Breaking News
Home / Featured / ಪೆಟ್ರೋಲ್ ಡೀಸೆಲ್ ಬೆಲೆ 2ರೂ ಆಗಿರೋದನ್ನ ಕೊಡುವುದಕ್ಕೆ ಆಗೋದಿಲ್ಲವಾ ಅಂತ ಹೇಳುವವರಿಗೆ ಕೆಲವು ಪ್ರಶ್ನೆಗಳು..?

ಪೆಟ್ರೋಲ್ ಡೀಸೆಲ್ ಬೆಲೆ 2ರೂ ಆಗಿರೋದನ್ನ ಕೊಡುವುದಕ್ಕೆ ಆಗೋದಿಲ್ಲವಾ ಅಂತ ಹೇಳುವವರಿಗೆ ಕೆಲವು ಪ್ರಶ್ನೆಗಳು..?

ಹೌದು ನಮ್ಮ ಭಾರತದಲ್ಲಿ ಇತ್ತೀಚಿನ ಕೆಲವು ದಿನಗಳಿಂದ ಪೆಟ್ರೋಲ್ ಡಿಸೇಲ್ ಬೆಲೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ, ಅದೇ ರೀತಿ ರೂಪಾಯಿಯ ಮೌಲ್ಯವು ಸಹ ಡಾಲರ್ ಎದುರು ಕುಸಿಯುತ್ತಿದೆ ಆದರೆ ಈ ಏರಿಕೆಯನ್ನು ಖಂಡಿಸಿದರೆ ಅವರನ್ನು ಕಟುವಾಗಿ ಟೀಕಿಸುತ್ತಿರುವುದು ಉಂಟು ಮತ್ತು ಬಂದ್ ಮಾಡುವುದನ್ನು ವಿಫಲಗೊಳಿಸಲು ಪ್ರಯತ್ನಿಸಿರುವುದು ಉಂಟು, ಆದರೆ ಈ ಬೆಲೆ ಏರಿಕೆ ಬರೀ ಕಾಂಗ್ರೆಸ್ ಅಥವಾ ವಿರೋಧ ಪಕ್ಷಗಳಿಗೆ ಮಾತ್ರ ಏರಿಕೆಯಾಗಿಲ್ಲ ಅದು ಇಡೀ ಭಾರತದ ಸಾಮಾನ್ಯ ಜನರಿಗೂ ಆಗುತ್ತಿರುವ ಸಮಸ್ಯೆ , ನಿನ್ನೆಯ ಬಂದ್ ಅಂತ ಸಾಮಾನ್ಯ ಭಾರತೀಯನ ದ್ವನಿ.

ಕೆಲವರು ಹೇಳುವಂತೆ ದೇಶದ ಪ್ರಗತಿಗೆ ಬೆಲೆ ಹೆಚ್ಚಿಸಿರೋದು ಅಂತ ಹೇಳುತ್ತಾರೆ , ಇನ್ನು ಕೆಲವರು ಮೋದಿಯ ಮನೆಗೆ ತೆಗೆದುಕೊಂಡು ಹೋಗುವುದಿಲ್ಲ , ಅವರು ದುಡ್ಡು ಮಾಡಲು ಬಂದಿಲ್ಲ ಅಂತ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಬೊಬ್ಬೆ ಹೊಡೆದಿದ್ದು ಉಂಟು ಇದು ನಿಜ ಒಪ್ಪಿಕೊಳ್ಳೋಣ ಆದರೆ ಒಬ್ಬ ಸಾಮಾನ್ಯ ಭಾರತೀಯನಾಗಿ ನನ್ನ ಕೆಲವು ಪ್ರಶ್ನೆಗಳು.?

೧. ಬೆಲೆ ಏರಿಕೆಯ ಬಂದ್ ವಿರೋಧಿಸಿದವರು 2013 ರಲ್ಲಿ ದೇಶಾದ್ಯಂತ ಪ್ರತಿಭಟಿಸಿದ್ದು ಏಕೆ?
ಹೌದು ಅಂದಿನ ಬಿಜೆಪಿ ಪಕ್ಷ ದೇಶದಾದ್ಯಂತ ಎತ್ತಿನ ಗಾಡಿಯಲ್ಲಿ ಕುಳಿತು ಮತ್ತು ಗ್ಯಾಸ್ ಸಿಲಿಂಡರ್ ಜೊತೆ ಕಟ್ಟಿಗೆ ತರಕಾರಿಗಳನ್ನು ಇಟ್ಟುಕೊಂಡು ಪ್ರಬಲವಾಗಿ ಪ್ರತಿಭಟಿಸಿತ್ತು ಅದು ಅಂದಿನ ಸಾಮಾನ್ಯ ಜನರ ಮೇಲಿನ ಕಾಳಜಿ ಆದರೆ ಆ ಕಾಳಜಿ ಈಗ ಸರಕಾರದಲ್ಲಿ ಇದ್ದಾಗ ಯಾಕೆ ಇಲ್ಲ . ಅಂದಿನ ಸರಕಾರ ಈ ಸಮಸ್ಯೆಗಳನ್ನು ತಡೆಯಲು ವಿಫಲವಾಗಿ ಐಸಿಯು ನಲ್ಲಿ ಇದೆ ಎಂದು ಟೀಕಿಸಿದವರ ಸರಕಾರ ಇವತ್ತು ಅದೇ ಬಡವರಿಗೆ ಮಧ್ಯಮ ವರ್ಗದವರ ಪಾಲಿಗೆ ಸ್ಮಶಾನ ಸೇರಿದೆಯೇ ಅಥವಾ ಪ್ರಶ್ನೆ ಮಾಡುವಂತಿಲ್ಲವೇ ಇದು ಪ್ರಜಾಪ್ರಭುತ್ವ ಅಲ್ಲವಾ?

೨. ಕೆಲವರು ಪೆಟ್ರೋಲ್ ಡಿಸೇಲ್ ಗೆ 2 ರೂಪಾಯಿ ಕೊಡುವುದಕ್ಕೆ ಆಗುವುದಿಲ್ಲವೇ ಎಂದು ಹೇಳುತ್ತಾರೆ ?
ಹೌದು ಸ್ವಾಮಿ ಅವರಿಗೂ ಕೊಡಲಿಕ್ಕೆ ಏನು ತೊಂದರೆ ಇಲ್ಲ ಅದು ಎಷ್ಟೋ ಸಾಮಾನ್ಯ ಜನರಿಗೆ ಹೇಗೆ ತೊಂದರೆ ಆಗಿದೆ ಅನ್ನೋದನ್ನ ಒಮ್ಮೆ ಯೋಚಿಸಿ ಯಾಕೆ ಅಂದರೆ ಈ ಬೆಲೆ ಹೆಚ್ಚಳದಿಂದ ಸರಕು ಸಾಗಾಣಿಕೆ ವೆಚ್ಚ , ಬಸ್ ದರ ಹೆಚ್ಚಾದರೆ ಅದು ಜೇಬು ಸುಡುವುದು ದೊಡ್ಡ ಉದ್ಯಮಿ ಶ್ರೀಮಂತರಿಗೆ ಅಲ್ಲ , ಎಷ್ಟೋ ಮಂದಿ ಕಾಡು ಬಡವರಿಗೆ ಮಧ್ಯಮ ವರ್ಗದವರಿಗೂ ಆ ಹೊರೆ ಬೀಳುತ್ತದೆ ಅನ್ನೋದು ನೆನಪಿರಲಿ.

೩. ರೈತರಿಗೂ ಇದರಿಂದ ಎಷ್ಟು ತೊಂದರೆ ಆಗುತ್ತಿದೆ ಎಂದು ಒಮ್ಮೆ ಯೋಚಿಸಿದ್ದೀರಾ.?
ಯಾಕೆಂದರೆ ರೈತ ಒಂದು ಬೆಳೆ ಬೆಳೆಯಲಿಕ್ಕೆ ವ್ಯವಸಾಯ ಮಾಡಬೇಕೆಂದರೆ ಸರಕಾರಗಳೇ ಹೇಳುವಂತೆ ಆಧುನಿಕ ಬೇಸಾಯಕ್ಕೆ ,ತಂತ್ರಜ್ಞಾನಕ್ಕೆ ಒಟ್ಟು ಕೊಟ್ಟು ಯಂತ್ರ ಮತ್ತು ಟ್ರಾಕ್ಟಾರ್ ಗಳ ಮೂಲಕ ಉಳುಮೆ ಮಾಡುತ್ತಾನೆ ಆದರೆ ಅವನು ಡಿಸೇಲ್ ಬೆಳೆ ಏರಿಕೆಯಿಂದ ಬೆಲೆ ಜಾಸ್ತಿ ಮಾಡುತ್ತಾನೆ ಅದು ನೇರವಾಗಿ ರೈತರ ಜೇಬಿಗೆ ಕತ್ತರಿ ಬೀಳುವುದಿಲ್ಲವೇ , ಆದರೆ ರೈತ ಬೆಳೆದ ಬೆಳೆಗೆ ಯಾಕೆ ದಿನೇ ದಿನೇ ಬೆಲೆ ಜಾಸ್ತಿ ಕೊಡುವುದಿಲ್ಲ.

೪. ಕೂಲಿ ಕಾರ್ಮಿಕರಿಗೆ ಹೇಗೆ ತೊಂದರೆ ಆಗುತ್ತದೆ ಎಂದು ಯೋಚಿಸಿದ್ದೀರಾ?
ಒಬ್ಬ ದಿನಗೂಲಿ ಕಾರ್ಮಿಕ ಹೊಟ್ಟೆಪಾಡಿಗಾಗಿ ಒಂದು ಸ್ಥಳದಿಂದ ಸ್ಥಳಕ್ಕೆ ಕೂಲಿಗೆ ಹೋಗುವುದುಂಟು ಆದರೆ ಅವನು ಬೆಲೆ ಹೆಚ್ಚಳದಿಂದ ಓಡಾಟಕ್ಕೆ ಹಣ ವ್ಯಯಿಸಿದರೆ ಅವನು ಜೀವನ ಕುಟುಂಬದ ನಿರ್ವಹಣೆ ಹೇಗೆ ಎಂದು ಒಮ್ಮೆ ಚಿಂತಿಸಿ.

೫. ಮೋದಿಯವರ ಕನಸಿನ ಯೋಜನೆ ಉಡಾನ್ ಅವರೇ ಹೇಳುತ್ತಾರೆ ಹವಾಯಿ ಚಪ್ಪಲಿ ಹಾಕುವವರು ವಿಮಾನದಲ್ಲಿ ಓಡಾಟ ಮಾಡುವಂತೆ ಮಾಡುತ್ತೇವೆ ಎನ್ನುತ್ತಾರೆ ಆದರೆ ಈ ಬೆಲೆ ಹೆಚ್ಚಳದಿಂದ ಒಬ್ಬ ಸಾಮಾನ್ಯ ವ್ಯಕ್ತಿ ಒಂದು TVS XL ಅಥವಾ ಆಟೋದಲ್ಲಿ ಓಡಾಡಲಿಕ್ಕೆ ಚಿಂತಿಸುವಂತ ಸ್ಥಿತಿ ಸಮೀಪಿಸುತ್ತಿದೆ , ಇನ್ನು ವಿಮಾನದಲ್ಲಿ ಮತ್ತು ಬುಲೆಟ್ ಟ್ರೈನ್ ನಲ್ಲಿ ಓಡಾಡುವುದು ಕನಸಾಗಿ ಉಳಿಯುತ್ತದೆಯೇ

ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ದಿನೇ ದಿನೇ ಪರಿಷ್ಕರಿಸುವವರು ಕಾರ್ಪೊರೇಟ್ ತೆರಿಗೆಗಳನ್ನು ಯಾಕೆ ಪರಿಷ್ಕರಿಸುವುದಿಲ್ಲ
ರೈತರ ಬೆಳೆಯ ಬೆಲೆಗಳನ್ನು ಯಾಕೆ ಪರಿಷ್ಕರಿಸುವುದಿಲ್ಲ , ಕೂಲಿ ಕಾರ್ಮಿಕರಿಕ ದಿನಗೂಲಿ ನೌಕರರ ವೇತನ ಯಾಕೆ ಪರಿಷ್ಕರಿಸುವುದಿಲ್ಲ ಇವನ್ನು ಪರಿಷ್ಕರಿಸಿ ನೀಡಿ ಖಂಡಿತ 100 ರು ಅಲ್ಲ 200 ರು ಆದರೂ ಕೊಳ್ಳುವ ಶಕ್ತಿ ಅವರಲ್ಲೇ ಬೆಳೆಯುತ್ತದೆ ಮತ್ತು ಯಾವ ಸರಕಾರಗಳನ್ನು ಪ್ರಶ್ನೆ ಮಾಡುವ ಗೋಜಿಗೆ ಜನ ಹೋಗುವುದಿಲ್ಲ.

ಸರಕಾರಗಳು ಸೆಸ್ ಗಳನ್ನೂ ಜಾಸ್ತಿ ಮಾಡಿ ಜನರ ಮೇಲೆ ಏರಿಕೆ ಮಾಡುವ ಬದಲು ರಾಜಕಾರಿಣಿಗಳ ವೆಚ್ಚ ವೇತನಗಳಿಗೆ ಕಡಿವಾಣ ಹಾಕಿ.

ಕೊನೆಯದಾಗಿ ಒಂದು ವಿಷಯ ಏನೆಂದರೆ 2013 ರಲ್ಲಿ ಒಂದು ಬ್ಯಾರಲ್ ತೈಲ ಆಮದಿಗೆ ಇದ್ದ ಬೆಲೆಗೂ ಪ್ರಸ್ತುತ ಇರುವ ಒಂದು ಬ್ಯಾರಲ್ ತೈಲದ ಬೆಲೆಗೂ ಇರುವ ವ್ಯತ್ಯಾಸ ನೋಡಿದರೆ ಸಾಮಾನ್ಯ ಜನರ ಸುಲಿಗೆ ಆಗುತ್ತಿರುವುದು ಸುಳ್ಳಲ್ಲ, ಮತ್ತು ನಮ್ಮ ಕೇಂದ್ರ ಸರಕಾರದವರಿಗೆ 5 ವರ್ಷದ ಹಿಂದೆ ಇದ್ದಂತಹ ಜನತೆಯ ಮೇಲಿನ ಕಾಳಜಿ ಪ್ರಸ್ತುತವಾಗಿ ತೋರಲಿ ಎಂಬುದೇ ಈ ಸಾಮಾನ್ಯ ಭಾರತೀಯನ ಆಶಯ.

About Karnataka Express

Check Also

ಆ್ಯಕ್ಷನ್ ಪ್ರಿನ್ಸ್ ನಿಶ್ಚಿತಾರ್ಥ ಹುಡುಗಿ ಯಾರು ಗೊತ್ತಾ..!

ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ಸರ್ಜಾ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ. ಧ್ರುವ ಸರ್ಜಾ ಲವ್ ಕಮ್ ಅರೇಂಜ್ಡ್ …

Leave a Reply

Your email address will not be published. Required fields are marked *