Breaking News
Home / Featured / ಜನ್ ಧನ್ ಖಾತೆದಾರರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರಕಾರ..!

ಜನ್ ಧನ್ ಖಾತೆದಾರರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರಕಾರ..!

ಪ್ರಧಾನಿ ಮೋದಿಯವರು ಜಾರಿಗೊಳಿಸಿದ ಮಹತ್ತರ ಯೋಜನೆಯಾದ ಜನಧನ್ ಖಾತೆಯ ಮಹತ್ತರ ಬದಲಾವಣೆಯನ್ನು ಘೋಷಣೆ ಮಾಡಿದ್ದಾರೆ. ಜನಧನ್ ಖಾತೆಗೆ ದೇಶದ ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಅದರ ಪ್ರಯೋಜನಗಳನ್ನು ಹೆಚ್ಚಿಸುವಂತಾ ಯೋಜನೆ ಘೋಷಿಸಿರುವ ಬಗ್ಗೆ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.

ಜನಧನ್ ಖಾತೆಯ ಓವರ್ ಡ್ರಾಫ್ಟ್ ನ ಮೊತ್ತವನ್ನ ಹೆಚ್ಚಿಸಲಾಗಿದೆ. ಕ್ಯಾಬಿನೆಟ್ ನಿರ್ಣಯದ ಪ್ರಕಾರ 5000 ದಿಂದ 10, 000 ಕ್ಕೆ ಜನಧನ್ ಖಾತೆಯ ಓವರ್ ಡ್ರಾಫ್ಟ್ ಮೊತ್ತ ಏರಿಕೆಯಾಗಿದೆ. ವಯೋಮಾನದ ಮಿತಿಯನ್ನು ಕೂಡ 60 ರಿಂದ 65ವರ್ಷಕ್ಕೆ ಏರಿಸಲಾಗಿದೆ.

ಈಗಾಗ್ಲೇ ಶೇಕಡಾ 83ರಷ್ಟು ಜನಧನ್ ಖಾತೆಗಳು ಆಧಾರ್ ನೊಂದಿಗೆ ಲಿಂಕ್ ಮಾಡಲಾಗಿದೆ. 32 ಲಕ್ಷದ 41 ಸಾವಿರ ಜನಧನ್ ಖಾತೆಗಳನ್ನ ತೆರೆಯಲಾಗಿದೆ. 81,200 ಕೋಟಿ ರೂಪಾಯಿಗಳ ಠೇವಣಿಯನ್ನ ಜನಧನ್ ಖಾತೆಯಲ್ಲಿ ಇಡಲಾಗಿದೆ. ಪ್ರಧಾನ್ ಮಂತ್ರಿ ಸುರಕ್ಷಾ ಭೀಮಾ ಯೋಜನೆಯ ಅಡಿಯಲ್ಲಿ ದೇಶದ ನಾಗರಿಕರು ಅಪಘಾತ ವಿಮೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.

ಈ ಬಾರಿಯ ಬಜೆಟ್ ಮಂಡನೆಯಲ್ಲಿ ಘೋಷಿಸಿದಂತೆ ಜನಧನ್ ಖಾತೆಯ ಓವರ್ ಡ್ರಾಫ್ಟನ ಮೊತ್ತ ಹೆಚ್ಚಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಪ್ರಕಟಿಸಿತ್ತು. ಈಗ ಅದು ಜಾರಿಗೆ ಬಂದಿದೆ. ಅಲ್ಲದೇ ಆಗಸ್ಟ್ 28ರಿಂದ ಪ್ರಧಾನ್ ಮಂತ್ರಿ ಅಪಘಾತ ವಿಮೆಯನ್ನ 2 ಲಕ್ಷ ರೂಪಾಯಿಗೆ ನಿಗದಿಪಡಿಸಲಾಗಿದೆ ನವದೆಹಲಿಯಲ್ಲಿ ತಿಳಿಸಿದ್ದಾರೆ.

About Karnataka Express

Check Also

ಆ್ಯಕ್ಷನ್ ಪ್ರಿನ್ಸ್ ನಿಶ್ಚಿತಾರ್ಥ ಹುಡುಗಿ ಯಾರು ಗೊತ್ತಾ..!

ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ಸರ್ಜಾ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ. ಧ್ರುವ ಸರ್ಜಾ ಲವ್ ಕಮ್ ಅರೇಂಜ್ಡ್ …

Leave a Reply

Your email address will not be published. Required fields are marked *