Breaking News
Home / Featured / ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಯೂರೋಪ್ ಪ್ರವಾಸ ಪ್ರಾರಂಭ..

ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಯೂರೋಪ್ ಪ್ರವಾಸ ಪ್ರಾರಂಭ..

ಯೂರೋಪ್ ಪ್ರವಾಸಕ್ಕೆ ಹೊರಟು ನಿಂತ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯನವನ್ನು ಬೀಳ್ಕೊಡಲು ಕರ್ನಾಟಕ ಸರ್ಕಾರದ ಹಲವು ಸಚಿವರು,ಶಾಸಕರು,ಅವರ ಆಪ್ತರು ಬೆಳ್ಳಂಬೆಳಿಗ್ಗೆ ಅವರ ನಿವಾಸದಲ್ಲಿ ನೆರೆದಿದ್ದರು.

ಬೆಳಗ್ಗೆ ಸೂಟ್ ಹಾಕಿಕೊಂಡು ಟ್ರಿಮ್ ಆಗಿ ಹೊರಬಂದ ಸಿದ್ದರಾಮಯ್ಯನವರು ತಮ್ಮೆಲ್ಲ ಹಿತೈಷಿಗಳೊಡನೆ ನಸುನಗುತ್ತಲೆ ಕುಶಲೋಪರಿ ವಿಚಾರಿಸಿ ಎಂದಿನಂತೆ ತಮ್ಮ ಗಾಂಭೀರ್ಯದಲ್ಲಿ 8-45ಕ್ಕೆ ವಿಮಾನ ನಿಲ್ದಾಣದ ಕಡೆ ಪ್ರಯಾಣ ಬೆಳೆಸಿದರು.ಸಿದ್ದರಾಮಯ್ಯನವರು ಹೊರಡುವಾಗ ಅವರ ಜೊತೆ ಅವರ ಪುತ್ರ, ವರುಣಾ ಕ್ಷೇತ್ರದ ಶಾಸಕರಾದ ಯತಿಂದ್ರ ಅವರು ಮಾತ್ರ ವಿದೇಶಕ್ಕೆ ಹೊರಟರು. ವಿಮಾನ ನಿಲ್ದಾಣದಲ್ಲಿ ವಿಧಾನಪರಿಷತ್ ಸದಸ್ಯ ಗೋವಿಂದರಾಜ್ ಹಾಗು ಅವರ ಪುತ್ರ ಜೊತೆಯಾದರು.

ಕೆಂಪೇಗೌಡ ನಿಲ್ದಾಣದಿಂದ ಬೆಳಗ್ಗೆ 10 ಗಂಟೆಗೆ ಎಂಬ್ರೇಷ್ ಫ್ಲೈಟ್ ನಲ್ಲಿ ದುಬೈಮಾರ್ಗವಾಗಿ ರಷ್ಯಾಗೆ ಹೊರಟ ವಿಮಾನದಲ್ಲಿ ಪ್ರಯಾಣ ಬೆಳೆಸಿದರು.

ಇದೆ ವೇಳೆ ಸಿದ್ದರಾಮಯ್ಯ ನಿವಾಸದಲ್ಲಿ ಹಾಜರಿದ್ದ ಯುವ ಅಹಿಂದ ರಾಜ್ಯ ಮುಖಂಡರಾದ ಮನೋಜ್ ಅವರು “ಸಿದ್ದರಾಮಯ್ಯನವರು ತಮ್ಮ ಕುಟುಂಬ, ಸ್ನೇಹಿತರ ಸಹಿತ ಹೊರಟಿರುವ ಖಾಸಗಿ ಪ್ರವಾಸಕ್ಕೆ ಹಲವು ದಿನಗಳಿಂದ ಗೊಂದಲ ಸೃಷ್ಟಿಸಲು ರಾಜಕೀಯ ಬಣ್ಣ ಕೊಡಲಾಗಿತ್ತು, ಇಂದು ಅಂತಹ ಎಲ್ಲ ಊಹಾಪೋಹಗಳಿಗೆ ತೆರೆ ಬಿದ್ದಿದೆ” ಎಂದು ತಮ್ಮ ಹಿರಿಯ ನಾಯಕನ ವಿದೇಶ ಪ್ರವಾಸಕ್ಕೆ ಶುಭ ಹಾರೈಸಿದರು. ಜೊತೆಗೆ ಯುವ ಅಹಿಂದ ಬಳಗದ ,ಅಭಿಷೇಕ್, ಮಂಜುನಾಥ್ ರೆಡ್ಡಿ, ಚೇತನ್ ಇನ್ನಿತರರು ಹಾಜರಿದ್ದರು.

ಒಟ್ಟಿನಲ್ಲಿ ಸಿದ್ದರಾಮಯ್ಯನವರ ಜೊತೆ ಸಚಿವರು ಹಾಗು ಹಲವು ಶಾಸಕರು ವಿದೇಶಕ್ಕೆ ತೆರಳುವುದರ ಮುಖಾಂತರ ಮೈತ್ರಿಯಲ್ಲಿ ಹೊಸ ಸಂಘರ್ಷ ಪ್ರಾರಂಭವಾಗಬಹುದೆಂದು ತಿಂಗಳುಗಟ್ಟಲೆ ಕಾದಿದ್ದ ವಿರೋಧ ಪಕ್ಷದವರ ಆಸೆಗೆ ಇದರಿಂದ ಮತ್ತೊಮ್ಮೆ ತಣ್ಣೀರು ಎರಚಿದಂತಾಗಿದ್ದಂತೂ ಸುಳ್ಳಲ್ಲ.

About Karnataka Express

Check Also

ಆ್ಯಕ್ಷನ್ ಪ್ರಿನ್ಸ್ ನಿಶ್ಚಿತಾರ್ಥ ಹುಡುಗಿ ಯಾರು ಗೊತ್ತಾ..!

ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ಸರ್ಜಾ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ. ಧ್ರುವ ಸರ್ಜಾ ಲವ್ ಕಮ್ ಅರೇಂಜ್ಡ್ …

Leave a Reply

Your email address will not be published. Required fields are marked *