Breaking News
Home / Featured / ಪಪ್ಪಾಯ ಹಣ್ಣಿನಲ್ಲಿ ಅಡಗಿವೆ ಉತ್ತಮವಾದ ಆರೋಗ್ಯಕಾರಿ ಲಾಭಗಳು..!

ಪಪ್ಪಾಯ ಹಣ್ಣಿನಲ್ಲಿ ಅಡಗಿವೆ ಉತ್ತಮವಾದ ಆರೋಗ್ಯಕಾರಿ ಲಾಭಗಳು..!

ಹೌದು ನಮ್ಮ ಸುತ್ತ ಮುತ್ತ ಸಿಗುವ ಹಲವಾರು ಹಣ್ಣುಗಳಲ್ಲಿ ಹಲವಾರು ಆರೋಗ್ಯಕಾರಿ ಲಾಭಗಳು ಅಡಗಿರುತ್ತವೆ ಆದರೆ ನಮಗೆ ಗೊತ್ತಿರಿವುದಿಲ್ಲ ಅದೇ ರೀತಿ ಪಪ್ಪಾಯಿ ಹಣ್ಣಿನಲ್ಲೂ ಸಹ ಹಲವಾರು ಆರೋಗ್ಯಕಾರಿ ಗುಣಗಳಿವೆ ಅವುಗಳೆಂದರೆ,

ಜೀರ್ಣಕ್ರಿಯೆ ಉತ್ತಮಗೊಳಿಸುತ್ತದೆ:
ಪಪ್ಪಾಯದಲ್ಲಿರುವ ಹೈ ಫೈಬರ್​ ಅಂಶ ಪಚನಕ್ರಿಯೆಗೆ ಸಹಾಯಕ. ಜೊತೆಗೆ ಇದು ಮಲಬದ್ಧತೆ ಸಮಸ್ಯೆಯನ್ನೂ ಪರಿಹರಿಸುತ್ತದೆ. ಪ್ರತಿನಿತ್ಯ ದೇಹಕ್ಕೆ ಅಗತ್ಯವಾಗಿರುವ ಫೈಬರ್​ ಅಂಶವನ್ನು ಪಪ್ಪಾಯ ಒದಗಿಸುತ್ತದೆ. ಜೊತೆಗೆ ಹೊಟ್ಟೆಯ ಸಮಸ್ಯೆಗಳನ್ನ ಸರಿಪಡಿಸಿ ಆಹಾರ ಸರಿಯಾದ ರೀತಿಯಲ್ಲಿ ಜೀರ್ಣವಾಗಲು ಸಹಾಯ ಮಾಡುತ್ತದೆ.

ಅಗತ್ಯವಾದ ಪೌಷ್ಠಿಕಾಂಶಗಳನ್ನು ಒದಗಿಸುತ್ತದೆ:
ಪಪ್ಪಾಯದಲ್ಲಿ ವಿಟಮಿನ್​ಗಳು ಸಮೃದ್ಧವಾಗಿವೆ. ಆ್ಯಂಟಿಆಕ್ಸಿಡೆಂಟ್​ ಆಗಿರುವ ವಿಟಮಿನ್​ ಎ, ಇ ಹಾಗೂ ಸಿ ಪಪ್ಪಾಯದಲ್ಲಿವೆ. ಜೊತೆಗೆ ವಿಟಮಿನ್​ ಬಿ , ಮಿನರಲ್ಸ್​ಗಳು ಕೂಡ ಇರುವುದರಿಂದ ಇದು ಜೀವಕೋಶಗಳ ಮರುಹುಟ್ಟಿಗೆ ಸಹಾಯ ಮಾಡುತ್ತದೆ.

ಉರಿಯೂತವನ್ನು ಕಡಿಮೆ ಮಾಡುತ್ತದೆ:
ಪಪ್ಪಾಯಾದಲ್ಲಿ ಪಾಪಿನ್​ ಹಾಗೂ ಕೈಮೊಪಾಪಿನ್​ ಎಂಬ ಕಿಣ್ವಗಳಿರುತ್ತವೆ. ಇವು ಉರಿಯೂತವನ್ನು ಕಡಿಮೆ ಮಾಡಿ ದೀರ್ಘಕಾಲದ ಸಮಸ್ಯೆಯನ್ನು ಶಮನಗೊಳಿಸುತ್ತದೆ. ಜೊತೆಗೆ ಆರ್ಥರೈಟಿಸ್​ನಂತಹ ಸಮಸ್ಯೆಯನ್ನೂ ಕಡಿಮೆ ಮಾಡುತ್ತದೆ.

ತ್ವಚೆಯ ಆರೋಗ್ಯಕ್ಕೂ ಉತ್ತಮ:
ಪಪ್ಪಾಯದಲ್ಲಿರುವ ವಿಟಮಿನ್​ ಇ ಅಂಶ ಜೀವಕೊಶಗಳು ಹಾನಿಗೊಳಗಾಗುವುದನ್ನು ತಡೆಯುತ್ತದೆ, ಜೊತೆಗೆ ವಯಸ್ಸಿಗೂ ಮುಂಚೆ ನೆರಿಗೆಗಳು ಮೂಡುವುದನ್ನು ತಡೆಯುತ್ತದೆ. ಪಪ್ಪಾಯದಲ್ಲಿರುವ ಅಗತ್ಯ ಎಣ್ಣೆಯಂಶವು ತ್ವಚೆಯನ್ನು ಮಾಯಿಶ್ಚರೈಸ್​ ಮಾಡುತ್ತದೆ.

ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ:
ದೇಹದಲ್ಲಿ ರಕ್ತ ಹೆಪ್ಪುಗಟ್ಟುವುದರಿಂದ ರಕ್ತ ಸಂಚಾರಕ್ಕೆ ತೊಡಕು ಉಂಟಾಗುತ್ತದೆ. ಕೆಲವೊಂದು ಸಲ ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟುವುದರಿಂದ ಹಾರ್ಟ್​ ಅಟ್ಯಾಕ್​ ಆಗುವ ಸಂಭವ ಇರುತ್ತದೆ. ಪಪ್ಪಾಯದಲ್ಲಿ ಫೈಬ್ರಿನ್​ ಎನ್ನುವ ಪದಾರ್ಥ ಇರುವುದರಿಂದ ಇದು ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ.

ರೋಗನಿರೋಧಕ ವ್ಯವಸ್ಥೆಯನ್ನು ಬಲಗೊಳಿಸುತ್ತದೆ:
ಇದರಲ್ಲಿರುವ ವಿಟಮಿನ್ಸ್​ಗಳು ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು ಬಲಗೊಳಿಸಿ ಸೋಂಕುಗಳ ಜೊತೆ ಹೋರಾಡಲು ಸಹಾಯ ಮಾಡುತ್ತದೆ. ಪಪ್ಪಾಯವನ್ನು ನಿತ್ಯವೂ ಸೇವಿಸುವುದರಿಂದ ಶೀತ, ಜ್ವರವನ್ನು ಹರಡುವ ರೋಗಾಣುಗಳನ್ನು ತಡೆದು ದೇಹವನ್ನು ಆರೋಗ್ಯವಾಗಿರಿಸುತ್ತದೆ.

About Karnataka Express

Check Also

ಆ್ಯಕ್ಷನ್ ಪ್ರಿನ್ಸ್ ನಿಶ್ಚಿತಾರ್ಥ ಹುಡುಗಿ ಯಾರು ಗೊತ್ತಾ..!

ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ಸರ್ಜಾ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ. ಧ್ರುವ ಸರ್ಜಾ ಲವ್ ಕಮ್ ಅರೇಂಜ್ಡ್ …

Leave a Reply

Your email address will not be published. Required fields are marked *