Breaking News
Home / ಇತ್ತೀಚಿನ ಸುದ್ದಿಗಳು / ಮುಗಿಲ ಮಲ್ಲಿಗೆ ಹೀಗೊಂದು ಪ್ರೇಮ ಕಥೆ, ಜೀವನದಲ್ಲಿ ಸಮಯ ಸಂದರ್ಭ ತುಂಬ ಮುಖ್ಯ..!

ಮುಗಿಲ ಮಲ್ಲಿಗೆ ಹೀಗೊಂದು ಪ್ರೇಮ ಕಥೆ, ಜೀವನದಲ್ಲಿ ಸಮಯ ಸಂದರ್ಭ ತುಂಬ ಮುಖ್ಯ..!

‌ಹೀಗೆ ಒಮ್ಮೆ ಅಮ್ಮನ ಬಲವಂತಕ್ಕೆ ಸ್ನಾನ ಮಾಡಿ ಕಾಲೇಜಿಗೆ ಹೊರಟೆ ಯಾವಾಗಲು ನನ್ನ ಸ್ನೇಹಿತ ಬೈಕ್ ಲಿ ನನ್ನ ಪುಕ್ಕಟೆಯಾಗಿ ಪಿಕ್ ಮಾಡೋಕೆ ಲೇಟ್ ಆಗಿ ಬರೋದು. ಸೋ ನಾನು ಪಕ್ಕದ ಅಂಗಡೀಲಿ ಸಿಗರೇಟ್ ತಗೊಂಡು ಅದಕ್ಕೆ ಮುತ್ತು ಕೊಡೋದು ಅದರಿಂದ ಹೊರ ಬರೊ ಹೊಗೆ ನಂಗೆ ಲವ್ ಯು ಅನ್ನೋದು ದಿನ ನಡಿಯೋ ಪ್ರಸಂಗ.

ಆದರೆ ಅಂದು ಎದುರುಗಡೆ ಬಸ್ ಸ್ಟಾಪ್ ಲಿ ಮಲ್ಲಿಗೆ ಹೂ ಮುಡಿದು ನಿಂತ ಹುಡುಗಿ ಕಣ್ಣಿಗೆ ಬೀಳೋಕು ಅಂಗಡಿ ಎಫ್ ಎಮ್ ಲಿ ಬಂದ “ನೀ ಮುಡಿದ ಮಲ್ಲಿಗೆ ಹೂವಿನ ಮಾಲೆ ನನಗೆಂದೆ ಬರೆದ ಪ್ರೇಮದ ಓಲೆ ” ಅನ್ನೊ ಹಾಡು , ಬೇಡ ಅಂದ್ರು ಸಿಗರೇಟ್ ಜೊತೆ ಬ್ರೇಕ್ ಅಪ್ ಮಾಡಕೊಂಡು ಅದನ್ನ ಕಾಲಲ್ಲಿ ತುಳಿದು ಅವಳ ಮುಂದೆ ಡೀಸೆಂಟ್ ಆಗಿ ನಿಲ್ಲೋ ಥರ ಮಾಡ್ತು.

ಜೀನ್ಸ್ ಗರ್ಲ್ ಮಧ್ಯ ನನ್ನಮ್ಮ ಹೇಳ್ತಾ ಇದ್ದ ಅಪ್ಸರೆ ಮಿಸ್ ಆಗಿ ಬಸ್ ಗೆ ಕಾಯ್ತ ಇದ್ದಾಳೆ ಹೋಗಿ ಅವಳ ಕಣ್ಣಿನ ಕಾಡಿಗೆನಾ ಸ್ವಲ್ಪ ತೆಗೆದು ಕೆನ್ನೆ ಮೇಲೆ ದೃಷ್ಟಿಬಟ್ಟು ಇಡೋ ಆಸೆ ಬಂದ್ರು ಸುಮ್ಮನೆ ನಿಂತೆ , ನಾನು ಪೆಕ್ರ ಥರ ಸಿಗರೇಟು ಬಿಸಾಕಿದ್ದನ್ನ ವಾರೆಗಣ್ಣಲ್ಲಿ ನೋಡಿದ್ದ ಆಕೆ ತುಟಿ ಅಂಚಲ್ಲಿ ನಗ್ತಾ ಇದ್ರೆ ಸ್ನಾನ ಮಾಡು ಅಂತ ಬಲವಂತ ಮಾಡಿದ ನನ್ನ ಅಮ್ಮಾಗೆ ಮನಸಲ್ಲೆ ಥ್ಯಾಂಕ್ಸ್ ಹೇಳಕೊಂಡೆ.

ಅಷ್ಟರಲ್ಲೇ ದೆವ್ವ ಥರ ಬಂದ ನನ್ನ ಸ್ನೇಹಿತ ದೇವ ಸೋ ಬೈಕ್ ಹತ್ತಿ ಹೊರಟೆ ನಂತರ ದಿನ ಸ್ನಾನ ಮಾಡಿ ಬಸ್ ಸ್ಟಾಪ್ ಲಿ ದೇವ ಲೇಟ್ ಆಗ ಬರ್ಲಿ ಅಂತ ದೇವರ ಹತ್ರ ಕೇಳಕೊಳ್ಳೋದು ಆಕೆಯನ್ನ ನೋಡ್ತ ಹಲ್ಲುಗಿಂಜೋದು ಅದೆ ಕೆಲ್ಸ ಆಗಿತ್ತು ಹಾಗೆ ಬರ್ತಾ ಬರ್ತಾ ನೋಡಿ ನಗುತ್ತಾ ಊಟ ಆಯ್ತಾ ಹೇಗಿದ್ದೀಯಾ ಅಂತ ಸನ್ನೆಲೀ ಕೇಳೊ ಅಷ್ಟು ಮುದುವರೆದೆ ಬಿಟ್ರೆ ರೋಡ್ ಕ್ರಾಸ್ ಮಾಡಿ ಆಕೆ ಹೆಸರು ಕೇಳೊ ಧೈರ್ಯ ಬರಲೇ ಇಲ್ಲ.

ದಿನಾ ಹತ್ತು ನಿಮಿಷ ಅವಳನ್ನ ನೋಡಿದ್ರೆ ದಿನಾ ಪೂರ್ತಿ ಮುಗುಳುನಗೆ ಮೊಗದಲ್ಲಿ ಇರ್ತಾ ಇತ್ತು ಒಂದು ಸಲ ಇವಳು ದಿನಾ ನನ್ನ ಎಬ್ಬಿಸಿ ಕಾಫಿ ಕೊಟ್ಟು ಸ್ನಾನ ಮಾಡಿ ಅಂತ ಜಗಳ ಆಡ್ತ ಇದ್ರೆ ಜೀವನ ಎಷ್ಟು ಚೆನ್ನಾಗಿ ಇರುತ್ತೆ ಅನ್ನೊ ಕನಸು ರಾತ್ರಿ ಅಲ್ಲದೆ ಬೆಳಿಗ್ಗೆ ಕೂಡ ಕಾಡೋಕೆ ಶುರುವಾಗಿತ್ತು.

ಇಷ್ಟರಲ್ಲೇ ನನ್ನ ಪರೀಕ್ಷೆ ಬಂತು ಅವಳ ತುಟಿ ಅಂಚಲ್ಲೆ ಪರೀಕ್ಷೆ ಮುಗಿದು ಹೋಯ್ತು ಈಗ ಪರೀಕ್ಷೆ ಹೇಗೆ ಬರಿದಿದ್ದೆ ಅನ್ನೋ ಪ್ರಶ್ನೆ ಕೇಳಬೇಡಿ ಪಾಸ್ ಆಗೊದು ಗ್ಯಾರೆಂಟಿ ಇತ್ತು ಆಗಲೇ ರಜಾ ಪ್ರಾರಂಭ ಆಯ್ತು ಆಗ ಕೇರಳದ ನನ್ನ ಸ್ನೇಹಿತ ಮನೆಗೆ ಬಂದಿದ್ದೋನು ಹೇಗೂ ರಜಾ ಅಲ್ವಾ ಅಂತಾ ಏಕಾಏಕಿ ಕರಕೊಂಡು ಹೋದ.

ಸೋ ಅವಳಿಗೆ ಒಂದು ಸಾರಿ ಸನ್ನೇಲಿ ಕೂಡ ಹೇಳೊ ಅವಕಾಶವನ್ನು ಅವನು ಕೊಡಲಿಲ್ಲ ಹೀಗೆ ಕೇರಳಾಗೆ ಹೋದ್ರು ಮನಸು ಮಾತ್ರ ಆ ಬಸ್ ಸ್ಟಾಪ್ ಲಿ ಇತ್ತು ಆದರೆ ಎರಡು ತಿಂಗಳು ಮುಗಿಯೋವರೆಗು ಬೆಂಗಳೂರಿಗೆ ಬರೋಕೆ ಅವನು ಬಿಡ್ತಾ ಇರ್ಲಿಲ್ಲ , ಇದೆ ಸಮಯದಲ್ಲಿ ನನ್ನ ಗುರು ಅಂತ ಭಾವಿಸೊ ನನ್ನ ಸ್ನೇಹಿತ ಆನಂದ್ ಕಾಲ್ ಮಾಡಿ ಮದುವೆ ಫಿಕ್ಸ್ ಆಗಿದೆ ಈ ತಿಂಗಳು 24 ಗೆ ಮದುವೆ ಮಿಸ್ ಮಾಡದೆ ಬಾ ಅಂತ ಹೇಳಿದ್ರು.

ಆಗ್ಲೇ ನನ್ನ ಹುಡುಗಿ ನೋಡಿ ತಿಂಗಳಾಗಿತ್ತು ಸೋ ಮದುವೆ ಕಾರಣ ಹೇಳಿ ಬೆಂಗಳೂರಿಗೆ ಹೊರಡುವ ಅಂದುಕೊಂಡೆ ಆದರೆ ಆಗಲೆ ನೆನಪಾಗಿದ್ದು ನನ್ನ ಕೇರಳ ಸ್ನೇಹಿತನ ಬರ್ತ್ ಡೆ ಕೂಡ 24 ಅಂತಾ ಹೇಗೂ ಒಂದು ತಿಂಗಳ ವಿರಹ ಅನುಭವಿಸಿದ ನನಗೆ ಇನ್ನು 10 ದಿನ ಕಾಯೋದು ವಿರಹವೇದನೆಯೇ ನನ್ನ ಹಣೆಬರಹ ಅಂತ ತಿಳಿದು ಸುಮ್ಮನೆ ಆದೆ.

24 ರಾತ್ರಿ ಕೇರಳ ಬಿಟ್ಟು ಬೆಳಗಿನ ಜಾವ ಮನೆಗೆ ಬಂದ ನಾನು ಮಾಡಿದ ಮೊದಲ ಕೆಲಸಾನೇ ಬ್ಯಾಗ್ ಬಿಸಾಕಿ ಬಸ್ ಸ್ಟಾಪ್ ಕಡೆ ಹೆಜ್ಜೆ ಹಾಕಿದ್ದು ಒಂದು ತಿಂಗಳು ಮತ್ತು 24 ದಿನದ ವಿರಹ ಧೈರ್ಯ ವನ್ನ ಕೊಟ್ಟಿತ್ತು ಇವತ್ತು ಮನಸಿನ ಪ್ರೀತಿನ ಅವಳಮುಂದೆ ಹೇಳಿ ಅಮ್ಮಾ ಗೆ ಪರಿಚಯ ಮಾಡಿಸ್ಲೇಬೇಕು ಅಂತಾ ಡಿಸೈಡ್ ಆಗಿದ್ದೆ .

ಬಸ್ ಸ್ಟಾಪ್ ಲಿ ಅಂಗಡಿ ಹತ್ರ ಹೋಗ್ತ ಇದ್ದ ಹಾಗೆ ಅಂಗಡಿ ಅಂಕಲ್ ಯಾಕೋ 2 ತಿಂಗಳಿಂದ ನಾಪತ್ತೆ ಆಗಿದ್ದೆ ಅಂತ ಅಂದ್ರು ಏನಿಲ್ಲ ಅಂಕಲ್ ಕೇರಳಾಗೆ ಹೋಗಿದ್ದೆ ಅಂತಾ ಅಂದೆ ಆಗಾ ಅಂಕಲ್ ತಗೊಳೋ ನೀನು ದಿನಾ ನೋಡ್ತಾ ಇದ್ದ ಹುಡುಗಿ ತಿಂಗಳ ಮುಂಚೆನೇ ನಿನ್ನ ಕೇಳಿದ್ಲು, ನೀನು ಬರ್ತಾ ಇಲ್ಲ ಅಂದಿದ್ದಕ್ಕೆ ಬಂದ್ರೆ ಈ ಲೆಟರ್ ಕೊಡಿ ಅಂತಾ ಕೊಟ್ಟಿದ್ದಾಳೆ ಅಂತ ಹೇಳಿ ಲೆಟರ್ ಕೊಡ್ತಾ ಫೇಸ್ ಬುಕ್ ಯುಗದಲ್ಲಿ ಇನ್ನು ಲೆಟರ್ ಲಿ ಇದ್ದಿರಲ್ಲೋ ಅಂತಾ ಪೇಸ್ಬುಕ್ ಲೀ ಹಾಕೋ ಥರಾ ಕಮೆಂಟ್ ಮಾಡಿದ್ರು.

ಆದ್ರೆ ಅದಕ್ಕೆ ಉತ್ತರ ಕೊಡದೆ ಲೆಟರ್ ಓಪನ್ ಮಾಡಿದೆ “ನಿನ್ನ ಹತ್ರ ಮಾತು ಆಡಬೇಕು ಅರ್ಜೆಂಟ್ ಇದೆ ಈ ನಂಬರ್ ಗೆ ಕಾಲ್ ಮಾಡು” ಅನ್ನೋ ಲೈನ್ ಜೊತೆ ನಂಬರ್ ಕೂಡ ಇತ್ತು ಸಡನ್ ಆಗಿ ಕಾಲ್ ಮಾಡಿದೆ ಆದ್ರೆ ನಾಟ್ ರೀಚಬಲ್ ಅಂತಾ ಉತ್ತರ ಬಂತು ಅಷ್ಟರಲ್ಲೇ ಆನಂದ್ ಕಾಲ್ ಮಾಡಿ ಎಲ್ಲಿದಿಯಾ ಅಂದ್ರು ಇಲ್ಲೆ ಸಿಗರೇಟ್ ಅಡ್ಡ ಅಂದೆ , ಬರ್ತೀನಿ ಅಲ್ಲೆ ಇರು ಅಂತಾ ಹೇಳಿ ಕಾಲ್ ಕಟ್ ಮಾಡಿದ್ರು ಅವರು ಬರೋ ಅಷ್ಟರಲ್ಲಿ ಮತ್ತೆ ಅದೆಷ್ಟು ಸಲಾ ಅವಳಿಗೆ ಕಾಲ್ ಮಾಡೋಕೆ ಟ್ರೈ ಮಾಡಿದೆ ಗೊತ್ತಿಲ್ಲ.

ಅಷ್ಟರಲ್ಲೇ ಬಂದ ಆನಂದ್ ನನ್ನ ಸೋರಿಹೋಗಿದ್ದ ಮುಖ ನೋಡಿ ಏನಾಯ್ತೋ ಅಂದರು ಬೈಕಿಲಿ ಕೂತು ಎಲ್ಲ ವಿಚಾರ ಹೇಳಿದೆ ಅವರು ಹೇ ಬಿಡೊ ನಂಬರ್ ಇದೆ ಅಲ್ವ ಅಡ್ರೆಸ್ ಹುಡುಕಿಸೋಣ ಅದಕ್ಕು ಮುಂಚೆ ಅತ್ತಿಗೆನಾ ಪರಿಚಯ ಮಾಡ್ಕೋ ಅಂತ ಹೇಳಿ ಮನೆಗೆ ಕರಕೊಂಡು ಹೋದರು ಅಡುಗೆ ಮನೆಯಲ್ಲಿ ಇದ್ದ ಹೆಂಡತಿಯನ್ನ ಕರೆಯುತ್ತಾ ಫೆಸ್ವಾಷ್ ಮಾಡಿ ಬರ್ತೀನಿ ಅಂತ ಹೇಳಿ ಹೋದರು ಆಗ ಅಡುಗೆ ಮನೆ ಕರ್ಟನ್ ನ ಆ ಕಡೆ ನಿಂತಿದ್ದ ಅವರ ಮುಖ ನೋಡಲು ಎದ್ದು ಮುಂದೆ ಹೋದೆ…..

“ನೀ ಮುಡಿದ ಮಲ್ಲಿಗೆ ಹೂವಿನ ಮಾಲೆ “ಹಾಡಿನ ಸಾಲು ಮನಸಲ್ಲಿ ಮೂಡಿತು ,ಎಸ್ ….ಅದೆ ಹುಡುಗಿ ಯಾರನ್ನ ನೋಡೊಕೆ ಅಂತ ಮನಸ್ಸು ಚಡಪಡಿಸುತ್ತ ಇತ್ತೋ ಅದೆ ನನ್ನ ಪ್ರೀತಿ ಇಂದು ಅತ್ತಿಗೆಯಾಗಿ ಮುಂದೆ ನಿಂತಿತ್ತು,ಟವಲ್ ಲಿ ಮುಖ ಒರೆಸುತ್ತ ಆನಂದ ನನ್ನ ಪಕ್ಕ ಬಂದು ನಿಂತು ಕಣ್ಣಾಲಿಯ ಹನಿಗೆ ಅಣೆಕಟ್ಟು ಕಟ್ಟೊ ಹಾಗೆ ಮಾಡಿದ್ರು ಈ ವಿಚಾರದಲ್ಲಿ ಆ ಹುಡುಗಿ ಅದೃಷ್ಟವಂತೆ ಅಟ್ಲೀಸ್ಟ್ ಆ ಕರ್ಟನ್ ಅಡ್ಡ ಇದ್ದಿದ್ದಕ್ಕೆ ಎರಡು ಹನಿ ಕಣ್ಣೀರು ಅವಳ ಕೆನ್ನೆಯನ್ನು ತೋಯಿಸಿತ್ತು, ಅಲ್ಲಿಂದ ಕಾಲ್ಕಿತ್ತ ನನಗೆ ಮನೆ ತಲುಪುವ ಒಳಗೆ ಕಣ್ಣ ಹನಿಗಳು ಅಣೆಕಟ್ಟನ್ನು ಒಡೆದು ಜಲಪಾತವಾಗಿತ್ತು ಆ ನೋವಿಗೆ ಅಮ್ಮನ ತೊಡೆಯೇ ಆಸರೆಯಾಗಿತ್ತು.
-Aj

About admin

Check Also

ಯಡಿಯೂರಪ್ಪಗೆ ತಮ್ಮ ಕುರ್ಚಿ ಬಿಟ್ಟುಕೊಟ್ಟ ಮುಖ್ಯಮಂತ್ರಿ ಕುಮಾರಸ್ವಾಮಿ..!

ಹೌದು ಇದೇನಪ್ಪ ಯಡಿಯೂರಪ್ಪಗೆ ಕುಮಾರಸ್ವಾಮಿ ಕುರ್ಚಿ ಬಿಟ್ಟುಕೊಟ್ಟಿದ್ದಾರೆ ಅಂದ್ರೆ ಎಲ್ಲರು ಶಾಕ್ ಆಗುವ ವಿಚಾರವೇ ಈ ಎಲ್ಲ ನಾಯಕರು ಚುನಾವಣೆ …

Leave a Reply

Your email address will not be published. Required fields are marked *