Breaking News
Home / ಇತ್ತೀಚಿನ ಸುದ್ದಿಗಳು / ಸಾವಿನ ನಂತರ ಮನುಷ್ಯ ಏನ್ ಆಗುತ್ತಾನೆ ಅಂತ ಈ ಗರುಡ ಪುರಾಣ ಹೇಳುತ್ತೆ ನೋಡಿ..!

ಸಾವಿನ ನಂತರ ಮನುಷ್ಯ ಏನ್ ಆಗುತ್ತಾನೆ ಅಂತ ಈ ಗರುಡ ಪುರಾಣ ಹೇಳುತ್ತೆ ನೋಡಿ..!

ಮೊನ್ನೆ ಆಸ್ಟ್ರಾಲ್ ಪ್ರೊಜೆಕ್ಷನ್ ಬಗ್ಗೆ ಬರೆದಿದ್ದೆ,ಇದನ್ನ ಓದಿದ ನನಗೆ ಪರಿಚಯ ಇರುವಂತಹ ಒಬ್ಬರು ಕಾಲ್ ಮಾಡಿ ಅದರ ಬಗ್ಗೆ ಬಹಳ ಸಂದೇಹಗಳನ್ನ ಕೇಳಿದ್ರು ನಾನೇನು ಅಷ್ಟು ಬುದ್ದಿವಂತನಲ್ಲದೆ ಇದ್ದರೂ…ನಾನು ತಿಳಿದು ಕೊಂಡಂತೆ ಅವರ ಸಂದೇಹಗಳಿಗೆ ಉತ್ತರವನ್ನ ಕೊಟ್ಟೆ ಅವರಿಗೂ ಬಹುಷಃ ಸಮಾಧಾನ ತರಿಸ್ತು ಅನ್ಸುತ್ತೆ ಅವರು ಕಾಲ್ ಕಟ್ ಮಾಡಿದ್ರು ಬಟ್ ಸಡನ್ ಆಗಿ ನನಗೆ ಒಂದು ಯೋಚನೆ ಬಂತು.

ಅದು ” ನಾವು ಸತ್ತ ಮೇಲೆ ಏನಾಗುತ್ತೆ obviously ಹೆಣನ ಸುಡುತ್ತಾರೆ ಇಲ್ಲ ಮಣ್ಣು ಮಾಡತ್ತಾರೆ but what about soul ದೇಹದ ಒಳಗಿನ ಪ್ರಜ್ಞೆಯ ಕಥೆಯೇನು ಸೋ ಇಂತಹ ವಿಚಾರಗಳಲೆಲ್ಲ ನಾನು ಮೊರೆ ಹೋಗುವಂತದ್ದು ನನ್ನ ತಾಯಿಯ ಬಳಿ, ನನ್ನ ಈ ಪ್ರಶ್ನೆಗೆ ನನ್ನ ತಾಯಿ ಏನನ್ನೂ ಉತ್ತರಿಸದೆ ಒಂದು ಪುಸ್ತಕವನ್ನು ಕೈಲಿಟ್ಟು ಅವರು ನ್ಯೂಸ್ ಪೇಪರ್ ಓದೋಕೆ ಶುರು ಮಾಡಿದರು. ಆ ಪುಸ್ತಕ ‘ಗರುಡ ಪುರಾಣ’ ನಾನು ನನ್ನ ಮನಸ್ಸಿನಲ್ಲಿ ಹಾಗಾದ್ರೆ ಈ ರಾತ್ರೀಯು ನಂಗೆ ಜಾಗರಣೆ ಅಂದುಕೊಂಡು ಅದನ್ನ ಓದೋಕೆ ಶುರು ಮಾಡಿದೆ.

ಗರುಡ ಪುರಾಣ ಅಂತ ಹೇಳಿದ ತಕ್ಷಣ ಕೆಲವರು ಹೆದರುತ್ತಾರೆ ಕಾರಣ ಈ ಪುಸ್ತಕವನ್ನ ತಂದೆ ತಾಯಿ ಸತ್ತಾಗ ಓದಬೇಕು ಮುಂಚೆಯೇ ಓದಬಾರದು ಎಂಬುದು ನಂಬಿಕೆ, ಆದರೆ ನನಗೆ ಇಂತಹ ನಂಬಿಕೆಗಳು ರುಚಿಸುವುದಿಲ್ಲ, ಗರುಡ ಪುರಾಣದ ಪ್ರಕಾರ ಗರುಡ ವಿಷ್ಣುವನ್ನ ಸತ್ತ ನಂತರ ಮನುಷ್ಯನ ಆತ್ಮ ಏನಾಗುತ್ತದೆ ಎಂದು ಕೇಳುತ್ತಾನೆ ಅದಕ್ಕೆ ಉತ್ತರಿಸುತ್ತಾನೆ ವಿಷ್ಣು ಸೋ ಇದಕ್ಕೆ ಗರುಡ ಪುರಾಣ ಎಂಬ ಹೆಸರು ಬರುತ್ತದೆ.

ಸಾಯುತ್ತಿರುವವನಿಗೆ ತನ್ನ ಕೊನೇ ಕ್ಷಣದಲ್ಲಿ ಏನು ಮಾತು ಬಾರದಂತಾಗುತ್ತದೆ,ಒಂದೇ ಸಾಲ ಸಾವಿರ ಚೇಳುಗಳು ಕುಕ್ಕಿದಂತಾಗುತ್ತದೆ. ಅಧೋಧ್ವಾರದಿಂದ ಪ್ರಾಣವಾಯು ಹೊರಹೋಗುತ್ತದೆ. ಅದು ಹೆಬ್ಬಟ್ಟಿನ ಗಾತ್ರವಿರುತ್ತದೆ, ಯಮದೂತರ ನಿರ್ದಯರಾಗಿ ಘೋರವಾದ ಪೆಟ್ಟುಗಳನ್ನು ಹಾಕುತ್ತ ಜೋರಗಿ ಎಳೆದೊಯ್ಯುತ್ತಾರೆ,ನೀರು-ನೆರಳುಗಳಿಲ್ಲದೆ ಮರುಭೂಮಿಯಲ್ಲಿ ಪ್ರಯಾಸದಿಂದ ಸಾಗುತ್ತಾನೆ.

48 ನಿಮಿಷಗಳಲ್ಲಿ ಯಮನ ಅರಮನೆ ತಲುಪುತ್ತಾನೆ ಅಲ್ಲಿ ಯಮಯಾತನೆಯನ್ನ ನೋಡುತ್ತಿಂದ್ದಂತೆ ಯಮದೂತರು ಆತನ ಅಂತಿಮ ಕ್ರಿಯೆ ನಡೆಯುವ ಜಾಗಕ್ಕೆ ಕರೆತರುತ್ತಾರೆ, ಹಸಿವಿನಿಂದ ಕಂಗಾಲಾದ ಆತನಿಗೆ ಆಹಾರವೆಂದು ಸಿಗುವುದು ಆತನ ಮಕ್ಕಳ ಪಿಂಡಾದಾನದಿಂದ.

ಹತ್ತು ದಿನ ನೀಡಿದ ಪಿಂಡಗಳು 4 ಭಾಗಗಳಾಗುತ್ತದೆ ಅದರಲ್ಲಿ 2 ದೇಹದ ಪಂಚಭೂತಗಳಿಗೆ, 3ನೆಯ ಭಾಗ ಯಮಕಿಂಕರರಿಗೆ,4ನೆಯ ಭಾಗ ಆತನಿಗೆ ಸಿಗುತ್ತದೆ. 9ದಿನ ಕಳೆದು 10ನೆಯ ದಿನ ಆತನಿಗೆ ಹಸ್ತ ಗಾತ್ರದ ದೇಹ ಸಿಗುತ್ತದೆ ಈ ದೇಹಕ್ಕೆ ಆತನ ಪುಣ್ಯ ಮತ್ತು ಪಾಪಗಳ ಆಧಾರದ ಮೇಲೆ ಶಿಕ್ಷೆಗಳು ಲಭಿಸಿ ನಂತರ ಮತ್ತೊಂದು ದೇಹ ಅಂದರೆ ಮತ್ತೊಂದು ಜನ್ಮ ಲಭಿಸುವುದು.ಇನ್ನೂ ಆತನ ಪ್ರಯಾಣ ಮತ್ತು ಯಮಶಿಕ್ಷೆಗಳ ವಿಚಾರ ಬಹಳವಿದೆ ಅದನ್ನ ಮತ್ತೊಂದು ದಿನ ತಿಳಿಸುತ್ತೇನೆ.

About admin

Check Also

ಯಡಿಯೂರಪ್ಪಗೆ ತಮ್ಮ ಕುರ್ಚಿ ಬಿಟ್ಟುಕೊಟ್ಟ ಮುಖ್ಯಮಂತ್ರಿ ಕುಮಾರಸ್ವಾಮಿ..!

ಹೌದು ಇದೇನಪ್ಪ ಯಡಿಯೂರಪ್ಪಗೆ ಕುಮಾರಸ್ವಾಮಿ ಕುರ್ಚಿ ಬಿಟ್ಟುಕೊಟ್ಟಿದ್ದಾರೆ ಅಂದ್ರೆ ಎಲ್ಲರು ಶಾಕ್ ಆಗುವ ವಿಚಾರವೇ ಈ ಎಲ್ಲ ನಾಯಕರು ಚುನಾವಣೆ …

Leave a Reply

Your email address will not be published. Required fields are marked *