Breaking News
Home / ಇತ್ತೀಚಿನ ಸುದ್ದಿಗಳು / ಮಾತು ಮೌನವಾದ ಪ್ರೀತಿ ಏನ್ ಆಗುತ್ತೆ ಅನ್ನೋದಕ್ಕೆ ಈ ಪ್ರೇಮ ಕಥೆಯೇ ಸಾಕ್ಷಿ..!

ಮಾತು ಮೌನವಾದ ಪ್ರೀತಿ ಏನ್ ಆಗುತ್ತೆ ಅನ್ನೋದಕ್ಕೆ ಈ ಪ್ರೇಮ ಕಥೆಯೇ ಸಾಕ್ಷಿ..!

ಹೌದು ಪ್ರೀತಿಯಲ್ಲಿ ಮಾತು ಅನ್ನೋದು ತುಂಬ ಮುಖ್ಯ ನಾವು ಬಯಸಿದ್ದನ್ನ ನಾವು ಪಡೆದುಕೊಳ್ಳಬೇಕು ಅಂದ್ರೆ ಅಲ್ಲಿ ಹೋರಾಟ ಮಾಡಲೇಬೇಕು ಅದು ಯಾವುದೇ ವಿಚಾರಕ್ಕೆ ಆದ್ರೂ ಸರೀನೇ ಯಾಕೆ ಅಂದ್ರೆ ಇವತ್ತಿನ ದಿನಮಾನಗಳು ಆ ರೀತಿಯಾಗಿವೆ ಕಲ್ಲು ಹೊಡೆದರೆ ಮಾವಿನ ಕಾಯಿ ಬೀಳುವುದು ಕಷ್ಟ ಅಂತ ಸಮಯದಲ್ಲಿ ನಾವು ನಮ್ಮ ಪ್ರೀತಿಯಲ್ಲಿ ಮಾತನಾಡದೆ ಸುಮ್ಮನೆ ಇದ್ರೆ ನಮ್ಮ ಪ್ರೀತಿ ತುಂಬ ದಿನ ಇರುತ್ತಾ..?

ಒಂದು ಸುಂದರ ಹಳ್ಳಿ ಹಚ್ಚ ಹಸಿರಿನಿಂದ ಕೂಡಿದ್ದ ಚಿಕ್ಕ ಹಳ್ಳಿಯಲ್ಲಿ ಒಂದು ಕೆರೆಯ ಹತ್ತಿರ ಒಂದು ಸುಂದರ ಪಾರ್ಕ್ ಇತ್ತು ಆ ಪಾರ್ಕ್ ಗೆ ಒಬ್ಬ ಹುಡುಗ ಬಿಸಿಲಿನಿಂದ ತಾಳಲಾರದೆ ಬಂದು ಕುಳಿತಿದ್ದ ಆ ಪಾರ್ಕನ ಸೌಂದರ್ಯ ನೋಡುತ್ತಾ ಆ ಹುಡುಗ ಅಲ್ಲೇ ಕೂತಿದ್ದ ಸಂಜೆ ಆಯಿತು ಅದೇ ಪಾರ್ಕ್ ಗೆ ಒಂದು ಸುಂದರ ಚಲುವೆ ಎಂಟ್ರಿ ಕೊಟ್ಟಳು ಅವಳ ಕಮಲದಂತ ಕೆನ್ನೆ ನೋಡಿ ಆ ಹುಡುಗ ಅಲ್ಲೇ ಸುಸ್ತಾಗಿ ಕುಳಿತು ಬಿಟ್ಟ.

ಆದ್ರೆ ಆ ಹುಡುಗಿ ಅವನ ಹತ್ತಿರ ಬಂದು ಇಲ್ಲಿ ಕುಡಿಯಲು ನೀರು ಸಿಗುತ್ತಾ ಅಂತ ಕೇಳಿದಳು ಆದ್ರೆ ಹುಡುಗ ಯಾವುದು ಲೋಕದಲ್ಲಿ ತೇಲುತಿದ್ದ ಆ ಹುಡುಗಿ ಹೇಳಿದ ಮಾತುಗಳು ಅವನ ಕಿವಿಗೆ ಬೀಳಲೇ ಇಲ್ಲ ಆ ಹುಡುಗಿ ಇವನ ಅವತಾರ ನೋಡಿ ಸುತ್ತ ಮುತ್ತ ನೋಡಿ ಅಲ್ಲೇ ಇದ್ದ ನಲ್ಲಿಯಲ್ಲಿ ನೀರು ಕುಡಿದು ಪಾರ್ಕ್ ನಲ್ಲಿ ಒಂದು ರೌಂಡ್ ಹಾಕಿದಳು.

ಆದ್ರೆ ನಮ್ಮ ಹುಡುಗ ಅವಳ ಸೌಂದರ್ಯ ವನ್ನು ವರ್ಣಿಸುತ್ತ ಅಲ್ಲೇ ಪಾರ್ಕನಲ್ಲಿ ಮರಳಿನ ಮೇಲೆ ಅವಳ ಸುಂದರವಾದ ಮುಖವನ್ನು ಬರೆದು ಅದನ್ನು ನೋಡುತ್ತಾ ಆನಂದಿಸಿಕೊಂಡು ಮನೆಗೆ ಹೋಗುತ್ತಾನೆ ಆ ಹುಡುಗಿಯು ಮನೆಗೆ ಹೋಗುತ್ತಾಳೆ ಆದ್ರೆ ಆ ಹುಡುಗಿಯ ಮನಸಿನಲ್ಲಿ ಅವನ ಬಗ್ಗೆ ಒಂದಿಷ್ಟು ಪ್ರೀತಿಯ ಚಿಗುರು ಪ್ರಾಂಭವಾಗಿರುತ್ತೆ.

ಹೀಗೆ ಆ ಹುಡುಗಿ ಆ ಹುಡುಗನನ್ನು ನೋಡಲು ದಿನ ಪಾರ್ಕ್ ಬರುತ್ತಾಳೆ ಆ ಹುಡುಗನು ಪಾರ್ಕ್ ಗೆ ಬರುತ್ತಾನೆ ಆದರೆ ಒಬ್ಬರಿಗೆ ಒಬ್ಬರು ಮಾನಾಡುವುದಿಲ್ಲ. ಅವಳ ಮನಸಿನಲ್ಲಿ ಪ್ರೀತಿಯ ಭಾವನೆಯನ್ನು ಹೇಳಿಕೊಳ್ಳಬೇಕು ಅನ್ನುವ ಅಸೆ ತುಂಬ ಇರುತ್ತದೆ ಆದ್ರೆ ಆ ಹುಡುಗ ತನ್ನ ಪ್ರೀತಿಯನ್ನ ಮನಸಿನಲ್ಲೇ ಇಟ್ಟುಕೊಂಡು ಬೆಟ್ಟದಷ್ಟು ಅವಳ ಪ್ರೀತಿಯ ಬಗ್ಗೆ ಕನಸು ಕಾಣುತ್ತಾನೆ.

ಪ್ರತಿದಿನ ಸಂಜೆ ಇವರದ್ದು ಬರಿ ಇದೆ ಕೆಲಸ ಬರುವುದು ಒಬ್ಬರನ್ನು ಒಬ್ಬರು ನೋಡುವುದು ನಗುವುದು ಮಾತಿಲ್ಲ ಕಥೆಯಿಲ್ಲ. ಹೀಗೆ ದಿನ ಕಳೆದಂತೆ ಒಂದು ದಿನ ಆ ಹುಡುಗಿ ಆ ಪಾರ್ಕ್ಗೆ ಬರುವುದಿಲ್ಲ ಆ ದಿನ ಹುಡುಗ ತುಂಬ ಬೇಸರದಿಂದ ಮನೆಗೆ ಹೋಗುತ್ತಾನೆ.

ಮತ್ತೆ ಇನ್ನೊಂದು ದಿನ ಪಾರ್ಕ್ ಗೆ ಬರುತ್ತಾನೆ ಆದ್ರೆ ಆ ಹುಡುಗಿ ಬಂದಿರುವುದಿಲ್ಲ ಹುಡುಗ ಬೇಸರದಿಂದ ಮನೆಕಡೆ ಹೋಗುವಾಗ ಒಂದು ಮದುವೆಯ ಮೆರವಣಿಗೆ ಬರುತ್ತೆ ಅಲ್ಲೇ ದಾರಿಯ ಪಕ್ಕದಲ್ಲಿ ನಿಂತುಕೊಂಡು ಹುಡುಗ ಆ ಮೆರವಣಿಗೆಯನ್ನು ನೋಡುತ್ತಾನೆ.

ಮೆರವಣಿಗೆಯ ಗಾಡಿಯಲ್ಲಿ ಕೂತಿರುವ ಹುಡುಗಿ ಅವನು ಪ್ರೀತಿ ಮಾಡುವ ಹುಡುಗಿಯಾಗಿರುತ್ತಾಳೆ. ಅದನ್ನು ನೋಡಿದ ಹುಡುಗ ಮನಸಿನಲ್ಲಿ ನೋವು ತುಂಬಿಕೊಳ್ಳುತ್ತಾನೆ. ಹುಡುಗಿ ಮೆರವಣಿಗೆ ಹೋಗುವಾಗ ಹುಡುಗಗನ್ನು ನೋಡಿ ಕಣ್ಣಿನಲ್ಲಿ ಸಣ್ಣಗೆ ಕಣ್ಣೀರು ಬರಲು ಶುರುವಾಗುತ್ತದೆ ಪಕ್ಕದಲೇ ಇದ್ದ ಗಂಡ ಕೇಳುತ್ತಾನೆ ಏನ್ ಆಯಿತು ಅಂತ ಆಗ ಹುಡುಗಿ ಮನಸಿನಲ್ಲಿರೋದು ಹೇಗೆ ಹೇಳಲೋ ಮಾತೇ ಮೌನವಾಗಿದೆ ಎದೆ ಬಡಿತ ಜೋರಾಗಿದೆ ಅಂತ ತನ್ನ ಮನಸಿನಲ್ಲಿ ಅಂದುಕೊಂಡು. ತನ್ನ ಗಂಡನಿಗೆ ಹೇಳುತ್ತಾಳೆ ನನ್ನ ಹೂವಿನ ಹಾರದಲ್ಲಿರುವ ಗುಲಾಬಿಯ ಮುಳ್ಳು ಚುಚ್ಚಿತು ಅಂತ..

ನೋಡಿ ಅದಕ್ಕೆ ಹೇಳೋದು ಪ್ರೀತಿ ಮಾಡುವಾಗ ಮನಸಿನಲ್ಲಿ ಇರೋದನ್ನ ಹೇಳಿಕೊಂಡು ನಿಮ್ಮ ಪ್ರೀತಿನ ನೀವು ಪಡೆದುಕೊಳ್ಳಿ ಪ್ರೀತಿಯಲ್ಲಿ ಮಾತು ಮೌನವಾದಾಗ ಇಂತಹ ಕಥೆಗಳು ಸೃಷ್ಟಿಯಾಗುತ್ತವೆ.

About admin

Check Also

ಯಡಿಯೂರಪ್ಪಗೆ ತಮ್ಮ ಕುರ್ಚಿ ಬಿಟ್ಟುಕೊಟ್ಟ ಮುಖ್ಯಮಂತ್ರಿ ಕುಮಾರಸ್ವಾಮಿ..!

ಹೌದು ಇದೇನಪ್ಪ ಯಡಿಯೂರಪ್ಪಗೆ ಕುಮಾರಸ್ವಾಮಿ ಕುರ್ಚಿ ಬಿಟ್ಟುಕೊಟ್ಟಿದ್ದಾರೆ ಅಂದ್ರೆ ಎಲ್ಲರು ಶಾಕ್ ಆಗುವ ವಿಚಾರವೇ ಈ ಎಲ್ಲ ನಾಯಕರು ಚುನಾವಣೆ …

Leave a Reply

Your email address will not be published. Required fields are marked *