Breaking News
Home / Featured / ಗ್ರಾಹಕರಿಗೆ ಶಾಕಿಂಗ್ ಸುದ್ದಿ ನೀಡಿದ ಎಸ್ ಬಿ ಐ..!

ಗ್ರಾಹಕರಿಗೆ ಶಾಕಿಂಗ್ ಸುದ್ದಿ ನೀಡಿದ ಎಸ್ ಬಿ ಐ..!

ಭಾರತೀಯ ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ದೊಡ್ಡ ಶಾಕ್ ನೀಡಿದೆ, ಅದೇನಂದರೆ ಬ್ಯಾಂಕ್ ತನ್ನ ಖಾತೆಗೆ ಹಣ ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ದೊಡ್ಡ ಬದಲಾವಣೆ ಮಾಡಿದೆ. ಇದು ಇಡೀ ದೇಶದ ಎಸ್.ಬಿ.ಐ. ಗ್ರಾಹಕರ ಮೇಲೆ ಪರಿಣಾಮ ಬೀರಲಿದೆ.

ಎಸ್ ಬಿ ಐ ಹೊಸ ನಿಯಮದ ಪ್ರಕಾರ, ಬ್ಯಾಂಕ್ ಖಾತೆಗೆ ಖಾತೆದಾರರನ್ನು ಬಿಟ್ಟು ಬೇರೆಯವರು ಯಾರು ಹಣ ಜಮಾ ಮಾಡುವಂತಿಲ್ಲ. ಬ್ಯಾಂಕ್ ಶಾಖೆಗೆ ಹೋಗಿ ಹಣ ಜಮಾ ಮಾಡುವವರಿಗೆ ಮಾತ್ರ ಇದು ಅನ್ವಯವಾಗಲಿದೆ. ಆನ್ಲೈನ್ ನಲ್ಲಿ ಯಾರೂ ಬೇಕಾದ್ರೂ ಬೇರೆಯವರ ಖಾತೆಗೆ ಹಣ ಹಾಕಬಹುದಾಗಿದೆ.

ತಂದೆ ಹಳ್ಳಿಯಲ್ಲಿದ್ದು, ಮಗ ನಗರದಲ್ಲಿ ಓದುತ್ತಿದ್ದರೆ ಮಗನ ಖಾತೆಗೆ ತಂದೆ ಹಣ ಹಾಕುವಂತಿಲ್ಲ. ಆನ್ಲೈನ್ ವ್ಯವಹಾರ ಗೊತ್ತಿಲ್ಲದವರು ಬ್ಯಾಂಕ್ ಗೆ ಒಪ್ಪಿಗೆ ಪತ್ರ ನೀಡಬೇಕಾಗುತ್ತದೆ. ವ್ಯಕ್ತಿ ಎ ಹಾಗೂ ವ್ಯಕ್ತಿ ಬಿ ಇಬ್ಬರ ಒಪ್ಪಿಗೆ ಬೇಕಾಗುತ್ತದೆ. ಹಣ ಜಮೆಯಾದ ಮೇಲೆ ಬ್ಯಾಂಕ್ ಸಿಬ್ಬಂದಿ ಸಹಿ ಹಾಕಬೇಕಾಗುತ್ತದೆ.

ನೋಟು ನಿಷೇಧದ ಸಂದರ್ಭದಲ್ಲಿ ನಡೆದ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಬ್ಯಾಂಕ್ ಈ ನಿರ್ಧಾರಕ್ಕೆ ಬಂದಿದೆ. ಆಗ ಬೇರೆಯವರ ಖಾತೆಗಳಿಗೆ ದೊಡ್ಡ ಮಟ್ಟದಲ್ಲಿ ಹಣ ಜಮಾ ಆಗಿದೆ. ಖಾತೆದಾರನಿಗೆ ಈ ಸಂಗತಿ ಗೊತ್ತಿರಲಿಲ್ಲ. ಇಂಥ ಪ್ರಕರಣಗಳಿಗೆ ಕಡಿವಾಣ ಹಾಕಲು ಬ್ಯಾಂಕ್ ಈ ನಿರ್ಧಾರಕ್ಕೆ ಬಂದಿದೆ ತಿಳಿದು ಬಂದಿದೆ.

About Karnataka Express

Check Also

ಆ್ಯಕ್ಷನ್ ಪ್ರಿನ್ಸ್ ನಿಶ್ಚಿತಾರ್ಥ ಹುಡುಗಿ ಯಾರು ಗೊತ್ತಾ..!

ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ಸರ್ಜಾ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ. ಧ್ರುವ ಸರ್ಜಾ ಲವ್ ಕಮ್ ಅರೇಂಜ್ಡ್ …

Leave a Reply

Your email address will not be published. Required fields are marked *