Breaking News
Home / Featured / ನಿರುದ್ಯೋಗಿ ಯುವಕರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ..!

ನಿರುದ್ಯೋಗಿ ಯುವಕರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ..!

ಹೌದು ಭಾರತ ದೇಶ ಅತಿ ಹೆಚ್ಚು ಯುವ ಜನರನ್ನು ಹೊಂದಿರುವ ದೇಶ ಅವರಿಗೆ ಉದ್ಯೋಗ ನೀಡುವಲ್ಲಿ ಸರ್ಕಾರಗಳು ವಿಫಲವಾಗುತ್ತಿವೆ ಆದ್ದರಿಂದ ಕೇಂದ್ರ ಸರ್ಕಾರ ಹೊಸ ಯೋಜನೆಯನ್ನು ರೂಪಿಸಲು ಮುಂದಾಗಿದೆ ಅದೇನಂದರೆ,ಇನ್ನು ಮೂರು ವರ್ಷದಲ್ಲಿ ದೇಶದ ಒಂದು ಕೋಟಿ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಸಲುವಾಗಿ ಕೇಂದ್ರ ಸರ್ಕಾರ ನೂತನ ಯೋಜನೆಯೊಂದನ್ನು ಜಾರಿಗೆ ತರುವ ಅಂತಿಮ ಸಿದ್ಧತೆ ನಡೆಸುತ್ತಿದೆ.

ನೇರ ಮತ್ತು ಪರೋಕ್ಷ ಉದ್ಯೋಗಾವಕಾಶ ಸೃಷ್ಟಿಸೋ ಹೊಸ ಯೋಜನೆಗೆ ಅಂತಿಮ ಸ್ಪರ್ಶ ನೀಡುವ ಕಾರ್ಯ ಈಗ ನಡೆಯುತ್ತಿದೆ. ನೀತಿ ಆಯೋಗದ ಸಲಹೆ ಸೂಚನೆಯ ಮೇರೆಗೆ ಕೇಂದ್ರ ಸರ್ಕಾರದ ಚಿಂತನಾ ಮಂಥನಾ ಸಭೆಯಲ್ಲಿ ರಾಷ್ಟ್ರೀಯ ಮೆಗಾ ಔದ್ಯೋಗಿಕ ವಲಯ ಸ್ಥಾಪನೆಯ ಅಂತಿಮ ಹಂತದ ಮಾತುಕತೆ ನಡೆಯುತ್ತಿದೆ.

ನೇರ ಬಂಡವಾಳ ಮತ್ತು ಪರೋಕ್ಷ ಬಂಡವಾಳ ಹೂಡಿಕೆ ಎರಡು ಪ್ರಮುಖ ಹಂತಗಳಲ್ಲಿ ಉದ್ಯೋಗಾವಕಾಶ ಸೃಷ್ಟಿ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಎಲ್ಲವು ಅಂದುಕೊಂಡ ಹಾಗೆ ಆದ್ರೆ ಇನ್ನು ಕೆಲವೇ ದಿನಗಳಲ್ಲಿ ಈ ಯೋಜನೆ ಜಾರಿಗೆ ಬರಲಿದೆ. ತೆರಿಗೆ ರಹಿತ ಯೋಜನೆ, ಸಬ್ಸಿಡಿ, ಸಿಂಗಲ್ ವಿಂಡೋ ಕ್ಲಿಯರೆನ್ಸ್, ಸೇರಿದಂತೆ ಹಲವು ಸವಲತ್ತುಗಳು ಈ ಯೋಜನೆಯ ಭಾಗವಾಗಿ ಜಾರಿಯಾಗಲಿದೆ.ಲೋಕಸಭಾ ಚುನಾವಣೆಗೂ ಮೊದಲೇ ಈ ಬಗ್ಗೆ ಅಧಿಸೂಚನೆ ಪ್ರಕಟಿಸೋದಕ್ಕಾಗಿ ಮೋದಿ ಸರ್ಕಾರ ಮುಂದಾಗಿದೆ. ದೇಶದ ನಾನಾ ಕಡೆಗಳಲ್ಲಿ ಒಟ್ಟು 14 ಔದ್ಯೋಗಿಕ ವಲಯಗಳ ರಚನೆಯಾಗಲಿದೆ. ಪ್ರತಿ ವಲಯವೂ 35 ವಿಭಿನ್ನ ಉದ್ದಿಮೆಗಳನ್ನ ಒಳಗೊಂಡಿರಲಿದೆ. 1 ಲಕ್ಷ ಕೋಟಿ ಅನುದಾನವನ್ನು ಈ ಮೆಗಾ ಪ್ರಾಜೆಕ್ಟ್ ಗಾಗಿ ಮೀಸಲಿಡಲಾಗಿದೆ.

About Karnataka Express

Check Also

ಆ್ಯಕ್ಷನ್ ಪ್ರಿನ್ಸ್ ನಿಶ್ಚಿತಾರ್ಥ ಹುಡುಗಿ ಯಾರು ಗೊತ್ತಾ..!

ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ಸರ್ಜಾ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ. ಧ್ರುವ ಸರ್ಜಾ ಲವ್ ಕಮ್ ಅರೇಂಜ್ಡ್ …

Leave a Reply

Your email address will not be published. Required fields are marked *