Breaking News
Home / Featured / ನೀವು ಯಾವಾಗಲು ಯಂಗ್ ಆಗಿ ಕಾಣಬೇಕೆಂಬ ಅಸೆ ಇದ್ದರೆ ಇಲ್ಲಿವೆ ನಿಮಗಾಗಿ ಸಲಹೆಗಳು..!

ನೀವು ಯಾವಾಗಲು ಯಂಗ್ ಆಗಿ ಕಾಣಬೇಕೆಂಬ ಅಸೆ ಇದ್ದರೆ ಇಲ್ಲಿವೆ ನಿಮಗಾಗಿ ಸಲಹೆಗಳು..!

ಹೌದು ಮನುಷ್ಯನಿಗೆ ಎಷ್ಟೇ ಮುಪ್ಪು ಆದ್ರೂ ತಾನು ಇನ್ನು ಯಂಗ್ ಆಗಿ ಕಾಣಬೇಕು ಅಂತ ಪ್ರತಿಯೊಬ್ಬ ಮನುಷ್ಯನಿಗೂ ಇರುತ್ತೆ ಹಾಗಾಗಿ ಇಂತಹ ಹಣ್ಣುಗಳನ್ನು ಸೇವನೆ ಮಾಡಿದ್ರೆ ನೀವು ಯಾವಾಗಲು ಯಂಗ್ ಆಗಿ ಕಾಣಬಹುದು ನೋಡಿ.

ಸ್ಟ್ರಾಬೆರಿ:
ಸ್ಟ್ರಾಬೆರಿಯಲ್ಲಿ ವಿಟಮಿನ್​ ಸಿ ಅಂಶ ಅಧಿಕವಾಗಿದೆ. ಇದು ಆ್ಯಂಟಿ ಆಕ್ಸಿಡೆಂಟ್​ ತರಹ ಕೆಲಸ ಮಾಡಿ ಕೊಲೆಜಿನ್​ ಫೈಬರ್​ ಉತ್ಪತ್ತಿಯನ್ನು ಹೆಚ್ಚಿಸುತ್ತದೆ. ಇದು ತ್ವಚೆ ಮೃದುವಾಗಿ ಫರ್ಮ್​ ಆಗಿರಿಸಲು ಸಹಾಯ ಮಾಡುತ್ತದೆ. ಜೊತೆಗೆ ತ್ವಚೆ ಇಳಿ ಬೀಳುವುದನ್ನು ತಡೆಯುತ್ತದೆ.

ಕಪ್ಪು ದ್ರಾಕ್ಷಿ:
ಕಪ್ಪು ದ್ರಾಕ್ಷಿಯಲ್ಲಿ ಆಂಥೋಸಿಯಾನಿನ್ಸ್​ ಎಂಬ ಅಂಶಗಳಿವೆ. ಇದು ಈ ಹಣ್ಣಿಗೆ ಗಾಢ ಬಣ್ಣವನ್ನು ನೀಡುತ್ತದೆ. ಜೊತೆಗೆ ತ್ವಚೆಗೆ ಹಾನಿಯುಂಟು ಮಾಡುವ ಫ್ರೀ ರ್ಯಾಡಿಕಲ್ಸ್​ನ್ನು ಸಮತೋಲನದಲ್ಲಿಟ್ಟು, ಆ್ಯಂಟಿಆಕ್ಸಿಡೆಂಟ್​ ಆಗಿ ಕೆಲಸ ಮಾಡುತ್ತದೆ.

ಸೇಬುಹಣ್ಣು:
ಈ ಹಣ್ಣಿನಲ್ಲಿ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸುವ ಮತ್ತು ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವ ಪೆಕ್ಟಿನ್ ಮತ್ತು ಕ್ವೆರ್ಸೆಟಿನ್ ಅಂಶವಿದೆ. ಇದು ತ್ವಚೆಯ ಯವ್ವನವನ್ನು ಕಾಯ್ದುಕೊಳ್ಳಲು ಸಹಕಾರಿಯಾಗಿದೆ. ವಾರಕ್ಕೆ 2-3 ಸೇಬುಹಣ್ಣನ್ನು ಸೇವಿಸುವುದರಿಂದ ಹೃದಯ ಸ್ತಂಭನದ ಸಾಧ್ಯತೆ ಕಡಿಮೆಯಾಗುತ್ತದೆ ಎಂದು ಅಧ್ಯಯನಗಳು ತಿಳಿಸಿವೆ.

ದಾಳಿಂಬೆ ಹಣ್ಣು:
ದಾಳಿಂಬೆ ಹಣ್ಣಿನಲ್ಲಿ ಎಲ್ಲಾಜಿಕ್​ ಆ್ಯಸಿಡ್​ ಮತ್ತು ಆ್ಯಂಟಿಆಕ್ಸಿಡೆಂಟ್​ಗಳಿವೆ. ಇದು ಜೀವಕೋಶಗಳ ಮರುಹುಟ್ಟಿಗೆ ಸಹಕರಿಸುತ್ತದೆ. ಜೊತೆಗೆ ಗಾಯಗಳೂ ಬೇಗನೆ ಗುಣವಾಗಲು ಸಹಾಯ ಮಾಡುತ್ತದೆ.

ಅವಕಾಡೋಸ್​:
ಅವಕಾಡೋಸ್​ಗಳಲ್ಲಿ ಫ್ಯಾಟಿ ಆ್ಯಸಿಡ್​ ಸಮೃದ್ಧವಾಗಿವೆ. ಇದು ಹೊರಗಿನ ಮಾಲಿನ್ಯಗಳಿಂದ ಮೂಡುವ ಸಣ್ಣ ಗೆರೆಗಳು, ನೆರಿಗೆಗಳನ್ನು ತೊಲಗಿಸುತ್ತದೆ.

ಪೇರಲೆ ಹಣ್ಣು:
ಪೇರಲೆ ಹಣ್ಣಿನಲ್ಲೂ ವಿಟಮಿನ್​ ಸಿ ಅಂಶವಿದೆ. ಇದು ತ್ವಚೆ ಯಂಗ್​ ಆಗಿರುವಂತೆ ನೋಡಿಕೊಳ್ಳುತ್ತದೆ. ಜೊತೆಗೆ ತ್ವಚೆ ಸುಕ್ಕುಗಟ್ಟುವುದನ್ನು ತಡೆಯುತ್ತದೆ.

About Karnataka Express

Check Also

ಆ್ಯಕ್ಷನ್ ಪ್ರಿನ್ಸ್ ನಿಶ್ಚಿತಾರ್ಥ ಹುಡುಗಿ ಯಾರು ಗೊತ್ತಾ..!

ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ಸರ್ಜಾ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ. ಧ್ರುವ ಸರ್ಜಾ ಲವ್ ಕಮ್ ಅರೇಂಜ್ಡ್ …

Leave a Reply

Your email address will not be published. Required fields are marked *