Breaking News
Home / ಇತ್ತೀಚಿನ ಸುದ್ದಿಗಳು / ಮಧ್ಯ ಪ್ರದೇಶದ ಅಸೆಂಬ್ಲಿಯಲ್ಲಿ ಪಾಸ್ ಆಯ್ತು ಹೊಸ ಆದೇಶ ಅತ್ಯಚಾರದ ಅಪರಾಧಿಗೆ ಮರಣದಂಡನೆ..!

ಮಧ್ಯ ಪ್ರದೇಶದ ಅಸೆಂಬ್ಲಿಯಲ್ಲಿ ಪಾಸ್ ಆಯ್ತು ಹೊಸ ಆದೇಶ ಅತ್ಯಚಾರದ ಅಪರಾಧಿಗೆ ಮರಣದಂಡನೆ..!

ಮದ್ಯ ಪ್ರದೇಶದಲ್ಲಿ 12 ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರನ್ನು ಅತ್ಯಾಚಾರ ಮಾಡುವ ಅಪರಾಧಿಗಳಿಗೆ ಮರಣದಂಡನೆ ನೀಡುವಂತೆ ಮಧ್ಯಪ್ರದೇಶ ವಿಧಾನಸಭೆ ಸೋಮವಾರ ಒಂದು ಮಸೂದೆಯನ್ನು ಅಂಗೀಕರಿಸಿತು.

ಈ ಮಸೂದೆಯನ್ನು ಈಗ ಕೇಂದ್ರಕ್ಕೆ ರಾಷ್ಟ್ರಪತಿರವರ ಅನುಮೋದನೆಗೆ ರವಾನಿಸಲಾಗುವುದು. 2017 ರಲ್ಲಿ ದಾಂಧಿ ವಿಧಿ ವಿಧಿಕ್ ಎಂಬ ಮಸೂದೆಯನ್ನು ಅಧಿಕೃತವಾಗಿ ರಾಮ್ ನಾಥ್ ಕೋವಿಂದ್ ಅವರ ಅನುಮತಿಯ ನಂತರ ಕಾನೂನಿನಂತೆ ಅಂಗೀಕರಿಸಲಾಗುವುದು.


ಕಳೆದ ವರ್ಷ ಎಲ್ಲಾ ರಾಜ್ಯಗಳಲ್ಲಿ ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ.ಆದ್ದರಿಂದ ಇಂತಹ ಮಸೂದೆಯು ಸ್ವಾಗತಾರ್ಹ.ಕಳೆದ ವಾರ ಬಿಡುಗಡೆ ಮಾಡಲಾದ ರಾಷ್ಟ್ರೀಯ ಅಪರಾಧ ದಾಖಲೆಗಳ ವರದಿಯ ಪ್ರಕಾರ ದೇಶದ ಐದನೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಮಧ್ಯಪ್ರದೇಶ ದಲ್ಲಿ 4,882 ಅತ್ಯಾಚಾರ ಪ್ರಕರಣಗಳನ್ನು ದಾಖಲಿಸಿದೆ.ಇದರ ಪರಿಣಾಮಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟವು ಕಳೆದ ವಾರ 12 ವರ್ಷ ಅಥವಾ ಅದಕ್ಕಿಂತ ಕೆಳಗಿನ ವಯಸ್ಸಿನ ಹುಡುಗಿಯರ ಅತ್ಯಾಚಾರಕ್ಕೆ ಮರಣದಂಡನೆ ವಿಧಿಸಲು ಶಿಫಾರಸು ಮಾಡಿದೆ.


12 ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರನ್ನು ಅತ್ಯಾಚಾರ ಎಸಗಿದರೆ ಈ ಮಸೂದೆಯ ಪ್ರಕಾರ ಮರಣದಂಡನೆಯನ್ನು ಅಥವಾ 14 ವರ್ಷದ ಕಠಿಣ ಸೆರೆವಾಸ ಅಥವಾ ಜೀವಾವಧಿ ಶಿಕ್ಷೆಗೆ ಪ್ರಸ್ತಾಪಿಸುತ್ತದೆ. 12 ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರ ಗ್ಯಾಂಗ್ ಅತ್ಯಾಚಾರಕ್ಕೆ ಕನಿಷ್ಠ ಶಿಕ್ಷೆಯನ್ನು 20 ವರ್ಷಗಳ ಕಠಿಣ ಸೆರೆವಾಸಕ್ಕೆ ಹೆಚ್ಚಿಸಲಾಗಿದೆ.


ಈ ವಿಷಯದ ಬಗ್ಗೆ ಅಸೆಂಬ್ಲಿಯಲ್ಲಿ ಮಾತನಾಡಿದ ಚೌಹಾನ್, ಚಿಕ್ಕ ಹುಡುಗಿಯರನ್ನು ಅತ್ಯಾಚಾರ ಮಾಡುವವರು ಬದುಕುವ ಹಕ್ಕನ್ನು ಹೊಂದಿಲ್ಲ ಎಂದು ಹೇಳಿದರು.

About admin

Check Also

ಆ್ಯಕ್ಷನ್ ಪ್ರಿನ್ಸ್ ನಿಶ್ಚಿತಾರ್ಥ ಹುಡುಗಿ ಯಾರು ಗೊತ್ತಾ..!

ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ಧ್ರುವ ಸರ್ಜಾ ನಿಶ್ಚಿತಾರ್ಥ ನೇರವೇರಿಸಲು ಕುಟುಂಬ ಸಿದ್ಧತೆ ನಡೆಸಿದೆ. ಧ್ರುವ ಸರ್ಜಾ ಲವ್ ಕಮ್ ಅರೇಂಜ್ಡ್ …

Leave a Reply

Your email address will not be published. Required fields are marked *