Breaking News
Home / Featured / ರೈತರೇ ಖಾಸಗಿ ವ್ಯಕ್ತಿಗಲಿಂದ ಕೈ ಸಾಲ ಪಡೆದಿದ್ದಿರಾ, ಆಗಿದ್ದರೆ ಗುಡ್ ನ್ಯೂಸ್..!

ರೈತರೇ ಖಾಸಗಿ ವ್ಯಕ್ತಿಗಲಿಂದ ಕೈ ಸಾಲ ಪಡೆದಿದ್ದಿರಾ, ಆಗಿದ್ದರೆ ಗುಡ್ ನ್ಯೂಸ್..!

ಹೌದು ರೈತರು ಬ್ಯಾಂಕ್ ಗಳಿಗಿಂತ ಹೆಚ್ಚಾಗಿ ಖಾಸಗಿ ವ್ಯಕ್ತಿಗಳಿಂದ ಸಾಲ ಪಡೆದಿದ್ದಾರೆ ಅದಕ್ಕಾಗಿ ಕೆಲವು ದಿನಗಳ ಹಿಂದೆ ಸರಕಾರವು ಆ ಸಾಲವು ಮನ್ನಾ ಆಗಲಿದೆ ಎಂದು ಹೇಳಿತ್ತು.

ಆ ವಿಚಾರವಾಗಿ ಇವತ್ತು ಉಪಮುಖ್ಯಮಂತ್ರಿ ಪರಮೇಶ್ವರವರು ಕೊರಟಗೆರೆಯ ಕ್ಯಾಮೇನಹಳ್ಳಿಯಲ್ಲಿ ಆಯೋಜಿಸಿದ್ದ ಹಾಲು ಒಕ್ಕೂಟದ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಕೈಸಾಲ ಕೊಟ್ಟಿರುವವರಿಗೆ ಕೈಮುಗಿದು, ಎಲ್ಲಾ ಆಗಿ ಹೋಯಿತು, ಇನ್ನೇನೂ ನಮ್ಮ ಹತ್ತಿರ ಕೇಳ ಬೇಡಿ ಅಂಥ ಹೇಳಿಬಿಡಿ ಹೇಳಿದ್ದಾರೆ

ನಮ್ಮ ಸರ್ಕಾರ ರೈತರ ಪರವಾಗಿ ನಿಲ್ಲಬೇಕೆಂದು 49 ಸಾವಿರ ಕೋಟಿ ರೂಪಾಯಿ ಸಾಲಮನ್ನಾ ಮಾಡಿದೆ. ಮನ್ನಾ ಮಾಡಿದ್ದರೂ ಸಹ ಬಹಳ ದೊಡ್ಡ ದೊಡ್ಡ ಟೀಕೆಗಳನ್ನು ಮಾಡಿದ್ದಾರೆ. ಅವುಗಳಿಗೆ ಉತ್ತರಿಸುವ ಅವಶ್ಯಕತೆಯೂ ಇಲ್ಲ. ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಪ್ರಶ್ನೆಯೂ ಅಲ್ಲ. ಕೇವಲ ರೈತರ ಕಷ್ಟಕ್ಕೆ ನೆರವಾಗಿದ್ದೇವೆ ಎನ್ನುವುದು ಮುಖ್ಯವೆಂದು ಹೇಳಿದ್ದಾರೆ.

ಇಂದಿನಿಂದ ಸಾಲಮನ್ನಾ ಪ್ರಕ್ರಿಯೆ ಆರಂಭಗೊಳ್ಳಲಿದೆ. ಇದರ ಜೊತೆಗೆ ಬ್ಯಾಂಕ್ ಸಾಲ ಹಾಗೂ ಕೈಸಾಲ ಮನ್ನಾಗೂ ಕಾಯ್ದೆ ರೂಪಿಸಿದ್ದೇವೆ. ಈಗಾಗಲೇ ಕ್ಯಾಬಿನೆಟ್‍ನಲ್ಲಿಯೂ ಋಣಮುಕ್ತ ಕಾಯ್ದೆಯನ್ನು ಮಂಜೂರು ಮಾಡಲಾಗಿದೆ. ಕೈಸಾಲ ಪಡೆದ ರೈತರು ಸಾಲ ಕೊಟ್ಟಿರುವವರಿಗೆ ಕೈ ಮುಗಿದು, ಸ್ವಾಮಿ ಎಲ್ಲಾ ಆಗಿ ಹೋಯಿತು. ಇನ್ನೇನೂ ನಮ್ಮ ಹತ್ರ ಕೇಳಬೇಡಿ ಅಂತ ಹೇಳಿಬಿಡಿ ಎಂದು ರೈತರಿಗೆ ಉಪಮುಖ್ಯಮಂತ್ರಿ ಪರಮೇಶ್ವರ್ ಖಾಸಗಿ ಸಾಲಮನ್ನಾ ಕುರಿತು ಹೇಳಿಕೆ ನೀಡಿದ್ದಾರೆ.

About Karnataka Express

Check Also

ಆ್ಯಕ್ಷನ್ ಪ್ರಿನ್ಸ್ ನಿಶ್ಚಿತಾರ್ಥ ಹುಡುಗಿ ಯಾರು ಗೊತ್ತಾ..!

ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ಸರ್ಜಾ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ. ಧ್ರುವ ಸರ್ಜಾ ಲವ್ ಕಮ್ ಅರೇಂಜ್ಡ್ …

Leave a Reply

Your email address will not be published. Required fields are marked *