Breaking News
Home / ಇತ್ತೀಚಿನ ಸುದ್ದಿಗಳು / ಪ್ರತಿದಿನ ಈ ದಂಪತಿ ಬಡವರಿಗೆ ಮತ್ತು ವೃದ್ಧರಿಗೆ ಉಚಿತ ಊಟ ಹಾಗು ಟಿಫಿನ್ ಸೆಂಟರ್ ನಡೆಸಲು ಕಾರಣ ಏನು ಗೊತ್ತಾ..!

ಪ್ರತಿದಿನ ಈ ದಂಪತಿ ಬಡವರಿಗೆ ಮತ್ತು ವೃದ್ಧರಿಗೆ ಉಚಿತ ಊಟ ಹಾಗು ಟಿಫಿನ್ ಸೆಂಟರ್ ನಡೆಸಲು ಕಾರಣ ಏನು ಗೊತ್ತಾ..!

ಹೌದು ಈ ದಂಪತಿ ಪ್ರತಿದಿನ ಬಡವರಿಗೆ ಮತ್ತು ವೃದ್ಧರಿಗೆ ಉಚಿತ ಊಟ ಮತ್ತು ಟಿಫಿನ್ ವ್ಯವಸ್ಥೆಯನ್ನು ಮಾಡಲಾಗಿದೆ.
ಮುಂಬೈನಲ್ಲಿ ಈ ಟಿಫಿನ್ ಸೆಂಟರ್ ನಡಸುತ್ತಿರುವ ಇವರು ಒಂದು ನೆನಪಿಗಾಗಿ ಈ ರೀತಿಯ ಉಚಿತ ಊಟದ ವ್ಯವಸ್ಥೆಯನ್ನು ಮಾಡುತಿದ್ದರೆ. ಇದಕ್ಕೆ ಕಾರಣ ಇವರ ಮಗ.

ಇವರ ಪುತ್ರ ನಿಮೇಶ್ ತನ್ನಾ 2011 ರಲ್ಲಿ ಒಂದು ಸ್ಥಳೀಯ ರೈಲ್ವೇ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಮುಂಬೈನಲ್ಲಿ ಮೀಟಿಂಗ್‍ವೊಂದಕ್ಕೆ ತೆರಳುತ್ತಿದ್ದ ವೇಳೆ ಜನಜಂಗುಳಿಯಿದ್ದ ರೈಲನ್ನು ಏರಿ ಸ್ಥಳದಲ್ಲೇ ಸಾವನ್ನಪ್ಪಿದ್ರು.

ಮಗನ ಸಾವಿನ ನಂತರ ಆತನ ಹೆಸರು ಸದಾ ಕಾಲ ಚಿರಸ್ಮರಣಿಯಾಗಿ ಇರಬೇಕು ಎಂದು ಬಡವರಿಗೆ ಊಟ ಒದಗಿಸುವ ಉದ್ದೇಶದಿಂದ ದಂಪತಿ ಶ್ರೀ ನಿಮೇಶ್ ತನ್ನಾ ಚಾರಿಟೇಬಲ್ ಟ್ರಸ್ಟ್ ಆರಂಭಿಸಿದರು.

ಮೊದಲು ಸಣ್ಣ ಅಡುಗೆ ಮನೆಯಲ್ಲಿ ಊಟವನ್ನು ತಯಾರಿಸಿಕೊಂಡು ಪ್ರತಿನಿತ್ಯ ಸುಮಾರು 30 ಮಂದಿಗೆ ನೀಡುತ್ತಿದ್ದರು. ಈಗ ಟ್ರಸ್ಟ್ ಅಭಿವೃದ್ಧಿಯಾಗಿ ಸುಮಾರು 7 ಸಿಬ್ಬಂದಿ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಆರೋಗ್ಯಕರವಾದ ಆಹಾರವನ್ನು ತಯಾರಿಸಿ ಮುಂಬೈನಲ್ಲಿ ಪ್ರತಿದಿನ 100 ಬಡ ಜನರಿಗೆ ಊಟವನ್ನು ನೀಡುತ್ತಿದ್ದಾರೆ. ಅಷ್ಟೇ ಅಲ್ಲದೇ ಮಕ್ಕಳಿಗೆ ಉಚಿತವಾಗಿ ಬಟ್ಟೆ, ಪುಸ್ತಕಗಳು ಹಾಗೂ ವೃದ್ಧರಿಗೆ ಔಷಧವನ್ನು ಕೂಡ ನೀಡುತ್ತಿದ್ದಾರೆ.

ಮಗನನ್ನು ಕಳೆದುಕೊಂಡ ನಂತರ ಅವನನ್ನು ಪ್ರತಿನಿತ್ಯ ಸ್ಮರಿಸುತ್ತಾ ಅವನ ನೆನಪಿನಲ್ಲಿ ಈ ತಂದೆ ತಾಯಿ ಈ ರೀತಿಯಾದ ಕೆಲಸವನ್ನು ಮಾಡುತಿದ್ದರೆ. ನೋಡಿ ಇಂತಹ ತಂದೆ ತಾಯಿಗಳಿಗೆ ನಮ್ಮೊದೊಂದು ಸಲಾಂ.

About admin

Check Also

ಯಡಿಯೂರಪ್ಪಗೆ ತಮ್ಮ ಕುರ್ಚಿ ಬಿಟ್ಟುಕೊಟ್ಟ ಮುಖ್ಯಮಂತ್ರಿ ಕುಮಾರಸ್ವಾಮಿ..!

ಹೌದು ಇದೇನಪ್ಪ ಯಡಿಯೂರಪ್ಪಗೆ ಕುಮಾರಸ್ವಾಮಿ ಕುರ್ಚಿ ಬಿಟ್ಟುಕೊಟ್ಟಿದ್ದಾರೆ ಅಂದ್ರೆ ಎಲ್ಲರು ಶಾಕ್ ಆಗುವ ವಿಚಾರವೇ ಈ ಎಲ್ಲ ನಾಯಕರು ಚುನಾವಣೆ …

Leave a Reply

Your email address will not be published. Required fields are marked *