Breaking News
Home / ಆರೋಗ್ಯ / ಮರುಭೂಮಿಯ ಬಂಗಾರವೆಂದೇ ಕರೆಯುವ ಖರ್ಜುರ ಆರೋಗ್ಯಕ್ಕೂ ಮತ್ತು ನಿಮ್ಮ ಸೌಂದರ್ಯಕ್ಕೂ ಉತ್ತಮ ಹಣ್ಣು..!

ಮರುಭೂಮಿಯ ಬಂಗಾರವೆಂದೇ ಕರೆಯುವ ಖರ್ಜುರ ಆರೋಗ್ಯಕ್ಕೂ ಮತ್ತು ನಿಮ್ಮ ಸೌಂದರ್ಯಕ್ಕೂ ಉತ್ತಮ ಹಣ್ಣು..!

ಮರುಭೂಮಿಯಲ್ಲಿ ಬೆಳೆಯುವ ಬಂಗಾರವೆಂದೇ ಕರೆಯಲ್ಪಡುವ ಖರ್ಜೂರದಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಹಾಗೂ ಪ್ರೋಟೀನ್ ಸಮೃದ್ಧವಾಗಿದೆ. ಇದನ್ನು ಹಲವಾರು ರೀತಿಯಿಂದ ಆಹಾರಗಳಲ್ಲಿ ಬಳಸಿಕೊಳ್ಳುತ್ತಾರೆ. ಸಿಹಿ ಖರ್ಜೂರವು ಮಕ್ಕಳಿಂದ ಹಿಡಿದು ವಯೋವೃದ್ಧರ ತನಕ ಪ್ರತಿಯೊಬ್ಬರಿಗೂ ಇಷ್ಟವಾಗುವುದು. ಖರ್ಜೂರವು ದೇಹಕ್ಕೆ ಮಾತ್ರವಲ್ಲದೆ ತ್ವಚೆ ಹಾಗೂ ಕೂದಲಿಗೂ ತುಂಬಾ ಲಾಭಕಾರಿ ಎನ್ನಲಾಗಿದೆ. ಖರ್ಜೂರವನ್ನು ಹಲವಾರು ರೀತಿಯಿಂದ ಸೌಂದರ್ಯವರ್ಧಕವಾಗಿಯೂ ಬಳಸಲಾಗುತ್ತದೆ.

ಖರ್ಜೂರವನ್ನು ನಿಮ್ಮ ಚರ್ಮದ ಆರೈಕೆಯಲ್ಲಿ ಬಳಸಿಕೊಂಡರೆ ಅದು ಚರ್ಮಕ್ಕೆ ಕಾಂತಿ ಹಾಗೂ ಯೌವನ ನೀಡುವುದು. ಖರ್ಜೂರದಲ್ಲಿ ಇರುವಂತಹ ಪ್ರೋಟೀನ್ ಮತ್ತು ಕಿಣ್ವಗಳು ಚರ್ಮವನ್ನು ಆರೋಗ್ಯವಾಗಿಡುವುದು ಮಾತ್ರವಲ್ಲದೆ ಜೋತು ಬೀಳದಂತೆ ತಡೆಯುತ್ತದೆ. ಹೀಗ ಖರ್ಜೂರದಿಂದ ಫೇಸ್ ಪ್ಯಾಕ್ ಹೇಗೆ ತಯಾರಿಸುವುದು ಎಂದು ನಿಮಗನಿಸುತ್ತಿರಬಹುದು. ಖರ್ಜೂರದ ಫೇಸ್ ಪ್ಯಾಕ್ ಮಾಡಲು ಬೀಜ ತೆಗೆದ ಖರ್ಜೂರ ತೆಗೆದುಕೊಳ್ಳಿ ಮತ್ತು ಅದನ್ನು ಹಾಲಿನಲ್ಲಿ ನೆನೆಯಲು ಹಾಕಿ. ರಾತ್ರಿಯಿಡಿ ಹಾಗೆ ಬಿಟ್ಟು ಬೆಳಿಗ್ಗೆ ತೆಗೆದು ರುಬ್ಬಿಕೊಂಡು ದಪ್ಪಗಿನ ಪೇಸ್ಟ್ ಮಾಡಿ. ಇದನ್ನು ಮುಖಕ್ಕೆ ಹಚ್ಚಿಕೊಂಡು ಸ್ವಲ್ಪ ಸಮಯ ಬಿಟ್ಟು ತಣ್ಣೀರಿನಿಂದ ಮುಖ ತೊಳೆದರೆ ಕಾಂತಿ ಸಿಗುವುದು.

ಜೀವಕೋಶಗಳಿಗೆ ಉಂಟಾಗುವಂತಹ ಆಕ್ಸಿಡೇಟಿವ್ ಒತ್ತಡವನ್ನು ಪ್ರಚೋದಿಸುವ ಫ್ರೀ ರ್ಯಾಡಿಕಲ್ ನ್ನು ಖರ್ಜೂರದಲ್ಲಿ ಇರುವಂತಹ ಆ್ಯಂಟಿಆಕ್ಸಿಡೆಂಟ್ ಕೊಂದು ಹಾಕುವುದು. ಖರ್ಜೂರವನ್ನು ಬಳಸಿದರೆ ಇದು ವಯಸ್ಸಾಗುವ ಲಕ್ಷಣ ತಡೆದು ನೆರಿಗೆ ಹಾಗೂ ಗೆರೆಗಳು ಬೀಳುವ ಚರ್ಮವನ್ನು ಸುಂದರಗೊಳಿಸುವುದು.

ವಯಸ್ಸಾಗುವ ಲಕ್ಷಣ ತಡೆಯುವಂತಹ ಫೇಸ್ ಪ್ಯಾಕ್ ಮಾಡಬೇಕಾದರೆ ಕೆಲವು ಖರ್ಜೂರದ ಬೀಜ ತೆಗೆದು ಅದನ್ನು ರುಬ್ಬಿಕೊಂಡು ಪೇಸ್ಟ್ ಮಾಡಬೇಕು. ಇದಕ್ಕೆ ಒಂದು ಚಮಚ ಮೊಸರು ಮತ್ತು ಒಂದು ಚಮಚ ಜೇನುತುಪ್ಪ ಸೇರಿಸಿಕೊಳ್ಳಿ. ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಂಡು ಸ್ವಲ್ಪ ಸಮಯ ಬಿಟ್ಟು ತಣ್ಣೀರಿನಿಂದ ತೊಳೆಯಿರಿ.

ಕೂದಲು ಉದುರುವುದಕ್ಕೆ ಕೂದಲು ಉದುರುವ ಸಮಸ್ಯೆಯನ್ನು ಖರ್ಜೂರವು ಸುಲಭವಾಗಿ ನಿವಾರಣೆ ಮಾಡುವುದು. ವಿಟಮಿನ್ ಕೊರತೆಯಿಂದಾಗಿ ಕೂದಲು ಉದುರುವುದು ಮತ್ತು ಕೂದಲಿನ ಕೋಶಗಳು ದುರ್ಬಲಗೊಳ್ಳುವುದು. ಖರ್ಜೂರದಲ್ಲಿ ಕಬ್ಬಿನಾಂಶ ಸಮೃದ್ಧವಾಗಿರುವ ಕಾರಣ ಇದು ಕೂದಲಿನ ಬೆಳವಣಿಗೆಗೆ ನೆರವಾಗುವುದು ಮತ್ತು ಇದರಿಂದ ಕೂದಲು ಉದುರುವುದು ಕಡಿಮೆಯಾಗುವುದು. ಖರ್ಜೂರದ ಪೇಸ್ಟ್ ಮಾಡಿಕೊಂಡು ಕೂದಲಿಗೆ ಹಚ್ಚಿ ಹತ್ತು ನಿಮಿಷ ಬಿಟ್ಟು ತೊಳೆಯಿರಿ. ಖರ್ಜೂರ ನಿಯಮಿತವಾಗಿ ಸೇವನೆ ಮಾಡುತ್ತಾ ಇದ್ದರೆ ಕೂದಲು ಉದುರುವ ಸಮಸ್ಯೆ ನಿವಾರಣೆಯಾಗುವುದು.

ಪ್ರತಿದಿನ ಸುಮಾರು ಎರಡರಿಂದ ಮೂರು ಖರ್ಜೂರಗಳನ್ನು ತಿನ್ನುವ ಅಭ್ಯಾಸ ಮಾಡಿಕೊಂಡರೆ ಕೂದಲ ಬುಡಗಳು ದೃಢಗೊಳ್ಳುವ ಮೂಲಕ ಕೂದಲು ಉದುರುವ ಸಂಖ್ಯೆ ಕಡಿಮೆಯಾಗುತ್ತದೆ. ಇದರಲ್ಲಿರುವ ವಿಟಮಿನ್ ಬಿ ಕೂದಲ ಬುಡಕ್ಕೆ ಹೆಚ್ಚಿನ ಪೋಷಣೆ ನೀಡುವ ಮೂಲಕ ಕೂದಲಿಗೂ ಉತ್ತಮ ಪೋಷಣೆ ದೊರೆತು ಆರೋಗ್ಯಕರವಾಗುತ್ತದೆ. ಇದು ನಿಮ್ಮ ಕೂದಲನ್ನು ಉದ್ದ ಮತ್ತು ಆರೋಗ್ಯಕರವಾಗಿಸುತ್ತದೆ.

About admin

Check Also

ಹುಳುಕಡ್ಡಿ ಸಮಸ್ಯೆಗೆ ನೇರಳೆಯಲ್ಲಿ ಅಡಗಿದೆ ಓಷಧಿ ಗುಣಗಳು..!

ನಮಗೆ ಮುಖದಲ್ಲಿ ಅಥವಾ ಮೈ ಕೈ ಮೇಲೆ ಹುಳುಕಡ್ಡಿಯಂತಹ ಸಮಸ್ಯೆ ಬಂದರೆ ಅದು ನಮಗೆ ತುಂಬಾ ಹಿಂಸೆ ಅನ್ನಿಸುತ್ತದೆ ಅದು …

Leave a Reply

Your email address will not be published. Required fields are marked *