Breaking News
Home / ಆರೋಗ್ಯ / ಮಂಡಿ ನೋವು ಇನ್ನು ಮುಂತಾದ ಸಮಸ್ಯೆಗಳಿಗೆ ಎಳ್ಳೆಣ್ಣೆಯಲ್ಲಿ ಇದೆ ನೋಡಿ ಸೂಕ್ತ ಪರಿಹಾರ..!

ಮಂಡಿ ನೋವು ಇನ್ನು ಮುಂತಾದ ಸಮಸ್ಯೆಗಳಿಗೆ ಎಳ್ಳೆಣ್ಣೆಯಲ್ಲಿ ಇದೆ ನೋಡಿ ಸೂಕ್ತ ಪರಿಹಾರ..!

ಹೌದು ಇತ್ತೀಚಿನ ದಿನಗಳಲ್ಲಿ ಮಂಡಿ ನೋವು ಎಲ್ಲರಿಗೂ ಕಾಡುವಂತ ಪ್ರಮುಖ ಸಮಸ್ಯೆಯಾಗಿದೆ, ಅದಕ್ಕೆ ಏನು ಮಾಡಬೇಕೆಂಬ ಚಿಂತೆ ನಿಮಗೆ ಕಾಡುತ್ತಿದ್ದರೆ ಈ ಎಳ್ಳೆಣ್ಣೆಯಲ್ಲಿ ಅಡಗಿದೆ ನೋಡಿ ಪರಿಹಾರ.

ಮಂಡಿಯ ನೋವು ಮತ್ತು ಮಂಡಿ ಊತವಿದ್ದಲ್ಲಿ ಎಳ್ಳೆಣ್ಣೆಯಲ್ಲಿ 3 ಚಮಚ ಹಿಪ್ಪಲಿ ಪುಡಿಯನ್ನು ಚೆನ್ನಾಗಿ ಕರಿದು ಆ ಎಣ್ಣೆಯನ್ನು ಮಂಡಿಗೆ ಹಚ್ಚಿದರೆ ನೋವು ಮತ್ತು ಊತ ಕಡಿಮೆಯಾಗುತ್ತದೆ. ಮೂರು ಚಮಚ ಎಳ್ಳೆಣ್ಣೆಯ ಜೊತೆ ಒಂದು ಚಮಚ ಬೆಳ್ಳುಳ್ಳಿಯನ್ನು ಜಜ್ಜಿ ಎದೆಗೆ ತಿಕ್ಕಿದರೆ ಎದೆಯಲ್ಲಿ ಕಟ್ಟಿದ ಕಫ ಕರಗುತ್ತದೆ

ಬೇವಿನ ಎಲೆ ಪುಡಿಯನ್ನು ಅರಿಶಿನ ಮತ್ತು ಎಳ್ಳೆಣ್ಣೆಯ ಜೊತೆ ಕಲಸಿ ಲೇಪ ಮಾಡಿದರೆ, ಚರ್ಮದ ರೋಗವು ಗುಣವಾಗುತ್ತದೆ ಮತ್ತು ಎಲ್ಲಾ ತರಹದ ಬಾಯಿಯ ರೋಗಗಳಿಗೆ ಪ್ರತಿ ದಿನ ಎಳ್ಳೆಣ್ಣೆಯಿಂದ ಬಾಯಿಮುಕ್ಕಳಿಸಿದರೆ ನಿವಾರಣೆಯಾಗುತ್ತದೆ.

ನಿಮಗೆ ನಿದ್ದೆ ಮಾಡುವ ಕೊರತೆ ಇದ್ದು ಚೆನ್ನಾಗಿ ನಿದ್ದೆ ಬರಬೇಕೆಂದರೆ ಎಳ್ಳೆಣ್ಣೆಯ ಜತೆ ಸೋರೆಕಾಯಿಯ ರಸವನ್ನು ಬೆರೆಸಿ ತಲೆಗೆ ಹಚ್ಚಿದರೆ ನಿದ್ರಾಹೀನತೆಯಂತಹ ಸಮಸ್ಯೆ ನಿವಾರಣೆಯಾಗುತ್ತದೆ. ಎಳ್ಳೆಣ್ಣೆಯ ಜತೆ ಅರಿಶಿನವನ್ನು ಕಲಸಿ ಮುಖಕ್ಕೆ ಲೇಪನ ಮಾಡಿದರೆ ಮೊಡವೆಗಳು ನಿವಾರಣೆಯಾಗುತ್ತದೆ.

About Karnataka Express

Check Also

ಹುಳುಕಡ್ಡಿ ಸಮಸ್ಯೆಗೆ ನೇರಳೆಯಲ್ಲಿ ಅಡಗಿದೆ ಓಷಧಿ ಗುಣಗಳು..!

ನಮಗೆ ಮುಖದಲ್ಲಿ ಅಥವಾ ಮೈ ಕೈ ಮೇಲೆ ಹುಳುಕಡ್ಡಿಯಂತಹ ಸಮಸ್ಯೆ ಬಂದರೆ ಅದು ನಮಗೆ ತುಂಬಾ ಹಿಂಸೆ ಅನ್ನಿಸುತ್ತದೆ ಅದು …

Leave a Reply

Your email address will not be published. Required fields are marked *