Breaking News
Home / Featured / ಗೌರಿ ಗಣೇಶ ಹಬ್ಬಕ್ಕೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ಸಿಹಿ ಸುದ್ದಿ ನೀಡಿದ ಮೋದಿ.!

ಗೌರಿ ಗಣೇಶ ಹಬ್ಬಕ್ಕೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ಸಿಹಿ ಸುದ್ದಿ ನೀಡಿದ ಮೋದಿ.!

ಹೌದು ಗೌರಿ ಗಣೇಶ ಸಂದರ್ಭದಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ಗೌರವಧನ ಹೆಚ್ಚಿಸುವುದಾಗಿ ತಿಳಿಸಿದ್ದಾರೆ.
ಅಲ್ಲದೇ, ಮಾನ್ಯತೆ ಪಡೆದ ಎಲ್ಲಾ ಆಶಾ ಕಾರ್ಯಕರ್ತೆಯರನ್ನು ಪ್ರಮುಖ ಸಾಮಾಜಿಕ ಸುರಕ್ಷತಾ ಯೋಜನೆ ವ್ಯಾಪ್ತಿಗೊಳಪಡಿಸಲಾಗುವುದು, ಪ್ರಧಾನಮಂತ್ರಿ ಜೀವನ್ ಜ್ಯೋತಿ ಭೀಮಾ ಹಾಗೂ ಪ್ರಧಾನಮಂತ್ರಿ ಸುರಕ್ಷ ಭೀಮಾ ಯೋಜನೆಯಡಿ ಉಚಿತ ವಿಮೆ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.

ಸಾಮಾಜಿಕ ಆರೋಗ್ಯ ಕಾರ್ಯಕರ್ತೆಯರು ವಿಮೆಗಾಗಿ ಯಾವುದೇ ಪ್ರೀಮಿಯಂ ಹಣ ಪಾವತಿಸುವಂತಿಲ್ಲ. ಆಕಸ್ಮಿಕ ಘಟನೆಗಳ ಸಂದರ್ಭದಲ್ಲಿ 4 ಲಕ್ಷ ರೂ ಪಡೆಯಲಿದ್ದಾರೆ ಎಂದು ಆಶಾ, ಅಂಗನವಾಡಿ ಕಾರ್ಯಕರ್ತೆಯರ ಜೊತೆಗಿನ ಸಂವಾದದಲ್ಲಿ ನರೇಂದ್ರ ಮೋದಿ ಇಂದು ಹೇಳಿದರು.

ಪರಿಷ್ಕೃತ ಗೌರವಧನ ಆದೇಶ ಅಕ್ಚೋಬರ್ ತಿಂಗಳಿನಿಂದ ಜಾರಿಯಾಗಲಿದ್ದು, ದೀಪಾವಳಿ ಕೊಡುಗೆಯಾಗಿ ನವೆಂಬರ್ ಸಂಬಳದಲ್ಲಿ ಅವರಿಗೆ ದೊರೆಯಲಿದೆ. 3 ಸಾವಿರ ರೂ. ಪಡೆಯುತ್ತಿದ್ದವರು 4500 , 2. 200 ರೂ ಪಡೆಯುತ್ತಿದ್ದವರು, 3, 500 ಹಾಗೂ 1500 ರೂ. ಪಡೆಯುತ್ತಿದ್ದ ಅಂಗನವಾಡಿ ಸಹಾಯಕಿಯರು 2,500 ಪಡೆಯಲಿದ್ದಾರೆ ಎಂದರು.
ಕೇಂದ್ರಸರ್ಕಾರದಿಂದ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಪಡೆಯುವ ಗೌರವ ಧನ ಇದಾಗಿದೆ.

About Karnataka Express

Check Also

ಆ್ಯಕ್ಷನ್ ಪ್ರಿನ್ಸ್ ನಿಶ್ಚಿತಾರ್ಥ ಹುಡುಗಿ ಯಾರು ಗೊತ್ತಾ..!

ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ಸರ್ಜಾ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ. ಧ್ರುವ ಸರ್ಜಾ ಲವ್ ಕಮ್ ಅರೇಂಜ್ಡ್ …

Leave a Reply

Your email address will not be published. Required fields are marked *