Breaking News
Home / Featured / ಆರೋಗ್ಯಕರ ಗುಣಗಳಿಂದಲೇ ಹೆಸರು ಮಾಡಿರುವ ಈ ಪ್ಲಮ್ ಹಣ್ಣು ಸೇವನೆ ಮಾಡಿ ಈ ಲಾಭಗಳನ್ನು ಪಡೆದುಕೊಳ್ಳಿ..!

ಆರೋಗ್ಯಕರ ಗುಣಗಳಿಂದಲೇ ಹೆಸರು ಮಾಡಿರುವ ಈ ಪ್ಲಮ್ ಹಣ್ಣು ಸೇವನೆ ಮಾಡಿ ಈ ಲಾಭಗಳನ್ನು ಪಡೆದುಕೊಳ್ಳಿ..!

ಪ್ಲಮ್ ಪ್ರೂನಸ್ ಜಾತಿಯ ಉಪಜಾತಿ ಪ್ರೂನಸ್‍ನ ಒಂದು ಹಣ್ಣು. ಕುಡಿಗಳು ಒಂದು ಅಂತ್ಯ ಮೊಗ್ಗು ಹಾಗೂ ಏಕಾಂಗಿ ಪಾರ್ಶ್ವ ಮೊಗ್ಗುಗಳನ್ನು (ಗೊಂಚಲುಗೊಂಚಲಾಗಿರದೆ) ಹೊಂದಿ, ಹೂವುಗಳು ಗಿಡ್ಡನೆಯ ಕಾಂಡಗಳ ಮೇಲೆ ಒಂದರಿಂದ ಐದರ ಗುಂಪುಗಳಲ್ಲಿ ಒಟ್ಟಿಗೆ ಇದ್ದು, ಮತ್ತು ಹಣ್ಣು ಒಂದು ಪಾರ್ಶ್ವದಲ್ಲಿ ಹಾದು ಕೆಳಗೆ ಹೋಗುವ ಒಂದು ತೋಡು ಹಾಗೂ ನಯವಾದ ಗೊರಟೆಯನ್ನು ಹೊಂದಿ ಭಿನ್ನವಾಗಿದೆ. ಪಕ್ವ ಪ್ಲಮ್ ಹಣ್ಣು ಅದಕ್ಕೆ ಮಾಸಲು ಬೂದು ಹಸಿರು ರೂಪವನ್ನು ಕೊಡುವ ಬೂದು-ಬಿಳಿ ಲೇಪವನ್ನು ಹೊಂದಿರಬಹುದು. ಪ್ಲಮ್ ಹಣ್ಣು ಆರೋಗ್ಯಕರ ಗುಣಗಳಿಂದಲೇ ಹೆಸರು ಪಡೆದಿದೆ. ಆದರೆ ದುಬಾರಿ. ಈ ಹಣ್ಣಿನಲ್ಲಿರುವ ಪೋಷಕಾಂಶಗಳ ವಿವರ ಕೆಳಗಿದೆ.

ಪ್ಲಮ್‌ಹಣ್ಣಿನಲ್ಲಿ ಆರೋಗ್ಯ ಸಮತೋಲನಕ್ಕೆ ಅತ್ಯವಶ್ಯಕವಾಗಿರುವ ಆ್ಯಂಟಿಯಾಕ್ಸಿಡಂಟ್ ಅಂಶಗಳು ಹೇರಳವಾಗಿವೆ.
ಪ್ಲಮ್ ಹಣ್ಣಿನಲ್ಲಿ ನಾರಿನಂಶ ಹೆಚ್ಚಿರುವುದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ.
ಮಲಬದ್ಧತೆ ತಡೆಯುವಲ್ಲಿ ಇದು ಸಹಕರಿಸುತ್ತದೆ.

ಜೀವಕೋಶಗಳು ಆರೋಗ್ಯಯುತವಾಗಿರಲು ಸಹಾಯ ಮಾಡುತ್ತದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ದೇಹವು ಕಬ್ಬಿಣಂಶವನ್ನು ಹೀರಿಕೊಳ್ಳಲು ನೆರವಾಗುತ್ತದೆ.

ಕ್ಯಾಲೊರಿ ಕಡಿಮೆ ಇರುತ್ತದೆ.
ಲ್ಯೂಟೀನ್‌, ಝಿಕ್ಸಾಂತಿನ್ ಹೆಚ್ಚಿರುವುದರಿಂದ ನರಸಂಬಂಧಿ ಸಮಸ್ಯೆಯನ್ನು ತಡೆಯುವಲ್ಲಿ ಸ್ವಲ್ಪ ಮಟ್ಟಿಗೆ ಉಪಯೋಗವಾಗಬಲ್ಲದು.ಪ್ಲಮ್‌ ಹಣ್ಣಿನಲ್ಲಿನ ನಿಯಾಸಿನ್, ವಿಟಮಿನ್ ಬಿ6, ಪ್ಯಾಂಟೊಥೆನಿಕ್, ಆ್ಯಸಿಡ್ ಅಂಶಗಳು ಮರೆಗುಳಿತನ (ಅಲ್ಜಮೈರ್) ಸಾಧ್ಯತೆಯನ್ನು ತಪ್ಪಿಸಬಹುದು.

ಮುಪ್ಪಿನ ಲಕ್ಷಣಗಳನ್ನು ಕುಗ್ಗಿಸುತ್ತದೆ ಮತ್ತು ಒಂದು ಸಾಮಾನ್ಯ ಗಾತ್ರದ ಪ್ಲಮ್ ಹಣ್ಣಿನಲ್ಲಿ 113 ಮಿ.ಗ್ರಾಂ ಪೊಟಾಷಿಯಂ ಅಂಶವಿದ್ದು, ಅದು ರಕ್ತದ ಏರೊತ್ತಡವನ್ನು ಕಡಿಮೆ ಮಾಡುವುದಲ್ಲದೆ, ಪಾರ್ಶ್ವವಾಯು ಸಾಧ್ಯತೆಯನ್ನು ತಗ್ಗಿಸುತ್ತದೆ.
ಪ್ಲಮ್‌ನಲ್ಲಿನ ಕೆಂಪು ನೀಲಿ ಪಿಗ್ಮೆಂಟ್‌ಗಳು– ಆ್ಯಂಥೊಸಿಯಾನಿನ್‌ಗಳು ಕ್ಯಾನ್ಸರ್‌ಕಾರಕ ಅಂಶಗಳನ್ನು ದೂರವಿರಿಸುತ್ತದೆ.

About Karnataka Express

Check Also

ಆ್ಯಕ್ಷನ್ ಪ್ರಿನ್ಸ್ ನಿಶ್ಚಿತಾರ್ಥ ಹುಡುಗಿ ಯಾರು ಗೊತ್ತಾ..!

ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ಸರ್ಜಾ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ. ಧ್ರುವ ಸರ್ಜಾ ಲವ್ ಕಮ್ ಅರೇಂಜ್ಡ್ …

Leave a Reply

Your email address will not be published. Required fields are marked *