Breaking News
Home / ಇತ್ತೀಚಿನ ಸುದ್ದಿಗಳು / ಏಳರಾಟ ಶನಿ ಮತ್ತು ಸಾಡೇಸಾತಿ ಎಂದರೇನು ಗೊತ್ತ ಇಲ್ಲಿದೆ ನೋಡಿ..!

ಏಳರಾಟ ಶನಿ ಮತ್ತು ಸಾಡೇಸಾತಿ ಎಂದರೇನು ಗೊತ್ತ ಇಲ್ಲಿದೆ ನೋಡಿ..!

ಶನೈಶ್ಚರನ ಬಗ್ಗೆ ಭಯ ಮತ್ತು ಭಕ್ತಿಗಳಿಗೆ ಅತ್ಯಂತ ಪ್ರಮುಖ ಕಾರಣ ಸಾಡೇಸಾತಿ. ಪ್ರತಿಯೊಬ್ಬರು ಈ ಕಾಲಖಂಡದ ಪ್ರಭಾವ ಮತ್ತು ಪರಿಣಾಮಗಳನ್ನು ಅನುಭವಿಸದೆ ಇರದಿರಲು ಅಸಾಧ್ಯ. ಸಮಸ್ತ ಗ್ರಹಮಂಡಲದಲ್ಲಿ ಶನಿಯ ಗತಿ ಅತ್ಯಂತ ಮಂದವಾಗಿರುವುದು ಸರ್ವವಿದಿತ. ಪ್ರತಿ ರಾಶಿಯಲ್ಲಿ ಶನಿಯ ವಾಸ್ತವ್ಯ ಎರಡೂವರೆ ವರ್ಷಗಳಷ್ಟಾಗಿರುತ್ತದೆ. ಪೂರ್ಣ ರಾಶಿಚಕ್ರದ ಒಂದು ಪರಿಕ್ರಮೆಗೆ ತೆಗೆದುಕೊಳ್ಳುವ ಕಾಲಾವಕಾಶ ಮೂವತ್ತು ವರ್ಷಗಳು. ಆದ್ದರಿಂದ ಯಾವುದೇ ವ್ಯಕ್ತಿಯ ಪೂರ್ಣ ಜೀವನಾವಧಿಯಲ್ಲಿ ಈ ಯೋಗ ಬರಲೇ ಬೇಕು.

ಜನ್ಮರಾಶಿ ಅಥವಾ ಚಂದ್ರರಾಶಿಯಿಂದ ದ್ವಾದಶನಾಗಿ ಶನಿಯು ಸಂಚರಿಸುವಾಗ ಸಾಡೇಸಾತಿಯು ಆರಂಭವಾಗುತ್ತದೆ. ಮುಂದೆ ಜನ್ಮರಾಶಿ ಮತ್ತು ನಂತರದ ರಾಶಿಯಲ್ಲಿ ಶನಿ ಸಂಚರಿಸುತ್ತಿರಲು ಇದು ಮುಂದುವರೆದು, ಏಳುವರೆ ವರ್ಷಗಳನಂತರ ಮುಕ್ತಾಯವಾಗುತ್ತದೆ. ಇದರರ್ಥ ಜನ್ಮರಾಶಿಯಿಂದ ಶನಿಯು ದ್ವಾದಶ, ಪ್ರಥಮ ಮತ್ತು ದ್ವಿತೀಯ ಈ ಸ್ಥಾನಗಳಲ್ಲಿ (ಅಥವಾ ರಾಶಿಗಳಲ್ಲಿ) ಸಂಚಾರಮಾಡುವ ಕಾಲಾವಧಿಯಷ್ಟು ಏಳರಾಟದ ಪೀಡೆಯಿರುತ್ತದೆ. ಶನಿ ಯಾವ ರಾಶಿಯಲ್ಲಿ ಇರುವನು ಅದು ಅವನ ಪ್ರಥಮರಾಶಿ.

ಶನಿ ರಾಶಿಪ್ರವೇಶದ ಕ್ಷಣ ದ್ವಾದಶಸ್ಥರಾಶಿಯ ಎಲ್ಲರಿಗೂ ಒಮ್ಮೆಯೆ ಸಾಡೇಸಾತಿ ಶುರುವಾಗುತ್ತದೆ ಎಂದು ಹೇಳಲಾಗದು. ಜನ್ಮಚಂದ್ರನ ಅಂಶಗಳಿಗೆ ದ್ವಾದಶಸ್ಥಸ್ಥಾನದಲ್ಲಿ ಶನಿಯು ಮಂದಾಗ ಈ ಯೋಗ ಎರ್ಪಡುತ್ತದೆ, ಇದೇ ಸಾಡೇಸಾತೀಯ ಸರಿಯಾದ ನಿರ್ಣಯ.

ಲಗ್ನಕುಂಡಲಿಯಲ್ಲಿ ಚಂದ್ರ, ಲಗ್ನ ಮತ್ತು ರವಿ ಯಾವ-ಯಾವ ಸ್ಥಾನ(ರಾಶಿ)ಗಳಲ್ಲಿ ಇರುತ್ತಾರೆಯೋ ಮತ್ತು ಶನಿಯ ಜೊತೆ ಅವರ ಸಂಬಂಧ ಎಂತಹುದೋ, ಇವುಗಳನ್ನು ಪರಿಶಿಲೀಸಿ ಸಾಡೇಸಾತಿಯ ಫಲವನ್ನು ಅರಿಯಬಹುದು. ಜನ್ಮಕುಂಡಲಿಯಲ್ಲಿ ಶನಿಯು ಉಚ್ಚ, ಸ್ವಕ್ಷೇತ್ರ, ಮಿತ್ರಕ್ಷೇತ್ರದಲ್ಲಿ ಅಥವಾ ಯೋಗಕಾರಕನಾಗಿದ್ದಲ್ಲಿ ಸಾಡೇಸಾತಿಯ ಕಷ್ಟಫಲದಲ್ಲಿ ರಿಯಾಯತಿಯಿರುವುದಾದರೂ ಪೂರ್ಣ ವಿಮುಕ್ತಿ ಇರುವುದಿಲ್ಲ. ಇದೇ ರೀತಿ ಶನಿಯೂ ಅಯೋಗಕಾರಕನೂ, ನೀಚನು, ಶತ್ರುಕ್ಷೇತ್ರಸ್ಥನೂ ಆಗಿದ್ದರೆ ಸಾಡೇಸಾತಿಯು ವಿಶೇಷವಾಗಿ ಅಶುಭ ಫಲಪ್ರದವಾಗಿರುತ್ತದೆ.

ದ್ವಾದಶಭಾವವು ಜಾತಕದಲ್ಲಿ ಕಾಲಿನ ಕಾರಕವಾಗಿರುತ್ತದೆ. ಈ ಸ್ಥಾನದಲ್ಲಿ ಶನಿಸಂಚಾರವಿದ್ದಾಗ ವ್ಯರ್ಥವಾದ ಸಂಚಾರ, ವ್ಯರ್ಥಸ್ಥಳಗಳಿಗೆ ಪ್ರವಾಸ, ವ್ಯಕ್ತಿಯು ಒಳ್ಳೆಯತನವನ್ನು ಬಿಟ್ಟು ದುರ್ಮಾರ್ಗಗಳ ವಿಷಯದಲ್ಲಿ ಪ್ರವೃತ್ತನಾಗುತ್ತಾನೆ. ಕಾಲಿನ ಸಂಬಂಧಿಯಾದ ರೋಗಗಳು, ಮೂಳೆಗಳ ಸಮಸ್ಯೆ ಮುಂತಾದ ದೈಹಿಕ ತೊಂದರೆಗಳುಂಟಾಗುತ್ತವೆ.

ಎನ್.ಶರತ್ ಶಾಸ್ತ್ರಿ
ಜ್ಯೋತಿಷ್ಯ ಪ್ರವೀಣ
9845371416

About admin

Check Also

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಅವರಿಂದ ಈ ದಿನದ ರಾಶಿ ಭವಿಷ್ಯ..!

ಪಂಡಿತ್ ಸುದರ್ಶನ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9663542672 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂ ನಿಮ್ಮ ಮನಸ್ಸಿನಲ್ಲಿ …

Leave a Reply

Your email address will not be published. Required fields are marked *