Breaking News
Home / ಲೈಫ್ ಸ್ಟೈಲ್ / ನಿಮಗೆ ಕಾಲಿನ ಹಿಮ್ಮಡಿ ಬಿರುಕು ಸಮಸ್ಯೆಯೇ ಹಾಗಾದರೆ ಹೀಗೆ ಮಾಡಿ..!

ನಿಮಗೆ ಕಾಲಿನ ಹಿಮ್ಮಡಿ ಬಿರುಕು ಸಮಸ್ಯೆಯೇ ಹಾಗಾದರೆ ಹೀಗೆ ಮಾಡಿ..!

ಹೌದು ಕೆಲವರಿಗೆ ಚಳಿಗಾಲ ಅಥವಾ ಹೆಚ್ಚು ಉಷ್ಣ ಆದರೆ ಕಾಲಿನ ಹಿಮ್ಮಡಿ ಹೊಡೆಯುವ ಸಮಸ್ಯೆ ಇರುತ್ತದೆ ಅದರಿಂದ ನೆಡೆದಾಡಲು ತುಂಬಾ ನೋವಾಗುತ್ತದೆ ಅಂತಹ ಸಮಸ್ಯೆಗಳಿಗೆ ನಿಮ್ಮ ಮನೆಯಲ್ಲಿಯೇ ಈ ರೀತಿ ಮಾಡಿ ಸುಲಭವಾಗಿ ಹಿಮ್ಮಡಿ ಸಮಸ್ಯೆ ಗುಣವಾಗುತ್ತದೆ.

ಪಾದಗಳಲ್ಲಿ ಬಿರುಕಿನ ಸಮಸ್ಯೆಗೆ ಪ್ರತಿದಿನ ಸ್ಕ್ರಬ್ಬರ್‌ನಲ್ಲಿ ತಿಕ್ಕಿ ತೊಳೆದು ಮಾಯಿಶ್ಚರೈಸರ್‌ ಹಚ್ಚಿ ಆರೈಕೆ ಮಾಡಬೇಕು, ಮತ್ತು ವಾರಕ್ಕೊಮ್ಮೆ ಈ ರೀತಿ ಮನೆಯಲ್ಲೇ ಪೆಡಿಕ್ಯೂರ್‌ ಮಾಡಿದರೆ ನಿಮ್ಮ ಪಾದಗಳಲ್ಲಿನ ಬಿರುಕು ಕಡಿಮೆಯಾಗಿ ಆಕರ್ಷಕವಾಗಿ ಕಾಣುವುದು:

ಮನೆಯಲ್ಲಿ ಪೆಡಿಕ್ಯೂರ್‌ ಮಾಡುವ ವಿಧಾನ:
ರಾತ್ರಿ ಸಮಯದಲ್ಲಿ ಪಾದಗಳನ್ನು ಪ್ಯೂಮಿಕ್‌ ಸ್ಟೋನ್‌ನಿಂದ ಚೆನ್ನಾಗಿ ತಿಕ್ಕಿ, ನಂತರ ಬ್ರಷ್‌ನಿಂದ ಉಗುರುಗಳನ್ನು ಸ್ವಚ್ಛ ಮಾಡಿ ಕಾಲುಗಳನ್ನು ತೊಳೆದು ಟವಲ್‌ನಿಂದ ಒರೆಸಿ. ನಂತರ ಎಳ್ಳೆಣ್ಣೆ, ಗಂಧದ ಎಣ್ಣೆಯನ್ನು ಕಾಲಿಗೆ ಹಚ್ಚಿ ಮಸಾಜ್ ಮಾಡಿ. ಎಣ್ಣೆಯನ್ನು ಪಾದಗಳು ಚೆನ್ನಾಗಿ ಹೀರಿಕೊಳ್ಳಲಿ.

ಮೇಣವನ್ನು ಕರಗಿಸಿ ಅದು ಸ್ವಲ್ಪ ತಣ್ಣಗಾದಾಗ ಹಿಮ್ಮಡಿ ಬಿರುಕುಗೊಂಡ ಜಾಗಕ್ಕೆ ಹಚ್ಚಿ ಮೇಣ ಪಾದಗಳಲ್ಲೇ ಗಟ್ಟಿಯಾಗಲಿ ಆದ್ದರಿಂದ ಕಾಲುಗಳಿಗೆ ಸಾಕ್ಸ್‌ ಧರಿಸಿ ಮಲಗಿ ಬೆಳಗ್ಗೆ ಎದ್ದ ಬಳಿಕ ಸಾಕ್ಸ್ ತೆಗೆದು ಪಾದಗಳಲ್ಲಿರುವ ಮೇಣವನ್ನು ತೆಗೆಯಿರಿ ನಂತರ ಕಾಲುಗಳನ್ನು ತೊಳೆದು ಮಾಯಿಶ್ಚರೈಸರ್‌ ಹಚ್ಚಿ. ಈ ರೀತಿ ವಾರಕ್ಕೊಮ್ಮೆ ಮಾಡುತ್ತಾ ಬಂದರೆ ಸಾಕು ಪಾದಗಳಲ್ಲಿ ಬಿರುಕು ಕಡಿಮೆಯಾಗಿ, ಪಾದಗಳು ನೋಡಲು ಸುಂದರವಾಗಿ ಕಾಣುತ್ತವೆ.

About Karnataka Express

Check Also

ತಲೆ ಹೊಟ್ಟು ನಿವಾರಣೆಗೆ ಸರಳ ಮನೆಮದ್ದು..!

ಹೌದು ತಲೆಹೊಟ್ಟಿನಿಂದ ಕಿರಿಕಿರಿ ಅನುಭವಿಸುವುದು ಮಾತ್ರವಲ್ಲ, ಅದರಿಂದ ಕೂದಲು ಉದುರುವ ಸಮಸ್ಯೆ ಕೂಡ ಕಂಡು ಬರುವುದು ಮತ್ತು ಮುಜುಗರ ಉಂಟುಮಾಡುತ್ತದೆ. …

Leave a Reply

Your email address will not be published. Required fields are marked *