Breaking News
Home / ಭಕ್ತಿ / ದೇವಸ್ಥಾನ (page 2)

ದೇವಸ್ಥಾನ

ಈ ಮಸಣಿಕಮ್ಮ ದೇವಿಯ ಮಹಿಮೆ ಗೊತ್ತಾದ್ರೆ ನೀವು ಖಂಡಿತ ಒಮ್ಮೆ ಈ ದೇವಾಲಯಕ್ಕೆ ಹೋಗ್ತೀರಾ ಅನ್ಸುತ್ತೆ..!

‘ಬೇಡಿದ ಭಕ್ತರನ್ನ ಕೈಬಿಡದೆ ಕಾಪಾಡುವ ಶ್ರೀ ಮಸನಿಕಾಮ್ಮ ದೇವಿ’ ಈ ದೇವಿಯ ಮಹಿಮೆಯನ್ನು ತಿಳಿದರೆ ನಿಜಕ್ಕೂ ಅಚ್ಚರಿ ಪಡುತ್ತೀರ. ಈ ದೇವಿಯ ದೈವಶಕ್ತಿಯ ಬಗ್ಗೆ ತಿಳಿಯೋಣ ಬನ್ನಿ. ತುಮಕೂರು, ಹಾಸನ, ಮಂಡ್ಯ, ಮೈಸೂರು, ಕೊಡಗು ಮತ್ತು ಇನ್ನಿತರ ಜಿಲ್ಲೆಗಳಿಂದ ಮತ್ತು ನೆರೆಯ ರಾಜ್ಯ ಕೇರಳದ ಯಾತ್ರಿಗಳು ಶ್ರೀ ಮಸನಿಕಾಮ್ಮ ದೇವಿಯನ್ನು ಪೂಜಿಸಲು ಈ ತೀರ್ಥಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ದೇವತೆ ಶ್ರೀ ಮಸನಿಕಾಮ್ಮ ದೇವರಿಗೆ ಪೂಜೆಗಳು ಮತ್ತು ಆಚರಣೆಗಳನ್ನು ಮಾಡಲು ಭಕ್ತರು …

Read More »

ಈ ಶಿವನ ದೇವಾಲಯಕ್ಕೆ ಭೇಟಿ ನೀಡಿ ಸ್ನಾನ ಮಾಡಿದರೆ ಈ ರೋಗ ವಾಸಿಯಾಗುತ್ತಂತೆ ನೋಡಿ..!

ನಾವು ಹಲವಾರು ಶಿವನ ದೇವಾಲಯಗಳನ್ನು ನೋಡಿದ್ದೇವೆ ಆದರೆ ಈ ಸೋಮೇಶ್ವರನ ದೇವಾಲಯ ಬಹಳ ವಿಶಿಷ್ಟವಾಗಿದೆ. ಈ ನೆಲ್ಲಿ ತೀರ್ಥ ಸೋಮೇಶ್ವರ ದೇವಾಲಯ ಇರುವುದು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಬಳಿಯಿದೆ . ಈ ದೇವಾಲಯದ ವಿಶೇಷತೆಯೇನೆಂದರೆ ಇದು ಒಂದು ಗುಹೆ ಒಳಗೆ ಇರುವ ಗುಹಾಂತರ ದೇವಾಲಯವಾಗಿದೆ ಆದ್ದರಿಂದ ಇದನ್ನು ಶ್ರೀ ನೆಲ್ಲಿ ತೀರ್ಥ ಸೋಮೇಶ್ವರ ಗುಹಾಂತರ ದೇವಾಲಯ ಎಂದು ಕರೆಯುತ್ತಾರೆ ಇದರ ಇತಿಹಾಸದ ಬಗ್ಗೆ ತಿಳಿಯುವುದಾದರೆ ಇದು ಅತ್ಯಂತ …

Read More »

ಈ ಹುಲಿಕಲ್ಲು ನರಸಿಂಹ ಸ್ವಾಮಿ ಇದನ್ನು ಬೇಡಿದರೆ ಖಂಡಿತವಾಗಿಯೂ ಈಡೇರಿಸುತ್ತಾನಂತೆ..!

ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಯ ಮಲೆನಾಡ ಮಡಿಲಲ್ಲಿ ಹಲವು ದೇಗುಲಗಳು ಕಾಣುತ್ತವೆ. ಇಂತಹ ದೇಗುಲಗಳಲ್ಲಿ ಶಿವ, ದುರ್ಗೆ,ಗಣಪತಿ ದೇವರುಗಳೇ ಅತ್ಯಧಿಕ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಹುಲಿಕಲ್ಲು ಇಂತಹ ಪರ್ವತ ಶ್ರೇಣಿಯ ಮಡಿಲಿನ ತಾಣವಾಗಿದ್ದು ಇಲ್ಲಿ ಸಾಕ್ಷಾತ್ ವಿಷ್ಣು ನರಸಿಂಹ ಅವತಾರದಲ್ಲಿ ನೆಲೆಯೂರಿದ್ದು ಆರಾಧಿಸುವ ಭಕ್ತ ಜನರರಿಗೆ ಹಲವು ವಿಧದಲ್ಲಿ ಬೆಂಬಿಡದೆ ಸಲಹುತ್ತಾ ತನ್ನತ್ತ ಸೆಳೆಯುತ್ತಿದ್ದಾನೆ. ಇಲ್ಲಿನ ದೇವರಾದ ಶ್ರೀಲಕ್ಷ್ಮೀ ನರಸಿಂಹ ದೇವರು ಅತಿ ಪ್ರಾಚೀನ ಕಾಲದ್ದಾಗಿದ್ದು ಇತ್ತೀಚೆಗೆ ಸ್ಥಳಾಂತರ …

Read More »

ಬಂಗಾರ, ಬೆಳ್ಳಿಯನ್ನು ಪ್ರಸಾದ ರೂಪದಲ್ಲಿ ನೀಡುವ ದೇಶದಲ್ಲಿನ ಏಕೈಕ ಮಹಾಲಕ್ಷ್ಮಿ ದೇವಾಲಯ ಎಲ್ಲಿದೆ ಗೊತ್ತಾ..!

ಯಾವುದೇ ದೇವಸ್ಥಾನದಲ್ಲಿ ದೇವರ ದರ್ಶನದ ಬಳಿಕ ಭಕ್ತರಿಗೆ ಲಾಡು, ಪುಳಿಯೋಗರೆ, ಸಕ್ಕರೆ ಪೊಂಗಲ್‌ನಂತಹ ಪ್ರಸಾದ ನೀಡುತ್ತಾರೆ. ಆದರೆ ಈ ಆಲಯದಲ್ಲಿ ಮಾತ್ರ ಬಂಗಾರ, ಬೆಳ್ಳಿಯನ್ನು ಪ್ರಸಾದವಾಗಿ ನೀಡುತ್ತಾರೆ! ಹೌದು ಇದು ಅಕ್ಷರಶಃ ನಿಜ. ಮಧ್ಯಪ್ರದೇಶದಲ್ಲಿನ ರತ್ಲಾಂ ಜಿಲ್ಲೆಯ ಮಹಾಲಕ್ಷ್ಮಿ ಆಲಯದಲ್ಲಿ ಬಂಗಾರ ಮತ್ತು ಬೆಳ್ಳಿಯನ್ನು ಪ್ರಸಾದವಾಗಿ ನೀಡಲಾಗುತ್ತದೆ. ಬಂಗಾರ ಮತ್ತು ಸೀರೆಗಳಿಗೆ ರತ್ಲಾಂ ಹೆಸರುವಾಸಿ. ವಿಂಧ್ಯ, ಸಾತ್ಪುರ ಪರ್ವತ ಶ್ರೇಣಿಗಳ ನಡುವೆ ನರ್ಮದಾ, ತಪತಿ ನದಿಗಳು ಸಮಾನಂತರವಾಗಿ ಪ್ರವಹಿಸುವ ಮಧ್ಯಪ್ರದೇಶದ …

Read More »

ಪ್ರಮುಖ ಹಿಂದೂ ದೇವರಲ್ಲಿ ಒಂದಾದ ಶ್ರೀ ಸೋಮನಾಥೇಶ್ವರ, ಇದರ ವಿಶೇಷತೆ ಏನು ಗೊತ್ತಾ..!

ಸೋಮನಾಥ ದೇವಾಲಯವು ಗುಜರಾತಿನ ಸೌರಾಷ್ಟ್ರದ ವೆರಾವಲ್ ಸಮೀಪದ ಪ್ರಭಾಸ್ ಪಟಾನಿನ ಪಶ್ಚಿಮ ಕರಾವಳಿಯಲ್ಲಿದೆ. ಪವಿತ್ರ ಮತ್ತು ಪ್ರಮುಖ ಯಾತ್ರಾಸ್ಥಳಗಳಲ್ಲಿ ಒಂದಾದ ಶಿವನ ಹನ್ನೆರಡು ಜ್ಯೋತಿರ್ಲಿಂಗ ದೇವಾಲಯಗಳಲ್ಲಿ ಒಂದಾಗಿದೆ. ಸೋಮನಾಥ ಎಂಬ ಪದವು ಅಕ್ಷರಶಃ ಚಂದ್ರನ ದೇವರು ರಕ್ಷಕನಾಗಿದ್ದಾನೆ. ಜ್ಯೋತಿರ್ಲಿಂಗಗಳನ್ನು ಸರ್ವೋಚ್ಚ, ಅವಿಭಜಿತ ರಿಯಾಲಿಟಿ ಎಂದು ಪರಿಗಣಿಸಲಾಗುತ್ತದೆ, ಅದರಲ್ಲಿ ಶಿವ ಭಾಗಶಃ ಕಾಣಿಸಿಕೊಳ್ಳುತ್ತದೆ. ಸೋಮನಾಥ ಅಕ್ಷರಶಃ ಅರ್ಥ ಚಂದ್ರ ದೇವರ ರಕ್ಷಕ. ಜ್ಯೋತಿರ್ಲಿಂಗ ಎಂದರೆ ಬೆಳಕಿನ ಲಿಂಗ. ಇತಿಹಾಸ ಭಾರತೀಯ ಪುರಾಣ …

Read More »

ಶ್ರೀ ಮಲೆಮಹದೇಶ್ವರ ಸ್ವಾಮಿಯ ಜನ್ಮವೃತ್ತಾಂತದ ಬಗ್ಗೆ ತಿಳಿಯಬೇಕೇ? ಇಲ್ಲಿದೆ ನೋಡಿ..!

ಮಹದೇಶ್ವರ ಹುಟ್ಟಿ ಬೆಳೆದ ಸಾಲು ಜಾನಪದ ಕಥೆಯ ಅನುಸಾರ ಮಹದೇಶ್ವರರ ಪಾಲಕರು ಶ್ರೀ ಚಂದ್ರಶೇಖರ ಮೂರ್ತಿ ಹಾಗು ಉತ್ತರಾಜಮ್ಮ ಎಂಬ ದಂಪತಿಗಳು. ಅವರು ಮಹದೇಶ್ವರರನ್ನು ಮೊದಲ ಬಾರಿಗೆ ಶ್ರೀಶೈಲದ ಮಲ್ಲಿಕಾರ್ಜುನ ಸ್ವಾಮಿಯ ಸನ್ನಿಧಿಯಲ್ಲಿ ನೋಡಿದರಂತೆ ಅದಾದ ನಂತರ ಸುತ್ತೂರು,ಕುಂತೂರು ಮಠಗಳ ಮಾರ್ಗವಾಗಿ ಈಗಿನ ಮಹದೇಶ್ವರ ದೇವಸ್ಥಾನದ ಪ್ರದೇಶಕ್ಕೆ ಬಂದು ತಮ್ಮ ವಾಸಯೋಗ್ಯ ಸ್ಥಳ ಅದೇ ಎಂದು ತೀರ್ಮಾನಿಸಿ ಅಲ್ಲಿ ಬೀಡು ಬಿಟ್ಟರಂತೆ. * ಬಾಲ ಯೋಗಿ ಮಹದೇಶ್ವರರು ಬೆಟ್ಟದಲ್ಲಿ ಸಿಕ್ಕ …

Read More »

ಈ ನಿಮಿಶಂಭಾ ದೇವಿಯ ಬಣ್ಣ ನಿಮಿಷಕ್ಕೊಮ್ಮೆ ಬದಲಾಗುತ್ತಂತೆ, ಅದು ಎಲ್ಲಿದೆ ಗೊತ್ತಾ..!

ಶ್ರೀರಂಗಪಟ್ಟಣ, ಮಂಡ್ಯ ಜಿಲ್ಲೆಯ ಕರ್ನಾಟಕ ರಾಜ್ಯ ಐತಿಹಾಸಿಕ ಪ್ರಸಿದ್ಧ ಪ್ರವಾಸಿ ಕೇಂದ್ರ / ಸ್ಥಳವಾಗಿದೆ, ಇದು ಶ್ರೀರಂಗಪಟ್ಟಣದ ಪಟ್ಟಣದಿಂದ ಗಂಜಾಂ ಹಳ್ಳಿಯಲ್ಲಿ ಕಾವೇರಿ ನದಿಯಲ್ಲಿ 2.5 ಕಿ.ಮೀ ದೂರದಲ್ಲಿದೆ. ಪ್ರಸಿದ್ದ ಶ್ರೀ ನಿಮಿಶಂಭಾ ದೇವಸ್ಥಾನವು ಅಗಾಮೋಕ್ತ ವ್ಯವಸ್ಥೆಯ ಪ್ರಕಾರ ನಿರ್ಮಿಸಲ್ಪಟ್ಟಿದ್ದು, ಶಿವಪನ್ ಚಯಾತಾನದ ಆಧಾರದ ಮೇಲೆ ವಿಗ್ರಹಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ಶ್ರೀಚಕ್ರ ಶ್ರೀ ಮೌಕಿಕೇಶ್ವರ ಸ್ವಾಮಿ ಮತ್ತು ಶ್ರೀ ಲಕ್ಷ್ಮಿನಾರಾಯಣ ಸ್ವಾಮಿ ದೇವರೊಂದಿಗೆ ಸೂರ್ಯ ದೇವ, ಗಣಪತಿ ಮತ್ತು ಹನುಮಾನ್ …

Read More »

ಈ ದೇವಸ್ಥಾನಕ್ಕೆ ಬಂದು ಪ್ರಾರ್ಥಿಸಿದರೆ ಕಂಕಣ ಭಾಗ್ಯ, ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತಂತೆ..!

ವಿವಾಹ ಭಾಗ್ಯ ವಿಳಂಬವಾಗಿರುವ ಮಂದಿ ಇಲ್ಲಿ ಬಂದು ಪ್ರಾರ್ಥಿಸಿ ಪೂಜೆ ಸಲ್ಲಿಸಿದರೆ ವಿವಾಹ ಭಾಗ್ಯ, ವಿವಾಹವಾಗಿದ್ದರೂ ಸಂತಾನ ಪ್ರಾಪ್ತಿಯಾಗದ ಮಂದಿಯೂ ಪ್ರಾರ್ಥಿಸಿದರೆ ದೈವ ಸಿದ್ಧಿಯಾಗುತ್ತದೆ. ಫಲ ಸಿಗುತ್ತದೆ. ಇಂತಹದ್ದೊಂದು ನಂಬಿಕೆ ಇರುವ ಕ್ಷೇತ್ರವೊಂದು ಇಲ್ಲಿದೆ. ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಮುಂಡೂರು ಎಂಬಲ್ಲಿನ ಪ್ರಾಕೃತಿಕ ಸೊಬಗಿನ ತಾಣದಲ್ಲಿ ಸದ್ದಿಲ್ಲದೆ ಆರಾಧಿಸಿಕೊಂಡು ಬರುತ್ತಿರುವ ಕ್ಷೇತ್ರ ಶ್ರೀ ಚಾಮುಂಡೇಶ್ವರಿ ದೇವಾಲಯ. ಈ ದೇವಸ್ಥಾನದಲ್ಲಿ ಕಾರಣಾಂತರಗಳಿಂದ ವಿವಾಹ ಭಾಗ್ಯ ವಿಳಂಬವಾಗಿರುವ ಮಂದಿ ಇಲ್ಲಿ ಬಂದು …

Read More »

ಈ ಹೊಳೆ ಆಂಜನೇಯ ಮಕ್ಕಳಿಲ್ಲದವರಿಗೆ ಸಂತಾನ ಫಲ ಮತ್ತು ಪ್ರೇಮ ವೈಫಲ್ಯಕ್ಕೆ ಪರಿಹಾರ ನೀಡುತ್ತಾನಂತೆ…!

ಮಂಡ್ಯ ಜಿಲ್ಲೆಯ ಮದ್ದೂರಿನ ಶಿಂಷಾ ನದಿ ದಂಡೆಯ ಮೇಲಿರುವ ಆಂಜನೇಯ ಸ್ವಾಮಿ ದೇವಸ್ಥಾನ ಮಂಡ್ಯ ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದು. ಈ ಕ್ಷೇತ್ರ ಹೊಳೆ ಆಂಜನೇಯ~ ಎಂದೇ ಪ್ರಸಿದ್ಧಿ ಪಡೆದಿದೆ. ಶ್ರಿಪಾದರಾಜರು ಮತ್ತು ವ್ಯಾಸರಾಜರು ಇಲ್ಲಿ ಆಂಜನೇಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಿದರೆಂದು ಎನ್ನಲಾಗಿದ್ದು, ಈ ಕಾರಣದಿಂದಾಗಿ ಈ ಕ್ಷೇತ್ರ ಪ್ರಾಮುಖ್ಯತೆ ಪಡೆದಿದೆ. ವ್ಯಾಸರಾಜರು ಮತ್ತು ಅವರ ವಿದ್ಯಾಗುರುಗಳಾದ ಶ್ರಿಪಾದರಾಜರು ದೇಶದ ಉದ್ದಗಲದಲ್ಲಿ 732 ಆಂಜನೇಯ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿದರು …

Read More »

‘ದಶರಥ ರಾಮೇಶ್ವರ ವಜ್ರ’ ದೇವಸ್ಥಾನ ಮಹಿಮೆಯನ್ನು ತಿಳಿದರೆ ನೀವು ತಪ್ಪದೆ ಭೇಟಿ ನೀಡುತ್ತೀರಾ..!

ಹೊಸದುರ್ಗ ಪಟ್ಟಣದಿಂದ ಸುಮಾರು 30ಕಿ.ಮೀ ದೂರದಲ್ಲಿರುವ ಗುಡ್ಡದ ನೇರಲಕೆರೆಯ ‘ದಶರಥ ರಾಮೇಶ್ವರ ವಜ್ರ’ ಅತ್ಯಂತ ಪ್ರಾಚೀನ ಕ್ಷೇತ್ರ. ವೃದ್ಧ ತಂದೆತಾಯಿಗಳನ್ನು ಹೆಗಲ ಮೇಲೆ ಹೊತ್ತು ಅವರಿಗೆ ತೀರ್ಥ ಕ್ಷೇತ್ರಗಳ ದರ್ಶನ ಮಾಡಿಸಿದ ಶ್ರವಣ ಕುಮಾರನ ಪ್ರಸಂಗ ‘ರಾಮಾಯಣ’ದಲ್ಲಿ ಉಲ್ಲೇಖವಾಗಿದೆ. ಮಾತಾ ಪಿತೃಗಳ ಸೇವೆಗೆ ಹೆಸರಾದವನು ಶ್ರವಣ ಕುಮಾರ. ಅಂಧರಾದ ತಂದೆ ತಾಯಿಗೆ (ತಂದೆ ತಾಂಡವಮುನಿ) ಪುಣ್ಯಕ್ಷೇತ್ರಗಳ ದರ್ಶನ ಮಾಡಿಸುವ ಸಂದರ್ಭದಲ್ಲಿ ಗುಡ್ಡದ ನೇರಲಕೆರೆ ಪ್ರದೇಶಕ್ಕೆ ಬರುತ್ತಾನೆ. ಬಾಯಾರಿದ್ದ ತಂದೆ ತಾಯಿಯರನ್ನು …

Read More »