Breaking News
Home / ಭಕ್ತಿ / ದೇವಸ್ಥಾನ (page 3)

ದೇವಸ್ಥಾನ

ವಿಶ್ವದ ಏಕೈಕ ಗರುಡ ದೇವಾಲಯವಿರುವುದು ಎಲ್ಲಿ ಮತ್ತು ಅದರ ಶಕ್ತಿ ಎಂತಹದು ಗೊತ್ತಾ..!

ವಿಶ್ವದಲ್ಲೆ ಏಕೈಕ ಗರುಡ ದೇವಾಲಯವಿದು. ಸೀತೆಯ ರಕ್ಷಣೆಗೆಂದು ಬಂದ ಜಟಾಯು ಪಕ್ಷಿಯನ್ನು ರಾವಣ ಕೊಲ್ಲಲ್ಪಟ್ಟ ಸ್ಥಳ. ಇಲ್ಲಿಗೆ ಒಮ್ಮೆ ಭೇಟಿ ನೀಡಿದ್ರೆ 8 ರೀತಿಯ ಸರ್ಪದೋಷಗಳು ಪರಿಹಾರವಾಗುತ್ತವೆ. ಹೀಗಾಗಿ ಇಲ್ಲಿಗೆ ಭಕ್ತಸಾಗರವೇ ಹರಿದು ಬರುತ್ತದೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕೊಲದೇವಿ ಗ್ರಾಮವೂ ಐತಿಹಾಸಿಕ ಹಿನ್ನೆಲೆ ಇರುವ ಗರುಡ ದೇವಸ್ಥಾನ ಹೊಂದಿರುವ ಗ್ರಾಮ. ವಿಶ್ವದಲ್ಲೆ ಏಕೈಕ ದೇವಸ್ಥಾನ ಇದಾಗಿದ್ದು, ಪುರಾಣಗಳ ಪ್ರಕಾರ ಮಹಾಭಾರತದ ವೇಳೆ ಅರ್ಜುನನಿಂದ ಇಲ್ಲಿ ಶ್ರೀ ಗರುಡ …

Read More »

ಗರ್ಭಗುಡಿಗೆ ಬಾಗಿಲು ಇಲ್ಲದ ಈ ತುಪ್ಪದ ಆಂಜನೇಯನ ಮಹಿಮೆ ಅಪಾರವಾದದ್ದು, ಈ ದೇವಸ್ಥಾನಕ್ಕೆ ನೀವು ಹೋಗಿ ಬನ್ನಿ..!

ಹೌದು ತುಪ್ಪದ ಆಂಜನೇಯ ಎಂದೇ ಪ್ರಸಿದ್ದಿ ಹೊಂದಿರುವ ಈ ಆಂಜನೇಯ ಸ್ವಾಮಿಯು ಬಳ್ಳಾಪುರ ಪೇಟೆ ಆರ್‌.ಟಿ.ಸ್ಟ್ರೀಟ್‌ ನಲ್ಲಿರುವ ‘ತುಪ್ಪದ ಆಂಜನೇಯ’ ಭಕ್ತರಿಗೆ ಬಲು ಹತ್ತಿರ. ಇದಕ್ಕೆ ಕಾರಣವೂ ಇದೆ. ಬಹುತೇಕ ದೇಗುಲಗಳಲ್ಲಿರುವಂತೆ ಇಲ್ಲಿನ ಗರ್ಭಗುಡಿಗೆ ಬಾಗಿಲು ಇಲ್ಲ. ಭಕ್ತರೇ ಗರ್ಭಗುಡಿ ಪ್ರವೇಶಿಸಿ ಪೂಜೆ ಸಲ್ಲಿಸುವ ಅವಕಾಶವಿದೆ. ತುಪ್ಪದ ಆಂಜನೇಯ ಸ್ವಾಮಿ ದೇವಾಲಯದ ದಕ್ಷಿಣ ಭಾಗದಲ್ಲಿ ಶ್ರೀ ರಂಗನಾಥ ಸ್ವಾಮಿ ದೇವಾಲಯವಿದೆ. ಶ್ರೀ ರಂಗನಾಥ ಸ್ವಾಮಿಗೆ ಕೈ ಮುಗಿಯುತ್ತಿರುವಂತೆ ಸ್ವಾಮಿಯ ವಿಗ್ರಹವಿದೆ. …

Read More »

ಸದಾ ಅನ್ನವನ್ನು ನೀಡುವ ತಾಯಿ ಹೊರನಾಡು ಅನ್ನಪೂರ್ಣೇಶ್ವರಿ..!

ಚಿಕ್ಕಮಗಳೂರು ಜಿಲ್ಲೆಯ ಹೊರನಾಡು ಕ್ಷೇತ್ರ ಅನ್ನದಾನದ ಆತಿಥ್ಯಕ್ಕೆ ಹೆಸರುವಾಸಿ. ಅನ್ನಪೂಣೇಶ್ವರಿ ಕ್ಷೇತ್ರದ ಅಧಿದೇವತೆ. ಅನ್ನದಾನ ಹಾಗೂ ಆತಿಥ್ಯ ಕ್ಷೇತ್ರದ ವಿಶೇಷ. ಅನ್ನಪೂರ್ಣೇಶ್ವರಿ ಸನ್ನಿಧಿಗೆ ಬರುವ ಪ್ರತಿಯೊಬ್ಬ ಭಕ್ತನೂ ಇಲ್ಲಿ ‘ಪ್ರಸಾದ’ ಸ್ವೀಕರಿಸುವುದು ಈ ಕ್ಷೇತ್ರದ ವಿಶೇಷ. ಹೊರನಾಡು ಬೆಂಗಳೂರಿನಿಂದ 330 ಕಿ.ಮೀ. ದೂರದಲ್ಲಿದೆ. ಹೊರನಾಡು ಕ್ಷೇತ್ರವನ್ನು ಅಗಸ್ತ್ಯ ಮಹರ್ಷಿಗಳು ಸ್ಥಾಪಿಸಿದರು ಎಂಬ ಐತಿಹ್ಯವಿದೆ. ಅನ್ನಪೂರ್ಣೇಶ್ವರಿ ತಾಯಿಯ ಕೃಪೆಗೆ ಪಾತ್ರರಾದವರಿಗೆ ಜೀವನದ ಉದ್ದಕ್ಕೂ ಅನ್ನ ಸಿಗುತ್ತದೆ ಎಂಬ ನಂಬಿಕೆ ಅನೇಕರಲ್ಲಿದೆ. ಹೀಗಾಗಿ …

Read More »

ಶ್ರೀ ಕಬ್ಬಾಳಮ್ಮ ದೇವಿಯ ಪವಾಡ ಮತ್ತು ಮಹತ್ವ ನಿಮಗೆ ಗೊತ್ತಾದ್ರೆ ಖಂಡಿತ ನೀವು ಸಹ ಒಮ್ಮೆ ಈ ದೇವಸ್ಥಾನಕ್ಕೆ ಭೇಟಿ ನೀಡುತ್ತೀರಾ..!

ಕಬ್ಬಾಳಮ್ಮ ದೇವಿಯು ತುಂಬ ಒಳ್ಳೆಯ ಪುಣ್ಯ ಕ್ಷೇತ್ರವಾಗಿದೆ ಇದರ ಮಹತ್ವ ಮತ್ತು ಪವಾಡದ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ. ಶ್ರೀ ಕಬ್ಬಾಳಮ್ಮ ದೇವಿಯ ದೇವಸ್ಥಾನ. ಕನಕಪುರದಿಂದ ಸಾತನೂರು ರಸ್ತೆಯಲ್ಲಿ ಸುಮಾರು ೨೦ ಕಿ. ಮೀ ದೂರ ಕ್ರಮಿಸಿದರೆ ಕಬ್ಬಾಳು ಕ್ಷೇತ್ರವಿದೆ. ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಭಕ್ತಾದಿಗಳು ಬಂದು ಕಬ್ಬಾಳಮ್ಮ ದೇವಿಯ ದರ್ಶನ ಪಡೆಯುತ್ತಾರೆ. ಇದೊಂದು ಪುರಾತನ ಇತಿಹಾಸವುಳ್ಳ ಪವಿತ್ರ ಕ್ಷೇತ್ರವಾಗಿದೆ. ತಾಯಿ ಕಬ್ಬಾಳಮ್ಮ ಬೇಡುವ ಭಕ್ತರನ್ನು ನಿರಾಶೆ ಗೊಳಿಸದೆ ಅವರ …

Read More »

ತಾಯಿ ಸಿಗಂದೂರು ಚೌಡೇಶ್ವರಿ ಮಹಿಮೆ ಅಪಾರ ನೀವು ಒಮ್ಮೆ ಹೋಗಿಬನ್ನಿ..!

ಸಿಗಂದೂರು ಸಾಗರ ತಾಲ್ಲೂಕಿನ ಶರಾವತಿ ಹಿನ್ನೀರಿನ ಮಡಿಲಲ್ಲಿದೆ. ಕಾಡಿನಿಂದ ಆವೃತ್ತವಾದ ಸಿಗಂದೂರು ಸಣ್ಣ ಊರು. ಗಲಾಟೆ, ಗದ್ದಲಗಳಿಲ್ಲದ ಪ್ರಶಾಂತ ಸ್ಥಳ. ಸಾಗರ ಪೇಟೆಯಿಂದ 45 ಕಿ.ಮೀ. ದೂರದಲ್ಲಿದೆ. ಸಿಗಂದೂರು ಸಮೀಪ ತುಮರಿ ಎಂಬ ಊರಿದೆ. ಸಿಗಂದೂರಿನ ಚೌಡೇಶ್ವರಿ ದೇವಿಗೆ ಸುಮಾರು 300 ವರ್ಷಗಳ ಇತಿಹಾಸವಿದೆ. ರಕ್ಷಣೆ ಕೋರಿ ಬರುವ ಭಕ್ತರನ್ನು ಹರಸಿ ರಕ್ಷಿಸುವ ತಾಯಿ ಎಂದು ಜನರು ಚೌಡೇಶ್ವರಿಯನ್ನು ನಂಬಿದ್ದಾರೆ. ಹೊರ ರಾಜ್ಯಗಳಿಂದ ಇಲ್ಲಿಗೆ ಭಕ್ತರ ಮಹಾಪೂರ ಹರಿದು ಬರುತ್ತದೆ. …

Read More »

ಸರ್ಪದೋಷ ನಿವಾರಕ ಶ್ರೀ ಕುಕ್ಕೆ ಸುಬ್ರಮಣ್ಯ ಸ್ವಾಮಿ..!

ಸುಬ್ರಹ್ಮಣ್ಯ ನಾಗಕ್ಷೇತ್ರ. ಸರ್ಪರಾಜ ವಾಸುಕಿ ಸುಬ್ರಹ್ಮಣ್ಯನೊಂದಿಗೆ ಸನ್ನಿಹಿತನಾಗಿ ಇಲ್ಲಿ ಪೂಜೆ ಪಡೆಯುತ್ತಾನೆ. ಆದ್ದರಿಂದಲೇ ನಾಗದೋಷ ಪರಿಹಾರಕ್ಕೆ ಕುಕ್ಕೆ ಸುಬ್ರಹ್ಮಣ್ಯ ಪ್ರಸಿದ್ಧಿ. ಮಕ್ಕಳಾಗದವರು, ಚರ್ಮರೋಗಗಳ ಸಮಸ್ಯೆ ಇರುವ ಸರ್ವ ಧರ್ಮೀಯರೂ ಕ್ಷೇತ್ರಕ್ಕೆ ಹರಕೆ ಹೊತ್ತು, ಸಲ್ಲಿಸಿ ಕೃತಾರ್ಥರಾಗುತ್ತಾರೆ. ಕುಕ್ಕೆ ಸುಬ್ರಹ್ಮಣ್ಯ ಸುಬ್ರಹ್ಮಣ್ಯ ಹಿಂದೆ ದಟ್ಟಾರಣ್ಯವಾಗಿತ್ತು. ಇಲ್ಲಿನ ಮೂಲ ನಿವಾಸಿಗಳು ಮಲೆಕುಡಿಯರು. ಒಮ್ಮೆ ಅರಣ್ಯದಲ್ಲಿ ತಿರುಗಾಡುತ್ತಿದ್ದ ಮಲೆಕುಡಿಯರಿಗೆ ಕುಕ್ಕೆ (ಬುಟ್ಟಿ)ಯಲ್ಲಿ ಲಿಂಗವೊಂದು ಸಿಕ್ಕಿತು. ಅದನ್ನು ತಂದು ಸುಬ್ರಹ್ಮಣ್ಯದಲ್ಲಿ ಪೂಜಿಸತೊಡಗಿದರು. ಕುಕ್ಕೆಯಲ್ಲಿ ಲಿಂಗವನ್ನು ತಂದ …

Read More »

ಕಟೀಲು ದುರ್ಗಾಪರಮೇಶ್ವರಿ ತಾಯಿ ಬಗ್ಗೆ ನಿಮಗೆ ಗೊತ್ತಿಲ್ಲ ಅಂದ್ರೆ ಇಲ್ಲಿದೆ ನೋಡಿ ತಾಯಿಯ ಮಹಿಮೆ..!

ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಪುಣ್ಯ ಕ್ಷೇತ್ರಗಳಲ್ಲಿ ಶ್ರೀಶಕ್ತಿಪೀಠವಾಗಿರುವ ಕಟೀಲು ಪ್ರಮುಖವಾದ ಪುಣ್ಯಕ್ಷೇತ್ರ. ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ನದಿಯ ಮಧ್ಯ ಭಾಗದಲ್ಲಿರುವುದು ಈ ಕ್ಷೇತ್ರದ ವಿಶೇಷತೆ. ಪುರಾಣಗಳ ಪ್ರಕಾರ ಜಾಬಾಲಿ ಮಹರ್ಷಿಯ ಶಾಪದಿಂದ ಇಂದ್ರನ ಬಳಿಯಿದ್ದ ಕಾಮಧೇನುವಿನ ಮಗಳು ನಂದಿನಿ ನದಿಯಾಗಿ ಹರಿಯುತ್ತಾಳೆ. ಶಾಪ ವಿಮೋಚನೆಗಾಗಿ ಜಾಪಾಲಿ ಮಹರ್ಷಿಯ ಬಳಿ ಪ್ರಾರ್ಥಿಸಿದಾಗ ದುರ್ಗಾದೇವಿಯನ್ನು ಪ್ರಾರ್ಥಿಸಿದರೆ ಶಾಪ ವಿಮೋಚನೆಗೆ ದೇವಿಯೇ ಮಾರ್ಗ ಸೂಚಿಸುತ್ತಾಳೆಂದು ಜಾಬಾಲಿ ಮಹರ್ಷಿ ಸೂಚಿಸುತ್ತಾರೆ. ನಂದಿನಿ ನದಿ ಶಾಪವಿಮೋಚನೆಗಾಗಿ ದುರ್ಗಾಪರಮೇಶ್ವರಿಯಲ್ಲಿ …

Read More »

ಈ ಹೊಳೆ ಆಂಜನೇಯ ಮಕ್ಕಳಿಲ್ಲದವರಿಗೆ ಸಂತಾನ ಫಲ ಮತ್ತು ಪ್ರೇಮ ವೈಫಲ್ಯಕ್ಕೆ ಪರಿಹಾರ ನೀಡುತ್ತಾನಂತೆ…!

ಮಂಡ್ಯ ಜಿಲ್ಲೆಯ ಮದ್ದೂರಿನ ಶಿಂಷಾ ನದಿ ದಂಡೆಯ ಮೇಲಿರುವ ಆಂಜನೇಯ ಸ್ವಾಮಿ ದೇವಸ್ಥಾನ ಮಂಡ್ಯ ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದು. ಈ ಕ್ಷೇತ್ರ ಹೊಳೆ ಆಂಜನೇಯ~ ಎಂದೇ ಪ್ರಸಿದ್ಧಿ ಪಡೆದಿದೆ. ಶ್ರಿಪಾದರಾಜರು ಮತ್ತು ವ್ಯಾಸರಾಜರು ಇಲ್ಲಿ ಆಂಜನೇಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸಿದರೆಂದು ಎನ್ನಲಾಗಿದ್ದು, ಈ ಕಾರಣದಿಂದಾಗಿ ಈ ಕ್ಷೇತ್ರ ಪ್ರಾಮುಖ್ಯತೆ ಪಡೆದಿದೆ. ವ್ಯಾಸರಾಜರು ಮತ್ತು ಅವರ ವಿದ್ಯಾಗುರುಗಳಾದ ಶ್ರಿಪಾದರಾಜರು ದೇಶದ ಉದ್ದಗಲದಲ್ಲಿ 732 ಆಂಜನೇಯ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿದರು …

Read More »