Breaking News
Home / Featured / ಬೆಳಗ್ಗೆ ಬೆಳಗ್ಗೆ ಸೌತೆಕಾಯಿ ಕಾಯಿ ನೀರು ಕುಡಿಯುವುದರಲ್ಲಿ ಅಡಗಿವೆ ಹಲವಾರು ಆರೋಗ್ಯಕಾರಿ ಲಾಭಗಳು..!

ಬೆಳಗ್ಗೆ ಬೆಳಗ್ಗೆ ಸೌತೆಕಾಯಿ ಕಾಯಿ ನೀರು ಕುಡಿಯುವುದರಲ್ಲಿ ಅಡಗಿವೆ ಹಲವಾರು ಆರೋಗ್ಯಕಾರಿ ಲಾಭಗಳು..!

ಹಲವಾರು ಆರೋಗ್ಯಕಾರಿ ಅಂಶಗಳು ನಮ್ಮ ಸುತ್ತ ಸಿಗುವ ಪದಾರ್ಥಗಳಲ್ಲೇ ಅಡಗಿರುತ್ತದೆ, ಆದರೂ ನಮಗೆ ಗೊತ್ತಿರುವುದಿಲ್ಲ ಅದೇ ರೀತಿ ಸೌತೆಕಾಯಿಯಲ್ಲೂ ಸಹ ಹಲವಾರು ಆರೋಗ್ಯಕಾರಿ ಗುಣಗಳು ಅಡಗಿವಿ.


ಉತ್ಕರ್ಷಣ ನಿರೋಧಕವನ್ನು ಬಿಡುಗಡೆ ಮಾಡುತ್ತದೆ:-

ಉತ್ಕರ್ಷಣ ನಿರೋಧಕಗಳು ಫ್ರೀ ರ್ಯಾಡಿಕಲ್ಸ್​ಗಳಿಂದ ಜೀವಕೋಶಗಳು ಹಾಳಾಗುವುದನ್ನು ತಡೆಯುತ್ತದೆ. ಇದರಲ್ಲಿ ವಿಟಮಿನ್​ ಸಿ, ಮ್ಯಾಂಗನೀಸ್​ನಂತಹ ಫ್ಲಾವನೊಡ್​ ಆ್ಯಂಟಿ ಆಕ್ಸಿಡೆಂಟ್​ಗಳಿವೆ.

ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ:-
ಸೌತೆಕಾಯಿಯಲ್ಲಿ ಡೈಯೆಟರಿ ಫೈಬರ್​ ಅಂಶ ಸಮೃದ್ಧವಾಗಿರುವುದರಿಂದ ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಸವತೆಕಾಯಿ ಸಿಪ್ಪೆಯಲ್ಲಿ ಕರಗದ ಫೈಬರ್​ ಅಂಶವಿದೆ. ಇದು ಆಹಾರ ಸುಲಭವಾಗಿ ಅನ್ನನಾಳದಲ್ಲಿ ಇಳಿದು ಹೋಗಲು ಸಹಾಯ ಮಾಡುತ್ತದೆ.

ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ:-
ರಕ್ತದೊತ್ತಡಕ್ಕೆ ಮುಖ್ಯ ಕಾರಣವೆಂದರೆ ಆಹಾರದಲ್ಲಿ ಹೆಚ್ಚಿಗೆ ಉಪ್ಪಿನಾಂಶ ಸೇರುವುದು. ಸವತೆಕಾಯಿಯಲ್ಲಿರುವ ಪೊಟ್ಯಾಶಿಯಮ್​ ಇಲೆಕ್ಟ್ರೊಲೈಟ್​ ತರಹ ಕೆಲಸ ಮಾಡಿ ಸೋಡಿಯಮ್​ ಪ್ರಮಾಣವನ್ನು ನಿಯಂತ್ರಿಸುತ್ತದೆ.

ತ್ವಚೆಯ ಆರೋಗ್ಯವನ್ನು ಕಾಪಾಡುತ್ತದೆ:-
ತ್ವಚೆಯ ಆರೋಗ್ಯವನ್ನು ಒಳಗಿನಿಂದಲೂ ಹಾಗೆ ಹೊರಗಿನಿಂದ ಕಾಪಾಡಲು ಇದು ಸಹಕಾರಿಯಾಗಿದೆ. ಇದು ದೇಹದಲ್ಲಿನ ಟಾಕ್ಸಿನ್​ ಅಂಶವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದರಲ್ಲಿರುವ ವಿಟಮಿನ್​ ಬಿ5 ಆರೋಗ್ಯಕಾರಿ ವರ್ಣವನ್ನು ನೀಡುತ್ತದೆ.

ಮೂಳೆಯ ಆರೋಗ್ಯವನ್ನು ಕಾಪಾಡುತ್ತದೆ:-
ಸೌತೆಕಾಯಿಯಲ್ಲಿ ವಿಟಮಿನ್​ ಕೆ ಅಂಶವಿದೆ, ಇದು ಪ್ರೋಟಿನ್​ ಉತ್ಪತ್ತಿಗೆ ಸಹಾಯ ಮಾಡಿ ಮೂಳೆಯ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ಜೊತೆಗೆ ರಕ್ತ ಹೆಪ್ಪುಗಟ್ಟುವಿಕೆಯನ್ನು ನಿಯಂತ್ರಿಸುತ್ತದೆ.

ತೂಕ ಇಳಿಸಲು ಸಹಾಯ ಮಾಡುತ್ತದೆ:-
ಸೌತೆಕಾಯಿ ನೀರು ದೇಹದ ಚಯಾಪಚನ ಕ್ರಿಯೆಯನ್ನು ಹೆಚ್ಚಿಸಿ ಪದೇ ಪದೇ ಹಸಿವಾಗುವುದನ್ನು ತಡೆಯುತ್ತದೆ. ಜೊತೆಗೆ ದೇಹಕ್ಕೆ ಎನರ್ಜಿಯನ್ನೂ ನೀಡುತ್ತದೆ. ಇದರಿಂದ ಪದೇ ಪದೇ ಜಂಕ್​ಫುಡ್ಸ್​ ತಿನ್ನುವ ಪ್ರಮೇಯ ಬರುವುದಿಲ್ಲ.

ಮೆದುಳಿನ ಆರೋಗ್ಯಕ್ಕೂ ಉತ್ತಮ:-
ಸೌತೆಕಾಯಿಯಲ್ಲಿರುವ ಫಿಸ್ಟೆನ್​ ಅಂಶ ಮೆದುಳಿನ ಕಾರ್ಯಕ್ಷಮತೆ ಹೆಚ್ಚಲು ಮತ್ತು ನೆನಪಿನ ಶಕ್ತಿ ಉತ್ತಮಗೊಳ್ಳಲು ಸಹಾಯಮಾಡುತ್ತದೆ. ಇದು ಮೆದುಳು ಆರೋಗ್ಯವಾಗಿರಲು ಹಾಗೆ ಯಂಗ್​ ಆಗಿರಲು ಸಹಾಯ ಮಾಡುತ್ತದೆ.

About Karnataka Express

Check Also

ಆ್ಯಕ್ಷನ್ ಪ್ರಿನ್ಸ್ ನಿಶ್ಚಿತಾರ್ಥ ಹುಡುಗಿ ಯಾರು ಗೊತ್ತಾ..!

ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ಸರ್ಜಾ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ. ಧ್ರುವ ಸರ್ಜಾ ಲವ್ ಕಮ್ ಅರೇಂಜ್ಡ್ …

Leave a Reply

Your email address will not be published. Required fields are marked *