Breaking News
Home / Featured / ಮೋದಿಯ ಕನಸಿನ ಯೋಜನೆಯಾದ ಅಂಚೆ ಬ್ಯಾಂಕ್ ಖಾತೆ ತೆಗೆಯೋದು ಹೇಗೆ..!

ಮೋದಿಯ ಕನಸಿನ ಯೋಜನೆಯಾದ ಅಂಚೆ ಬ್ಯಾಂಕ್ ಖಾತೆ ತೆಗೆಯೋದು ಹೇಗೆ..!

ಹೌದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಭಾರತೀಯ ಅಂಚೆ ಪೇಮೆಂಟ್‌ ಬ್ಯಾಂಕ್‌’ಗೆ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಚಾಲನೆ ನೀಡಿದ್ದಾರೆ. ಇನ್ನುಮುಂದೆ ಪೋಸ್ಟ್‌ಮನ್‌ಗಳು ಹಾಗೂ ಗ್ರಾಮೀಣ ಅಂಚೆ ಸೇವಕರ ಮೂಲಕ ಜನರ ಮನೆಬಾಗಿಲಿಗೇ ಬ್ಯಾಂಕಿಂಗ್‌ ಸೇವೆ ಲಭಿಸಲಿದೆ. ಇದು ದೇಶದ ಅತಿದೊಡ್ಡ ಬ್ಯಾಂಕಿಂಗ್‌ ಸೇವೆಯ ಜಾಲ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಈ ಹಿನ್ನೆಲೆಯಲ್ಲಿ ಅಂಚೆ ಪೇಮೆಂಟ್‌ ಬ್ಯಾಂಕ್‌ ಎಂದರೇನು? ಅದು ಹೇಗೆ ಕಾರ್ಯ ನಿರ್ವಹಿಸುತ್ತದೆ? ಯಾವ ಸೌಲಭ್ಯವಿದೆ? ಬೇರೆ ದೇಶಗಳಲ್ಲಿ ಹೇಗಿದೆ? ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ,

ಏನಿದು ಅಂಚೆ ಪೇಮೆಂಟ್‌ ಬ್ಯಾಂಕ್‌?

ವಲಸೆ ಕಾರ್ಮಿಕರು, ಸಣ್ಣ ವ್ಯಾಪಾರಸ್ಥರು, ಕಡಿಮೆ ಆದಾಯದ ಕುಟುಂಬಗಳು, ಇತರೆ ಅಸಂಘಟಿತ ವಲಯದವರಿಗೆ ಸಣ್ಣ ಉಳಿತಾಯ ಖಾತೆ, ಹಣ ಪಾವತಿ ಮತ್ತು ವರ್ಗಾವಣೆ ಸೌಲಭ್ಯವನ್ನು ಸುಲಭವಾಗಿ ಒದಗಿಸುವುದೇ ಅಂಚೆ ಪೇಮೆಂಟ್‌ ಬ್ಯಾಂಕ್‌ನ ಉದ್ದೇಶವಾಗಿದೆ, ಅದಕ್ಕಾಗಿ ನಗರ, ಪಟ್ಟಣ ಮಾತ್ರವಲ್ಲದೆ ಗ್ರಾಮೀಣ ಪ್ರದೇಶದಲ್ಲೂ ತನ್ನ ಶಾಖೆಗಳನ್ನು ಹೊಂದಿರುವ ಭಾರತೀಯ ಅಂಚೆ ಇಲಾಖೆಯು ಕುಗ್ರಾಮಗಳಿಗೂ ಬ್ಯಾಂಕಿಂಗ್‌ ಸೇವೆ ಒದಗಿಸಲು ಮುಂದಾಗಿದೆ. ಬ್ಯಾಂಕುಗಳು ಸಾಮಾನ್ಯವಾಗಿ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಮಾತ್ರ ಇರುತ್ತವೆ. ಹಳ್ಳಿಗಳ ಜನರು ಬ್ಯಾಂಕಿಂಗ್‌ ಸೌಲಭ್ಯ ಬೇಕೆಂದರೆ 15-20 ಕಿ.ಮೀ. ದೂರ ಹೋಗಬೇಕಿತ್ತು. ಆದರೆ, ಪ್ರತಿ ಊರಲ್ಲೂ ಅಂಚೆ ಕಚೇರಿ ಇರುವುದರಿಂದ ಆ ಅಂಚೆ ಕಚೇರಿಗಳನ್ನೇ ಪ್ರಾಥಮಿಕ ರೂಪದ ಬ್ಯಾಂಕ್‌ ಆಗಿ ಪರಿವರ್ತಿಸಿದರೆ ಜನರಿಗೆ ಅವರ ಊರಿನಲ್ಲೇ ಬ್ಯಾಂಕಿಂಗ್‌ ಸೌಲಭ್ಯ ಒದಗಿಸಿದಂತಾಗುತ್ತದೆ ಎಂಬ ಉದ್ದೇಶದಿಂದ ಅಂಚೆ ಬ್ಯಾಂಕ್‌ ಅನ್ನು ಆರಂಭಿಸಲಾಗಿದೆ.

ಏನೇನು ಸೌಲಭ್ಯ ಸಿಗಲಿದೆ?
ಸಾಮಾನ್ಯವಾಗಿ ಬ್ಯಾಂಕುಗಳು ನೀಡುವ ಬಹುತೇಕ ಸೌಲಭ್ಯಗಳನ್ನೇ ಈ ಅಂಚೆ ಪೇಮೆಂಟ್‌ ಬ್ಯಾಂಕುಗಳು ನೀಡಲಿವೆ. ಇದರಲ್ಲಿ ನಾಗರಿಕರು ಉಳಿತಾಯ ಖಾತೆ, ಚಾಲ್ತಿ ಖಾತೆ ತೆರೆಯಬಹುದು. ಗರಿಷ್ಠ 1 ಲಕ್ಷ ರು.ವರೆಗೆ ಠೇವಣಿ ಇಡಬಹುದು. ಉಳಿತಾಯ ಖಾತೆಗೆ ಶೇ.4ರಷ್ಟುಬಡ್ಡಿ ನೀಡಲಾಗುತ್ತದೆ. ನೇರ ನಗದು ವರ್ಗಾವಣೆ, ವಿದ್ಯುತ್‌, ನೀರು ಇತ್ಯಾದಿ ಬಿಲ್‌ ಪಾವತಿ, ಮರ್ಚೆಂಟ್‌ ಪೇಮೆಂಟ್‌, ಎಂಟರ್‌ಪ್ರೈಸ್‌ ಪೇಮೆಂಟ್‌, ಎಟಿಎಂ, ಆರ್‌ಟಿಜಿಎಸ್‌, ನೆಫ್ಟ್‌, ಐಎಂಪಿಎಸ್‌ ಮಾದರಿಯ ಸೇವೆಗಳನ್ನು ಪಡೆಯಬಹುದು. ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್‌ ಇಡಬೇಕಾದ ಅಗತ್ಯ ಇಲ್ಲ. 17 ಕೋಟಿ ಅಂಚೆ ಉಳಿತಾಯ ಖಾತೆಯೊಂದಿಗೆ ಐಪಿಪಿಬಿ ಖಾತೆ ಲಿಂಕ್‌ ಮಾಡಲಾಗುತ್ತದೆ. ಇದರಿಂದ ಐಪಿಪಿಬಿ ಗ್ರಾಹಕರು ಯಾವುದೇ ಖಾತೆಯಿಂದ ಹಣ ವರ್ಗಾಯಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗುತ್ತದೆ.

ಇಲ್ಲಿ ಸಾಲ ಸೌಲಭ್ಯಗಳು ಸಿಗುವುದಿಲ್ಲ..?

ಅಂಚೆ ಪೇಮೆಂಟ್‌ ಬ್ಯಾಂಕುಗಳಿಗೆ ನೇರ ಸಾಲ ಹಾಗೂ ಕ್ರೆಡಿಟ್‌ ಕಾರ್ಡ್‌ ನೀಡುವ ಅಧಿಕಾರವಿರುವುದಿಲ್ಲ. ಆದರೆ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಹಾಗೂ ಬಜಾಜ್‌ ಅಲಯನ್ಸ್‌ ಲೈಫ್‌ ಇನ್ಶೂರೆನ್ಸ್‌ ಜೊತೆಗೆ ಕೈಜೋಡಿಸಿರುವ ಐಪಿಪಿಬಿ ಥರ್ಡ್‌ ಪಾರ್ಟಿ ಸಾಲ ಹಾಗೂ ವಿಮೆ ಸೌಲಭ್ಯ ನೀಡಲಿದೆ. ಖಾತೆಯಲ್ಲಿ ಗರಿಷ್ಠ 1 ಲಕ್ಷ ರು.ವರೆಗೆ ಮಾತ್ರ ಠೇವಣಿ ಇಡಲು ಅವಕಾಶವಿದೆ.

 


ಬ್ಯಾಂಕಿಂಗ್‌ ಸೇವೆ ಹೇಗಿರಲಿದೆ?
ಗ್ರಾಹಕರು ಅಥವಾ ನಾಗರಿಕರು ಅಂಚೆ ಮೇಪೆಂಟ್‌ ಬ್ಯಾಂಕಿಂಗ್‌ ಸೌಲಭ್ಯವನ್ನು ಅಂಚೆ ಕಚೇರಿಯ ಕೌಂಟರ್‌ಗಳಲ್ಲಿ, ಮೈಕ್ರೋ ಎಟಿಎಂಗಳಲ್ಲಿ, ಇಂಟರ್‌ನೆಟ್‌ ಬ್ಯಾಂಕಿಂಗ್‌, ಮೊಬೈಲ್‌ ಆಯಪ್‌, ಎಸ್‌ಎಂಎಸ್‌ ಅಥವಾ ಐವಿಆರ್‌ ಸೇವೆಗಳ ಮೂಲಕ ಪಡೆಯಬಹುದಾಗಿದೆ. ಈ ಖಾತೆ ತೆರೆಯಲು ಆಧಾರ್‌ ಕಾರ್ಡ್‌ ಇದ್ದರೆ ಸಾಕು.

ಐಪಿಪಿಬಿಯಲ್ಲಿ 3 ರೀತಿಯ ಖಾತೆಗಳಿವೆ:

1) ಉಳಿತಾಯ ಖಾತೆ

2) ಡಿಜಿಟಲ್‌ ಖಾತೆ

3) ಗ್ರಾಮೀಣ ಉಳಿತಾಯ ಖಾತೆ

ಈ ಎಲ್ಲಾ ಖಾತೆಗಳ ಉಳಿತಾಯಕ್ಕೆ ವಾರ್ಷಿಕ ಬಡ್ಡಿ ಶೇ.4. ಜೊತೆಗೆ ಸಾಮಾನ್ಯ ಬ್ಯಾಂಕ್‌ ಸೇವೆಯಂತೆಯೇ ಬಹುತೇಕ ಎಲ್ಲಾ ಸೇವೆ ಇರಲಿದೆ.

ಭಾರತೀಯ ಅಂಚೆ ಪೇಮೆಂಟ್‌ ಬ್ಯಾಂಕ್‌, ಅಂಚೆ ಇಲಾಖೆ ಮತ್ತು ಸಂವಹನ ಸಚಿವಾಲಯದಡಿ ಬರುವ ಭಾರತ ಸರ್ಕಾರದ ಶೇ.100ರಷ್ಟುಶೇರು ಹೊಂದಿರುವ ಸಾರ್ವಜನಿಕ ವಲಯದ ಕಂಪನಿಯಾಗಿದ್ದು, ಭಾರತೀಯ ರಿಸವ್‌ರ್‍ ಬ್ಯಾಂಕ್‌ ಆಫ್‌ ಇಂಡಿಯಾ ಅಡಿಯಲ್ಲಿ ಕಾರ್ಯ ನಿರ್ವಹಿಸಲಿದೆ.

ಮೊಬೈಲ್‌ ಆಯಪ್‌ ಕೂಡ ಲಭ್ಯವಿದೆ..!
ಅಂಚೆ ಪೇಮೆಂಟ್‌ ಬ್ಯಾಂಕ್‌ ಹೆಚ್ಚಿನ ಸೇವಾ ಸೌಲಭ್ಯಕ್ಕಾಗಿ ಮೊಬೈಲ್‌ ಆಯಪನ್ನೂ ಕೂಡ ಬಿಡುಗಡೆಗೊಳಿಸಿದ್ದು, ಆನ್‌ಲೈನ್‌ ಬ್ಯಾಂಕಿಂಗ್‌ ಸೇವೆ ಕೂಡ ಲಭ್ಯವಿದೆ. ಇದರಿಂದ 100ಕ್ಕೂ ಹೆಚ್ಚು ಆನ್‌ಲೈನ್‌ ಬಿಲ್‌ ಪಾವತಿ ಮಾಡಬಹುದು. ಉದಾಹರಣೆಗೆ ಫೋನ್‌ ಬಿಲ್‌, ಡಿಟಿಎಚ್‌, ಗ್ಯಾಸ್‌ ಸಂಪರ್ಕ, ವಿದ್ಯುತ್‌ ಬಿಲ್‌ ಇತ್ಯಾದಿ. ಜೊತೆಗೆ ಭಾರತೀಯ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ ಗ್ರಾಹಕರು ಶೀಘ್ರವೇ ತಮ್ಮ ಖಾತೆ ಕುರಿತ ಮಾಹಿತಿ ಪಡೆಯಲು ಎಸ್‌ಎಂಎಸ್‌ ಬ್ಯಾಂಕಿಂಗ್‌ ವ್ಯವಸ್ಥೆ ಕೂಡ ಲಭ್ಯವಿದೆ.

ಭಾರತಕ್ಕೇನು ಉಪಯೋಗ?
ಭಾರತೀಯ ಪೇಮೆಂಟ್‌ ಬ್ಯಾಂಕ್‌ನ ಶೇ.90ರಷ್ಟುಶಾಖೆಗಳು ಗ್ರಾಮೀಣ ಪ್ರದೇಶದಲ್ಲಿರಲಿವೆ. ಭಾರತದ ಅಂಚೆ ಇಲಾಖೆಯ ಗ್ರಾಮೀಣ ಸೇವೆಯು ಭಾರತದ ಎಲ್ಲಾ ವಾಣಿಜ್ಯ ಬ್ಯಾಂಕ್‌ ಸೇವೆಗಿಂತ ಹೆಚ್ಚು ವಿಸ್ತೃತವಾಗಲಿದೆ. ಇದರಿಂದ ಅತಿದೊಡ್ಡ ಬ್ಯಾಂಕಿಂಗ್‌ ಜಾಲ ಸೃಷ್ಟಿಯಾಗಲಿದೆ. ಅಂಚೆ ಸೇವೆಯು ಗ್ರಾಮೀಣ ಹಾಗೂ ಅರೆ ನಗರ ಪ್ರದೇಶಗಳಿಗೂ ಲಭ್ಯವಾಗಲಿದೆ.

ಇಷ್ಟೇ ಅಲ್ಲದೆ ಇನ್ನು ಎಷ್ಟೋ ಮಂದಿಗೆ ಬ್ಯಾಂಕ್ ಖಾತೆಗಳಿಲ್ಲ ಮತ್ತು ಅವರ ಹಳ್ಳಿಗಳಿಗೆ ಬ್ಯಾಂಕ್ ಸೌಲಭ್ಯವಿಲ್ಲ ಆದರೆ ಅಂಚೆ ಸೌಲಭ್ಯ ಇದೆ ಆದ್ದರಿಂದ ಈ ಯೋಜನೆಯಿಂದ ತುಂಬಾ ಅನುಕೂಲವಾಗಲಿದೆ.

About Karnataka Express

Check Also

ಆ್ಯಕ್ಷನ್ ಪ್ರಿನ್ಸ್ ನಿಶ್ಚಿತಾರ್ಥ ಹುಡುಗಿ ಯಾರು ಗೊತ್ತಾ..!

ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ಸರ್ಜಾ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ. ಧ್ರುವ ಸರ್ಜಾ ಲವ್ ಕಮ್ ಅರೇಂಜ್ಡ್ …

Leave a Reply

Your email address will not be published. Required fields are marked *