Breaking News
Home / Featured / ನೀವು ಮನೆಗೆ ಗಣೇಶ ತರುತ್ತಿದ್ದಿರಾ ಹಾಗಾದರೆ ಈ ಅಂಶಗಳ ಬಗ್ಗೆ ಎಚ್ಚರವಿರಲಿ..!

ನೀವು ಮನೆಗೆ ಗಣೇಶ ತರುತ್ತಿದ್ದಿರಾ ಹಾಗಾದರೆ ಈ ಅಂಶಗಳ ಬಗ್ಗೆ ಎಚ್ಚರವಿರಲಿ..!

ಹೌದು ಗಣೇಶ ಹಬ್ಬ ಬಂತೆಂದರೆ ಮಕ್ಕಳಿಗೆ ಎಲ್ಲಿಲ್ಲಿದ ಖುಷಿ ಮತ್ತು ಮಕ್ಕಳಿಗೆ ಮನೆಯಲ್ಲಿ ಗಣೇಶನ್ನು ಕೂರಿಸುವುದು ಎಂದರೆ ಸಂಭ್ರಮ. ಆದರೆ ಗಣೇಶ ವಿಗ್ರಹವನ್ನು ಕೂರಿಸುವುದೆಂದರೆ ಮಕ್ಕಳಾಟವಲ್ಲ. ಗಣೇಶನನ್ನು ತರುವಾಗ ವಿಘ್ನವಾದರೆ ಅಥವಾ ವಿರೂಪಗೊಂಡ ಗಣೇಶ ಮೂರ್ತಿಯನ್ನು ಕೂರಿಸಬಾರದು, ಅದರಿಂದ ತೊಂದರೆಗಳು ತಪ್ಪಿದ್ದಲ್ಲ ಆದ್ದರಿಂದ ಈ ಕೆಳಗಿನ ಅಂಶಗಳ ಬಗ್ಗೆ ಗಮನವಿರಲಿ.

ಮನೆಯಲ್ಲಿ ಗಣೇಶನನ್ನು ಕೂರಿಸುವ ಮುನ್ನ ವಾಸ್ತುವಿನ ಬಗ್ಗೆ ತಿಳಿದುಕೊಳ್ಳಿ.
ಬಿಳಿ ಬಣ್ಣದ ಗಣೇಶನ ಮೂರ್ತಿ ಮನೆಗೆ ತಂದರೆ ಯಶಸ್ಸು, ಕೀರ್ತಿ, ಸುಖ ಮತ್ತು ಸಂತೋಷ ಹೆಚ್ಚುತ್ತದೆ.
.ಹೊಸ ವ್ಯಾಪಾರ ಆರಂಭಿಸಬೇಕೆನ್ನುವವರು ಮತ್ತು ಅಭಿವೃದ್ದಿ ಬೇಕು ಎನ್ನುವವರು ಮನೆಯಲ್ಲಿ ಕುಂಕುಮ ಅಥವಾ ಸಿಂಧೂರ ಬಣ್ಣದ ಗಣಪತಿಯನ್ನು ಪೂಜಿಸಿದರೆ ಒಳ್ಳೆಯದಾಗುತ್ತದೆ.

ಕುಳಿತಿರುವ ಗಣೇಶ ಮೂರ್ತಿ ತಂದು ಕುರಿಸುವುದರಿಂದ ಮನೆಯ ಅದೃಷ್ಟ ಮತ್ತು ಯಶಸ್ಸು ಹೆಚ್ಚುತ್ತದೆ.
ಎಡ ಸೊಂಡಿಲು ಬಾಗಿರುವ ಗಣೇಶನ ವಿಗ್ರಹದಿಂದ ಕೋರಿಕೆಗಳು ಈಡೇರುತ್ತವೆ. ಸೊಂಡಿಲು ಬಲಗಡೆ ಬಾಗಿದ್ದರೆ ಕಷ್ಟ ಹೆಚ್ಚುತ್ತದೆಯಂತೆ.
ಕೆಲಸ ಮಾಡುವ ಸ್ಥಳದಲ್ಲಿ ನಿಂತಿರುವ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಿದರೆ, ಉದ್ಯೋಗಿಗಳ ಶಕ್ತಿ ಮತ್ತು ಹುಮ್ಮಸ್ಸು ಹೆಚ್ಚಾಗುತ್ತದೆಯಂತೆ.

ಗಣೇಶನ ಮೂರ್ತಿಯಲ್ಲಿ ಮೋದಕ ಮತ್ತು ಇಲಿ ಇದ್ದರೆ ಮಂಗಲಕರವಂತೆ.
ಗಣೇಶನ ವಿಗ್ರಹಕ್ಕೆ ದಿನವೂ ಗರಿಕೆ ಹುಲ್ಲನ್ನು ಅರ್ಪಿಸಿ ಓಂ ಗಂ ಗಣಪತಯೇ ನಮಃ ಎಂದು ಪೂಜಿಸಿದರೆ, ಯಶಸ್ಸು ಕೈ ಹಿಡಿಯುತ್ತದೆ.
ಗಣೇಶನನ್ನು ಸ್ವಸ್ತಿಕ ಚಿಹ್ನೆಯೊಂದಿಗೆ ಪೂಜಿಸಿದರೆ ಯಾವುದೇ ವಾಸ್ತು ಸಮಸ್ಯೆ ಇದ್ದರೂ ನಿವಾರಣೆಯಾಗುತ್ತದೆ ಮತ್ತು ಇದನ್ನು ಮನೆಯ ಪ್ರವೇಶ ದ್ವಾರದಲ್ಲಿ ಹಾಕಿದರೆ ಮನೆಗೆ ಯಾವ ಕೆಟ್ಟ ದೃಷ್ಟಿಯೂ ತಾಕುವುದಿಲ್ಲ.

ಗಣೇಶಗಳನ್ನು ಕುರಿಸುವವರು ಈ ಅಂಶಗಳನ್ನು ತಪ್ಪದೆ ಪಾಲಿಸಿ.

About Karnataka Express

Check Also

ಆ್ಯಕ್ಷನ್ ಪ್ರಿನ್ಸ್ ನಿಶ್ಚಿತಾರ್ಥ ಹುಡುಗಿ ಯಾರು ಗೊತ್ತಾ..!

ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ಸರ್ಜಾ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ. ಧ್ರುವ ಸರ್ಜಾ ಲವ್ ಕಮ್ ಅರೇಂಜ್ಡ್ …

Leave a Reply

Your email address will not be published. Required fields are marked *