೆಹೊಟ್ಟು ಸಮಸ್ಯೆ ಕಾಣಿಸುತ್ತದೆ, ಆದ್ದರಿಂದ ಕೂದಲಿಗೆ ಚೆನ್ನಾಗಿ ಎಣ್ಣೆ ಹಾಕಿ ಮಸಾಜ್‌ ಮಾಡಿ ಯಾಕೆಂದರೆ ಎಣ್ಣೆ ಹಾಕುವುದರಿಂದ ತಲೆಯ ಹೊಟ್ಟು ಸಮಸ್ಯೆ ಬಗೆಹರಿಯುವುದರ ಜೊತೆಗೆ ತಲೆ ಕೂದಲು ಸದೃಢವಾಗುತ್ತದೆ

2 .ಮೆಂತೆಯನ್ನು ರುಬ್ಬಿ ಅದನ್ನು ತಲೆಗೆ ಹಚ್ಚಿ ಒಂದು ಗಂಟೆಯ ಬಳಿಕ ಸ್ನಾನ ಮಾಡಿದರೆ ತಲೆಯಲ್ಲಿನ ಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ.

3 .ಒಂದು ಕಪ್‌ ಬಿಸಿ ನೀರಿಗೆ ಸ್ವಲ್ಪ ಕಹಿಬೇವಿನ ಎಲೆ ಹಾಕಿ ಮಾರನೆಯ ದಿನ ಎಲೆಯನ್ನು ತೆಗೆದು ಬಿಸಾಡಿ, ಆ ನೀರಿನಿಂದ ತಲೆ ಬುಡಕ್ಕೆ ಮಸಾಜ್‌ ಮಾಡಿ ಅರ್ಧ ಗಂಟೆಯ ಬಳಿಕ ತಲೆ ತೊಳೆಯುವುದರಿಂದ ತಲೆಹೊಟ್ಟು ಕಡಿಮೆಯಾಗುವುದರ ಜೊತೆಗೆ ತಲೆ ತುರಿಕೆ ಇದ್ದರೆ ಬೇಗನೆ ಕಡಿಮೆಯಾಗುವುದು.

4 .ತಲೆಗೆ ಮೆಹಂದಿ ಹಾಕುವುದರಿಂದ ಸಹ ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗುವುದು.

ಈ ರೀತಿಯಾಗಿ ಅನುಸರಿಸಿದರೆ ತಲೆಯಲ್ಲಿನ ಹೊಟ್ಟು ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದಾಗಿದೆ.

About Karnataka Express

Check Also

ಆ್ಯಕ್ಷನ್ ಪ್ರಿನ್ಸ್ ನಿಶ್ಚಿತಾರ್ಥ ಹುಡುಗಿ ಯಾರು ಗೊತ್ತಾ..!

ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ಸರ್ಜಾ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ. ಧ್ರುವ ಸರ್ಜಾ ಲವ್ ಕಮ್ ಅರೇಂಜ್ಡ್ …

Leave a Reply

Your email address will not be published. Required fields are marked *